ನವದೆಹಲಿ : ತೆರಿಗೆದಾರರಿಗೆ ಕೇಂದ್ರ ಸರಕಾರ ಬಿಗ್ ರಿಲೀಫ್ ಕೊಟ್ಟಿದೆ. ವಾರ್ಷಿಕವಾಗಿ 5 ಕೋಟಿಗಿಂತ ಕಡಿಮೆ ವಹಿವಾಟು ನಡೆಸು ತೆರಿಗೆದಾರರು ಮುಂದಿನ ವರ್ಷದಿಂದ ಮಾಸಿಕ ರಿಟರ್ನ್ಸ್ (ಜಿಎಸ್ಟಿಆರ್ 3 ಬಿ ಮತ್ತು ಜಿಎಸ್ಟಿಆರ್ 1) ಸಲ್ಲಿಸುವ ಅಗತ್ಯವಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.

42 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ನಂತರ ಮಾತನಾಡಿದ ಅಜಯ್ ಭೂಷಣ್ ಜನವರಿ 1, 2021 ರಿಂದ ವಾರ್ಷಿಕ ವಹಿವಾಟು 5 ಕೋಟಿಗಿಂತ ಕಡಿಮೆ ಇರುವ ತೆರಿಗೆದಾರರು ಮಾಸಿಕ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂದಿದ್ದಾರೆ.

5 ಕೋಟಿ ವಹಿವಾಟು ನಡೆಸುವವರು ತ್ರೈಮಾಸಿಕ ಆದಾಯವನ್ನು ಮಾತ್ರ ಸಲ್ಲಿಸುತ್ತಾರೆ. ಇದು ಸಣ್ಣ ತೆರಿಗೆದಾರರಿಗೆ ದೊಡ್ಡ ಪರಿಹಾರವಾಗಲಿದೆ”ಎಂದು ಅವರು ಹೇಳಿದ್ದಾರೆ.