ಮಂಗಳವಾರ, ಜೂನ್ 17, 2025
HomeBreakingTRADE MARK ವಿವಾದಕ್ಕೆ ಸಿಲುಕಿದ ಪತಂಜಲಿ : ಕೋರೊನಿಲ್ ಬ್ರಾಂಡ್ ನೇಮ್ ಬಳಕೆಗೆ ಹೈಕೋರ್ಟ್ ತಡೆಯಾಜ್ಞೆ

TRADE MARK ವಿವಾದಕ್ಕೆ ಸಿಲುಕಿದ ಪತಂಜಲಿ : ಕೋರೊನಿಲ್ ಬ್ರಾಂಡ್ ನೇಮ್ ಬಳಕೆಗೆ ಹೈಕೋರ್ಟ್ ತಡೆಯಾಜ್ಞೆ

- Advertisement -

ನವದೆಹಲಿ : ಕೊರೊನಾ ವೈರಸ್ ಸೋಂಕಿಗೆ ರಾಮಬಾಣವೆಂದೇ ಹೇಳಲಾಗುತ್ತಿದ್ದ ಪತಂಜಲಿಯ ಕೊರೊನಿಲ್ ಉತ್ಪನ್ನಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಟ್ರೇಡ್ ಮಾರ್ಕ್ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದ್ದು, ಕೊರೊನಿಲ್ ಬ್ರ್ಯಾಂಡ್ ನೇಮ್ ಬಳಕೆ ಮಾಡದಂತೆ ಮದ್ರಾಸ್ ಹೈಕೋರ್ಟ್ ಪತಂಜಲಿ ಸಂಸ್ಥೆಗೆ ನಿರ್ದೇಶನವನ್ನು ನೀಡಿದೆ.

Alvas1

ಪತಂಜಲಿ ದೇಶದಾದ್ಯಂತ ಆಯುರ್ವೇದಿಕ್ ಉತ್ಪನ್ನಗಳ ಮೂಲಕ ಮನೆ ಮಾತಾಗಿದೆ. ಅದ್ರಲ್ಲೂ ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ ಆವರಿಸುತ್ತಲೇ ಪತಂಜಲಿ ಸಂಸ್ಥೆಯ ಬಾಬಾ ರಾಮ್ ದೇವ್ ಕೊರೊನಿಲ್ ಅನ್ನೋ ಔಷಧವನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು. ಅಲ್ಲದೇ ಕೊರೊನಾ ವೈರಸ್ ಸೋಂಕಿಗೆ ಕೊರೊನಿಲ್ ರಾಮಬಾಣವೆಂದು ಘೋಷಣೆ ಮಾಡುತ್ತಿದ್ದಂತೆಯೇ ದೇಶದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಕೇಂದ್ರ ಸರಕಾರ ಆರಂಭದಲ್ಲಿ ಕೊರೊನಿಲ್ ಕೊರೊನಾ ವೈರಸ್ ಸೋಂಕಿಗೆ ಪರಿಹಾರವಲ್ಲ ಎಂದು ಹೇಳಿತ್ತು. ಅಲ್ಲದೇ ಇಮ್ಯುನಿಟಿ ಬೂಸ್ಟರ್ ಹೆಸರಲ್ಲಿ ಕೊರೊನಿಲ್ ಉತ್ಪನ್ನವನ್ನು ಲೈಸೆನ್ಸ್ ಪಡೆದಿರುವುದರಿಂದಾಗಿ ಕೊರೊನಿಲ್ ಅನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದಂತೆ ತಡೆಯೊಡ್ಡಿತ್ತು. ಕೊನೆಗೆ ಪತಂಜಲಿ ಇಮ್ಯುನಿಟಿ ಬೂಸ್ಟರ್ ಆಗಿ ಉತ್ಪನ್ನವನ್ನು ಮಾರಾಟ ಮಾಡುತ್ತಿತ್ತು.

Coronil Medicine

ಆದ್ರೀಗ ಕೊರೊನಿಲ್ ಉತ್ಪನ್ನದ ಮಾರಾಟಕ್ಕೆ ಮುಂದಾಗುತ್ತಿದ್ದಂತೆಯೇ ಟ್ರೇಡ್ ಮಾರ್ಕ್ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿದೆ. ತಮಿಳುನಾಡು ಮೂಲದ ರಾಸಾಯನಿಕಗಳ ತಯಾರಿಕಾ ಸಂಸ್ಥೆ ಆರೂಢ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ತಾನು 1993 ರಲ್ಲಿ ಕೊರೊನಿಲ್ ಬ್ರ್ಯಾಂಡ್ ರಿಜಿಸ್ಟಾರ್ ಮಾಡಿದ್ದು, ಪತಂಜಲಿ ಸಂಸ್ಥೆ ತನ್ನ ಟ್ರೇಡ್ ಮಾರ್ಕ್ ಉಲ್ಲಂಘಿಸಿದೆ ಎಂಬ ಆಧಾರದ ಮೇಲೆ ಮದ್ರಾಸ್ ಹೈಕೋರ್ಟಿನಿಂದ ಕೊರೊನಿಲ್ ಉತ್ಪನ್ನದ ಟ್ರೇಡ್ ಮಾರ್ಕ್ ಗೆ ತಡೆಯಾಜ್ಞೆ ತಂದಿದೆ.

Medras Highcourt

ಆ ಮೂಲಕ ಪತಂಜಲಿ ಉತ್ಪನ್ನ ಮಾರುಕಟ್ಟೆಯಲ್ಲಿ ಮತ್ತೊಂದು ಆಘಾತಕ್ಕೆ ಒಳಗಾಗಿದೆ. ಹೀಗಾಗಿ ಕೊರೊನಿಲ್ ಮಾರುಕಟ್ಟೆಯಲ್ಲಿ ಮಾರಾಟವಾಗುವುದಕ್ಕೆ ತಡೆಯುಂಟಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular