ಭಾನುವಾರ, ಏಪ್ರಿಲ್ 27, 2025
HomeBreakingತಮಿಳುನಾಡಿನಲ್ಲಿ ರಂಗೇರಿದ ಚುನಾವಣಾ ಕಣ…! ತಡರಾತ್ರಿ ಕಮಲಹಾಸನ್ ಕಾರಿನ ಮೇಲೆ ದಾಳಿ..!!

ತಮಿಳುನಾಡಿನಲ್ಲಿ ರಂಗೇರಿದ ಚುನಾವಣಾ ಕಣ…! ತಡರಾತ್ರಿ ಕಮಲಹಾಸನ್ ಕಾರಿನ ಮೇಲೆ ದಾಳಿ..!!

- Advertisement -

ತಮಿಳುನಾಡಿನಲ್ಲಿ ಚುನಾವಣಾ ರಾಜಕೀಯ ಗರಿಗೆದರಿದ್ದು, ಬಹುಭಾಷಾ ನಟ ಹಾಗೂ ಮಕ್ಕಳ ನಿಧಿಮಯಂ ಪಕ್ಷದ ನಾಯಕ ಕಮಲ ಹಾಸನ್ ಕಾರಿನ ಮೇಲೆ ದಾಳಿ ನಡೆದಿದೆ. ಅದೃಷ್ಟವಶಾತ ಕಮಲಹಾಸನ್ ಗೆ ಯಾವುದೇ ಗಾಯಗಳಾಗಿಲ್ಲ.

ಕಾಂಚಿಪುರಂನಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಕಮಲಹಾಸನ, ಪ್ರಚಾರ ಮುಗಿಸಿ ಹೊಟೇಲ್ ಗೆ ಹಿಂತಿರುಗುತ್ತಿದ್ದ ವೇಳೆ ಅವರ ಕಾರಿನ ಮೇಲೆ ದಾಳಿ ನಡೆದಿದೆ. ಯುವಕನೊರ್ವ ಅವರ ಕಾರಿನ ಮೇಲೆ ದಾಳಿ ನಡೆಸಿದ್ದು, ಕಮಲಹಾಸನ್ ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಆದರೆ ಕಾರು ಜಖಂಗೊಂಡಿದೆ.

ದಾಳಿ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದಾಳಿಗೆ ಉದ್ದೇಶ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ದಾಳಿಯನ್ನು ಮಕ್ಕಳ್ ನಿಧೀಮಯಂ ಪಕ್ಷದ ನಾಯಕ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಎ.ಜಿ.ಮೌರ್ಯ ಖಂಡಿಸಿದ್ದು, ಟ್ವೀಟ್ ನಲ್ಲಿ ಈ ಹಲ್ಲೆ ಯತ್ನವನ್ನು ಪೊಲೀಸರು ಯಶಸ್ವಿಯಾಗಿ ತಡೆದಿದ್ದಾರೆ. ಆದರೆ ಇಂಥ ಶಕ್ತಿಗಳ ಗೊಡ್ಡು ಬೆದರಿಕೆಗೆ ಪಕ್ಷ ಅಂಜುವುದಿಲ್ಲ ಎಂದಿದ್ದಾರೆ.

RELATED ARTICLES

Most Popular