ಬೆಂಗಳೂರು: ಜನರು ಕೊವೀಡ್ ಸಂದಿಗ್ಧದ ಸ್ಥಿತಿಯಲ್ಲೂ ತಮ್ಮ ಖುಷಿಯನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಇಲ್ಲೊಂದು ಜೋಡಿಯೋ ಅಷ್ಟೇ ಕೊರೋನಾ ಸಂಕಷ್ಟದ ನಡುವಲ್ಲೂ ಮದುವೆಯನ್ನು ಸದಾನೆನಪಿನಲ್ಲಿರುವಂತೆ ಮಾಡಲು ಹಾಗೂ ಸಾಕಷ್ಟು ಜನರು ಪಾಲ್ಗೊಳ್ಳುವಂತೆ ಮಾಡಲು ವಿಮಾನದಲ್ಲೇ ಮದುವೆಯಾಗಿದ್ದಾರೆ.

ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲೇ ವರ-ವಧುವಿನ ಕುತ್ತಿಗೆಗೆ ತಾಳಿಕಟ್ಟಿದ್ದರೇ ,ನೆರೆದಿದ್ದ ಬಂಧುಗಳೆಲ್ಲ ಅಕ್ಷತೆ ಹೂವು ಹಾಕಿ ಶುಭಹಾರೈಸಿದ್ದಾರೆ. ಇಷ್ಟಕ್ಕೂ ಇಂತಹದೊಂದು ವಿಭಿನ್ನ ವಿವಾಹದ ಮೂಲಕ ವಧು-ವರರು ಹೊಸಬದುಕಿಗೆ ಕಾಲಿಟ್ಟಿದ್ದು, ಮಧುರೈನಿಂದ ಬೆಂಗಳೂರಿಗೆ ಬರುತ್ತಿದ್ದ ಫ್ಲೈಟ್ ನಲ್ಲಿ.

ತಮಿಳುನಾಡಿನ ಮಧುರೈನ ನಿವಾಸಿಗಳಾದ ರಾಕೇಶ್ ಮತ್ತು ದಕ್ಷಿಣಾ ಅದ್ದೂರಿಯಾಗಿ ಮದುವೆಯಾಗಲು ನಿರ್ಧರಿಸಿದ್ದರು.ಆದರೆ ಕೊರೋನಾ ಲಾಕ್ ಡೌನ್ ಇವರ ಆಸೆಗೆ ಅಡ್ಡಿಯಾಗಿತ್ತು. ಅದರಲ್ಲೂ ಕೇವಲ 50 ಜನರ ಸಮ್ಮುಖದಲ್ಲಿ ಸರಳ ಮದುವೆ ಇವರಿಗೆ ಇಷ್ಟವಿರಲಿಲ್ಲ.

ಹೀಗಾಗಿ ತಮ್ಮ ಮದುವೆಗಾಗಿ ಮೂರು ಗಂಟೆಗಳ ಕಾಲ ಆಕಾಶದಲ್ಲೇ ಹಾರುವಂತೆ ವಿಮಾನವನ್ನು ಬುಕ್ ಮಾಡಿದ ಈ ಜೋಡಿ ಮಧುರೈನಿಂದ ಬೆಂಗಳೂರಿಗೆ ಹಾರುವ ವಿಮಾನದಲ್ಲಿ, ವಿಮಾನ ಸರಿಯಾಗಿ ಮಧೈರು ಮೀನಾಕ್ಷಿ ದೇಗುಲದ ಮೇಲೆ ಹಾರುವಾಗ ಮಾಂಗಲ್ಯಧಾರಣೆ ಮಾಡುವ ಮೂಲಕ ಸಪ್ತಪದಿ ತುಳಿದಿದ್ದಾರೆ.

ಹೀಗೆ ರಾಕೇಶ್ ಹಾಗೂ ದಕ್ಷಿಣಾ ಮದುವೆಯಾದ ವಿಡಿಯೋ ದುಂತು ರಮೇಶ್ ಎಂಬುವವರ ಟ್ವೀಟರ್ ನಲ್ಲಿ ಅಪ್ಲೋಡ್ ಆಗಿದ್ದು, ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡಿದ್ದು, ವರನು ತಾಳಿಕಟ್ಟಿ ನೆರೆದ ಬಂಧುಗಳು ಅಕ್ಷತೆ ಹಾಕಿದ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ.
ತಮಿಳುನಾಡಿನಲ್ಲಿ ಕೊರೋನಾ ಸೋಂಕಿನ ತೀವ್ರತೆಯಿಂದಾಗಿ ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಈ ಜೋಡಿ ಇಂತಹದೊಂದು ವಿಭಿನ್ನ ಪ್ರಯತ್ನದ ಮೂಲಕ ಹೊಸ ಜೀವನ ಆರಂಭಿಸಿದೆ. ಈ ಮದುವೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆ ಬರೋಬ್ಬರಿ. 1.6 ಲಕ್ಷ ಜನರು ವೀಕ್ಷಿಸಿದ್ದಾರೆ.

ಮದುವೆಗಾಗಿಯೇ ಕಾಯ್ದಿರಿಸಲಾಗಿದ್ದ ಈ ವಿಶೇಷ ವಿಮಾನದಲ್ಲಿ ದಕ್ಷಿಣಾ ಹಾಗೂ ರಾಕೇಶ್ ಕುಟುಂಬದ ಒಟ್ಟು 161 ಸದಸ್ಯರು ಪ್ರಯಾಣಿಸಿ ಮದುವೆಗೆ ಸಾಕ್ಷಿಯಾಗಿದ್ದಾರೆ.