ಉಡುಪಿ : ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಉಡುಪಿಯಲ್ಲಿ ರಾಯಲ್ ಮಾಲ್ ವಸತಿ ಗೃಹದ ಕಟ್ಟಡ ಕುಸಿದಿದೆ. ಘಟನೆಯಲ್ಲಿ ಕಟ್ಟಡದಲ್ಲಿದ್ದವರು ಪವಾಡ ಸಧೃಶವಾಗಿ ಪರಾಗಿದ್ದಾರೆ.

ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿರುವ ರೋಯಲ್ ಮಾಲ್ ಕಟ್ಟಡ ಶಿಥಿಲಾವಸ್ಥೆಗೆ ತಲುಪಿತ್ತು. ನಿರಂತರವಾಗಿ ಸುರಿದ ಮಳೆಯಿಂದಾಗಿ ಕಟ್ಟಡದ ಗೋಡೆ ಕುಸಿದಿದೆ. ಘಟನೆಯಲ್ಲಿ ಕಟ್ಟಡದನೆಲ ಅಂತಸ್ತಿನಲ್ಲಿದ್ದ ಚಿಪ್ಸ್ ಅಂಗಡಿ, ಜನೌಷಧ ಕೇಂದ್ರ ಭಾಗಶಃ ಕುಸಿದಿದೆ.

ಕಟ್ಟಡ ಕುಸಿತವಾಗುತ್ತಿದ್ದಂತೆಯೇ ಕಟ್ಟಡದಲ್ಲಿದ್ದವರ ಹೊರಗೆ ಓಡಿ ಬಂದಿದ್ದಾರೆ. ಕಟ್ಟಡದ ಉಳಿದ ಭಾಗವೂ ಕುಸಿಯುವ ಭೀತಿ ಉಂಟಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿದ್ದು, ಸಂಚಾರವನ್ನು ಸುಗಮಗೊಳಿಸಿದ್ದಾರೆ. ಉಳಿದ ಕಟ್ಟಡವನ್ನು ತೆರವುಗೊಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ.