ಈಗ ಥಿಯೇಟರ್ ಗಳಿಗಿಂತ ಹೆಚ್ಚು ಸದ್ದು ಮಾಡ್ತಿರೋದು ಒಟಿಟಿ. ಸ್ಟಾರ್ ನಟರ ಚಿತ್ರಗಳು ಒಟಿಟಿಯಲ್ಲಿ ತೆರೆಕಂಡು ದಾಖಲೆ ಬರೆಯುತ್ತಿವೆ. ಆದರೆ ಕನ್ನಡದಲ್ಲಿ ಮಾತ್ರ ಗುಣಮಟ್ಟದ ಒಟಿಟಿ ಕೊರತೆಯಿದ್ದು, ಆಹಾ ಒಟಿಟಿ ಈ ಕೊರತೆ ನೀಗಿಸುವ ಭರವಸೆ ಮೂಡಿಸಿದೆ.

ಭಾರತದ ಬಹುತೇಕ ಚಿತ್ರರಂಗಗಳು ತಮ್ಮದೇ ಆದ ಒಟಿಟಿ ಹೊಂದಿದೆ. ತೆಲುಗಿನಲ್ಲಿ ಆಹಾ ಒಟಿಟಿ ಫ್ಲ್ಯಾಟ್ ಫಾರಂ ಎನ್ನಿಸಿದ್ದರೇ, ಮಲೆಯಾಳಂನಲ್ಲಿ ಕೊಡೆ, ಬೆಂಗಾಲಿಯಲ್ಲಿ ಹೋಯ್ ಚೋಯ್, ತಮಿಳಿಗೆ ರೇಗಾಲ್ ಟಾಕೀಸ್ ಹೀಗೆ ಪ್ರತಿಯೊಂದು ಭಾಷೆಯಲ್ಲೂ ಒಂದೊಂದು ಒಟಿಟಿ ಸದ್ದು ಮಾಡ್ತಿದೆ.

ಆದರೆ ಕನ್ನಡದಲ್ಲಿ ಮಾತ್ರ ಹೇಳಿಕೊಳ್ಳುವಂತ ಗುಣಮಟ್ಟದ ಒಟಿಸಿ ಇಲ್ಲ. ಹಲವು ಚರ್ಚೆಗಳು ನಡೆದರೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಈಗ ಈ ಕೊರತೆಗೆ ಉತ್ತರ ಸಿಕ್ಕಿದ್ದು, ಎಲ್ಲಅಂದುಕೊಂಡಂತೆ ಆದರೇ ತೆಲುಗಿನ ಒಟಿಟಿ ಆಹಾ ಕನ್ನಡಕ್ಕೂ ತನ್ನ ವ್ಯಾಪ್ತಿ ವಿಸ್ತರಿಸಲಿದೆ.

ಆಹಾ ಒಟಿಟಿ ಸದ್ಯ ತೆಲುಗಿನಲ್ಲಿ ತನ್ನ ಸೇವೆ ನೀಡುತ್ತಿದ್ದು, ಮಲೆಯಾಳಂನಲ್ಲೂ ಆರಂಭಿಸಿದೆ. ಅಷ್ಟೇ ಅಲ್ಲ ಕನ್ನಡದಲ್ಲೂ ಒಟಿಟಿ ಸೇವೆ ಆರಂಭಿಸಲು ಆಸಕ್ತಿ ಹೊಂದಿದೆ. ಆಹಾ ಒಟಿಟಿಗಾಗಿ ಕುಡಿ ಎಡಮೈತೆ ವೆಬ್ ಸೀರಿಸ್ ನಿರ್ದೇಶಿಸಿರುವ ಕನ್ನಡದ ನಿರ್ದೇಶಕ ಪವನ್ ಕುಮಾರ್ ಸಂಗತಿ ಖಚಿತಪಡಿಸಿದ್ದಾರೆ.

ಆಹಾ ತೆಲುಗು ಒಟಿಟಿ ಹೊಂದಿರುವ ಕನ್ನಡ ಸಬ್ ಸ್ಕ್ರೈಬರ್ ಆಧಾರದ ಮೇಲೆ ಕನ್ನಡಕ್ಕೆ ಆಹಾ ಒಟಿಸಿ ತರುವ ನಿರ್ಧಾರ ಅಂತಿಮವಾಗಲಿದೆ ಎಂದು ಪವನ್ ಕುಮಾರ್ ಮಾಹಿತಿ ನೀಡಿದ್ದಾರೆ.

ತೆಲುಗಿನಲ್ಲಿ ಆಹಾ ದೊಡ್ಡಮಟ್ಟದಲ್ಲಿ ಹಿಟ್ ಆಗಿದ್ದು, ಹಲವು ಶೋಗಳು ಹಾಗೂ ಸಿನಿಮಾದ ಮೂಲಕ ಪ್ರಸಿದ್ಧಿಗೆ ಬಂದಿದೆ.