ತರಿಕೆರೆ : ದೇಶದಾದ್ಯಂತ ಪ್ರಯಾಣಿಕರ ಸುರಕ್ಷತೆಗಾಗಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಪೊಲೀಸರು ಕೂಡ ಹೆಲ್ಮೆಟ್ ಹಾಕದವರ ವಿರುದ್ದ ಕ್ರ,ಮಕೈಗೊಳ್ಳುತ್ತಿದ್ದಾರೆ. ಆದ್ರೆ ಇಲ್ಲಿಬ್ಬರು ಯುವಕರು ಬೈಕಿನಲ್ಲಿ ಹೋಗುತ್ತಿದ್ದಾಗ ಹೆಲ್ಮೆಟ್ ಫೈನ್ ತಪ್ಪಿಸಿಕೊಳ್ಳೋ ಭರದಲ್ಲಿ ಟಿಪ್ಪರ್ ಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಶಿವಮೊಗ್ಗ ಜಿಲ್ಲೆಯ ನವುಲೆ ನಿವಾಸಿಗಳಾಗಿರೋ ಮೋಹನ್ ಮತ್ತು ಕುಮಾರ್ ಎಂಬವರೇ ಸಾವನ್ನಪ್ಪಿದ ದುರ್ವೈವಿಗಳು. ಶಿವಮೊಗ್ಗದಲ್ಲಿ ನಡೆಯುತ್ತಿರೊ ಮಾರಿ ಜಾತ್ರೆಗೆ ನೆಂಟರನ್ನು ಕರೆಯೋದಕ್ಕೆ ಹೋಗುತ್ತಿದ್ರು. ಈ ವೇಳೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಸಮೀಪದ ಹುಣಸವಳ್ಳಿ ಬಳಿಯಲ್ಲಿ ಪೊಲೀಸರು ಹೆಲ್ಮೆಟ್ ಧರಿಸದ ವಾಹನಗಳನ್ನು ಅಡ್ಡಹಾಕುತ್ತಿದ್ರು. ಈ ವೇಳೆಯಲ್ಲಿ ಪೊಲೀಸರು ನಿಂತಿರುವುದನ್ನ ಕಂಡ ಮೋಹನ್ ಹಾಗೂ ಕುಮಾರ್ ಫೈನ್ ತಪ್ಪಿಸಿಕೊಳ್ಳೋ ಭರದಲ್ಲಿ ಎದುರಿನಿಂದ ಬರ್ತಿದ್ದ ಟಿಪ್ಪರ್ ಗೆ ಢಿಕ್ಕಿ ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರ ದೇಹಗಳು ಛಿದ್ರ ಛಿದ್ರವಾಗಿದೆ. ಈ ಭಾಗದಲ್ಲಿ ಹೆಲ್ಮೆಟ್ ತಪಾಸಣೆಯ ವೇಳೆಯಲ್ಲಿ ಅಪಘಾತವಾಗುತ್ತಿರೋದು ಇದೇ ಮೊದಲೇನಲ್ಲಾ. ಸಾಕಷ್ಟು ಅಪಘಾತಗಳು ನಡೆಯುತ್ತಲೇ ಇರುತ್ತದೆ. ಯುವಕರಿಬ್ಬರ ಸಾವಿಗೆ ಪೊಲೀಸರೇ ಹೊಣೆ ಅಂತಾ ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.