ಭಾನುವಾರ, ಏಪ್ರಿಲ್ 27, 2025
HomeBreakingS.S.Rajamouli:ವಿಮಾನ ನಿಲ್ದಾಣದಲ್ಲಿ ಕರಾಳ ಅನುಭವ…! ಅಸಮಧಾನ ವ್ಯಕ್ತಪಡಿಸಿದ ನಿರ್ದೇಶಕ ರಾಜಮೌಳಿ…!!

S.S.Rajamouli:ವಿಮಾನ ನಿಲ್ದಾಣದಲ್ಲಿ ಕರಾಳ ಅನುಭವ…! ಅಸಮಧಾನ ವ್ಯಕ್ತಪಡಿಸಿದ ನಿರ್ದೇಶಕ ರಾಜಮೌಳಿ…!!

- Advertisement -

ರಾಷ್ಟ್ರ ರಾಜಧಾನಿ ದೆಹಲಿಯ ವಿಮಾನ ನಿಲ್ದಾಣದ ಅವ್ಯವಸ್ಥೆ ಬಗ್ಗೆ ತೆಲುಗಿನ ಸಿನಿಮಾ ನಿರ್ದೇಶಕ ರಾಜಮೌಳಿ ಅಸಮಧಾನ ಹೊರಹಾಕಿದ್ದು, ಸೋಷಿಯಲ್ ಮೀಡಿಯಾದಲ್ಲಿ  ಸಾಕಷ್ಟು ಚರ್ಚೆಗೆ ಗುರಿಯಾಗಿದೆ.

ದೆಹಲಿ ಏರ್ಪೋರ್ಟ್ ಗೆ ಬಂದ ರಾಜಮೌಳಿ ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಕಂಗಾಲಾಗಿದ್ದು, ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ತಮಗಾದ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ, ಡಿಯರ್ ದೆಹಲಿ ಏಪೋರ್ಟ್, ನಾನು ಬೆಳಗ್ಗೆ 1 ಗಂಟೆಗೆ ಲುಫ್ಡಾನ್ಸಾದಿಂದ ಬಂದು ಇಳಿದೆ. ಬಂದ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟ್ ಫಾರ್ಮ್ ಭರ್ತಿ ಮಾಡಲು ನೀಡುತ್ತಾರೆ. ಆದರೆ ಇಲ್ಲಿ ಕುಳಿತು ಫಾರ್ಮ್ ತುಂಬಲು ಸೂಕ್ತ ವ್ಯವಸ್ಥೆ ಇಲ್ಲ.

ಪ್ರಯಾಣಿಕರು ನೆಲದ ಮೇಲೆ ಕುಳಿತು ಅಥವಾ ಗೋಡೆಯ ಮೇಲಿಟ್ಟು ಭರ್ತಿ ಮಾಡುತ್ತಾರೆ. ಇದಕ್ಕೆ ಟೇಬಲ್ ಕುರ್ಚಿ ಒದಗಿಸುವುದು ಒಂದು ಸರಳ ವ್ಯವಸ್ಥೆಯಾಗಿದೆ. ಇನ್ನು ವಿಮಾನ ನಿಲ್ದಾಣ ಬಿಟ್ಟು ಹೊರಬಂದರೆ ಗೇಟ್ ಗಳ ಬಳಿ ಬೀದಿನಾಯಿಗಳ ಕಾಟವಿದೆ.

ಮೊದಲೇ ವಿದೇಶಿಗರಿಗೆ ಭಾರತದ ಬಗ್ಗೆ ಆಸಕ್ತಿ ಕಡಿಮೆ ಇದೆ. ಇಂತಹುದೇ ಕಾರಣಕ್ಕೆ ಜನರು ಬೇಸರಿಸುತ್ತಾರೆ. ದಯವಿಟ್ಟು ಗಮನ ಹರಿಸಿ ಎಂದು ರಾಜಮೌಳಿ ಟ್ವೀಟ್ ನಲ್ಲಿ ಅವ್ಯವಸ್ಥೆಯನ್ನು ಎತ್ತಿಹಿಡಿದಿದ್ದಾರೆ.

https://twitter.com/ssrajamouli/status/1410809644214231044?s=08

ರಾಜಮೌಳಿ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಲವು ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣ ಅವ್ಯವಸ್ಥೆ ಹಾಗೂ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.

https://twitter.com/ssrajamouli/status/1410809645963247617?s=08

ಸದ್ಯ ಆರ್.ಆರ್.ಆರ್ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಾಜಮೌಳಿ ಇತ್ತೀಚಿಗಷ್ಟೇ ಆರ್.ಆರ್.ಆರ್.ಹೊಸ ಪೋಸ್ಟರ್ ಕೂಡ ರಿವೀಲ್ ಮಾಡಿದ್ದಾರೆ.

RELATED ARTICLES

Most Popular