ಸೋಮವಾರ, ಏಪ್ರಿಲ್ 28, 2025
HomeBreakingತಾಲಿಬಾನಿಗಳಿಗೆ ಹಣದ ನೆರವು ಬಂದ್ ! ಬಿಗ್‌ ಶಾಕ್‌ ನೀಡಿದ ವಿಶ್ವಬ್ಯಾಂಕ್

ತಾಲಿಬಾನಿಗಳಿಗೆ ಹಣದ ನೆರವು ಬಂದ್ ! ಬಿಗ್‌ ಶಾಕ್‌ ನೀಡಿದ ವಿಶ್ವಬ್ಯಾಂಕ್

- Advertisement -

ಕಾಬೂಲ್‌ : ತಾಲಿಬಾನಿಗಳ ಹಿಂಸೆ ಅನಾಚಾರಗಳು ದಿನೇ ದಿನೇ ಹೆಚ್ಚುತ್ತಿದೆ. ಅಫ್ಘಾನ್‌ ನಿವಾಸಿಗಳು ನಿಜವಾಗಿಯೂ ನರಕಯಾತನೆ ಅನುಭವಿಸುತ್ತಿದ್ದಾರೆ. ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ದೇಶದ ಪ್ರಜೆಗಳನ್ನು ಅಫ್ಘಾನಿಸ್ತಾನದಿಂದ ಹೊರತರಲು ಹರಸಾಹಸವನ್ನು ಮಾಡುತ್ತಿವೆ. ಹೀಗಿರುವಾಗ ತಾಲಿಬಾನ್‌ ಗಳಿಗೆ ವಿಶ್ವಬ್ಯಾಂಕ್‌ ನಿಂದ ಸಂಕಷ್ಟ ಎದುರಾಗಿದೆ.

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರರಿಗೆ ಇದೀಗ ವಿಶ್ವಬ್ಯಾಂಕ್ ಬಿಗ್ ಶಾಕ್ ನೀಡಿದ್ದು, ವಿಶ್ವಬ್ಯಾಂಕ್ ಅಫ್ಘಾನಿಸ್ತಾನಕ್ಕೆ ನೀಡುವ ಹಣಕಾಸು ನೆರವನ್ನು ಸ್ಥಗಿತಗೊಳಿಸಿದೆ. ಇದರಿಂದ ಉಗ್ರರಿಗೆ ಹಣಕಾಸಿನ ಸೌಲಭ್ಯ ದೊರೆಯುವುದಿಲ್ಲ.

ಇದನ್ನೂ ಓದಿ: ಅಫ್ಘಾನ್‌ನಲ್ಲಿ ಶವಗಳ ಮೇಲೂ ಅತ್ಯಾಚಾರ ! ಬಯಲಾಯ್ತು ತಾಲಿಬಾನಿಗಳ ನೀಚ ಕೃತ್ಯ

ಕಳೆದ ಕೆಲ ದಿನಗಳ ಹಿಂದಷ್ಟೇ ಐಎಂಎಫ್​ ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವನ್ನು ನಿಲ್ಲಿಸಿತ್ತು, ಇನ್ನೊಂದೆಡೆ ಅಮೆರಿಕಾದ ಬ್ಯಾಂಕ್​ಗಳಲ್ಲಿರುವ ಅಫ್ಘಾನಿಸ್ತಾನದ ಹಣವೂ ಜಪ್ತಿಯಾಗಿದೆ. ಇದೀಗ ವಿಶ್ವಬ್ಯಾಂಕ್ ಸಹ ಹಣಕಾಸು ನೆರವನ್ನು ನಿಲ್ಲಿಸಿದೆ.

ವಿಶ್ವಬ್ಯಾಂಕ್ ಅಫ್ಘಾನಿಸ್ತಾನಕ್ಕೆ 2002 ರಿಂದ 5.3 ಬಿಲಿಯನ್ ಡಾಲರ್ ಹಣವನ್ನು ನೀಡಿತ್ತು. ಇದೀಗ ಎಲ್ಲಾ ಬಗೆಯ ಹಣಕಾಸು ನೆರವು ಸ್ಥಗಿತಗೊಳಿಸಿದೆ. ಕಳೆದ ವಾರವಷ್ಟೇ ಅಫ್ಘಾನಿಸ್ತಾನಕ್ಕೆ ಹಣ ನೀಡದಿರಲು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್ ನಿರ್ಧಾರ ಮಾಡಿತ್ತು. ಇದೀಗ ವಿಶ್ವ ಬ್ಯಾಂಕ್​ ಕೂಡಾ ಹಣ ನೀಡದಿರಲು ನಿರ್ಧರಿಸಿರುವುದರಿಂದ ಅಫ್ಘಾನಿಸ್ತಾನದಲ್ಲಿ ಸಂಕಷ್ಟ ಹೆಚ್ಚಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಮುಂದುವರೆದ ಅಪ್ಘಾನ್ ಭಾರತೀಯ ರಕ್ಷಣೆಯ “ಆಫರೇಶನ್ ದೇವಿಶಕ್ತಿ” ಕಾರ್ಯಾಚರಣೆ

RELATED ARTICLES

Most Popular