ಶ್ರೀನಗರ: ಜಮ್ಮುಕಾಶ್ಮೀರದ ನೌಗಮ್ ಪ್ರದೇಶದಲ್ಲಿ ಭಯೋತ್ಪಾದಕರು ಹಾಗೂ ಸೇನೆ ನಡುವೆ ನಡೆದ ಸಂಘರ್ಷದಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದು ಉರುಳಿಸಿದೆ.

ಮಂಗಳವಾರ ತಡರಾತ್ರಿ ಕಾರ್ಯಾಚರಣೆ ನಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಗಡಿಭದ್ರತಾ ಪಡೆ ಸುತ್ತುವರಿದಿತ್ತು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಭಯೋತ್ಪಾದಕನನ್ನು ಹತ್ಯೆ ಮಾಡುವಲ್ಲಿ ಸೈನಿಕರು ಯಶಸ್ವಿಯಾಗಿದ್ದಾರೆ.

ಎನ್ಕೌಂಟರ್ ನಲ್ಲಿ ಗುರುತು ಪತ್ತೆಯಾದ ಭಯೋತ್ಪಾದಕನನ್ನು ಹೊಡೆದು ಉರುಳಿಸಲಾಗಿದೆ. ಹೆಚ್ಚಿನ ವಿವರಗಳನ್ನು ನೀರಿಕ್ಷಿಸಲಾಗುತ್ತಿದೆ ಎಂದು ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ನೌಗಾಮನ ವಾಗೂರಾ ಪ್ರದೇಶದಲ್ಲಿ ರಾತ್ರಿ ಭಯೋತ್ಪಾದಕರ ಸುಳಿವಿನ ಹಿನ್ನೆಲೆಯಲ್ಲಿ ಸೈನಿಕರು ತುರ್ತು ಕಾರ್ಯಾಚರಣೆ ಕೈಗೊಂಡಿದ್ದರು.