ಭಾನುವಾರ, ಏಪ್ರಿಲ್ 27, 2025
HomeBreakingಮತ್ತೊಂದು ಸದಭಿರುಚಿಯ ಧಾರಾವಾಹಿ ಸುಳಿವು ಕೊಟ್ಟ ಆರೂರು ಜಗದೀಶ್…! ಈ ಭಾರಿ ಸೀರಿಯಲ್ ಗೆ ಬರ್ತಿದ್ದಾರೆ...

ಮತ್ತೊಂದು ಸದಭಿರುಚಿಯ ಧಾರಾವಾಹಿ ಸುಳಿವು ಕೊಟ್ಟ ಆರೂರು ಜಗದೀಶ್…! ಈ ಭಾರಿ ಸೀರಿಯಲ್ ಗೆ ಬರ್ತಿದ್ದಾರೆ ಖ್ಯಾತ ನಟಿ..!!

- Advertisement -

ಕನ್ನಡ ಕಿರುತೆರೆಯ ಪ್ರೇಕ್ಷಕರಿಗೆ ಆರೂರು ಜಗದೀಶ್ ಹೆಸರು ಚಿರಪರಿಚಿತ. ತಾವು ನಿರ್ದೇಶಿಸಿದ ಎಲ್ಲ ಧಾರಾವಾಹಿಗಳಲ್ಲೂ ಪ್ರೇಕ್ಷಕರ ಮನಗೆದ್ದ ಆರೂರು ಜಗದೀಶ್ ಸದ್ಯ ಜೊತೆ ಜೊತೆಯಲಿ ಸೀರಿಯಲ್ ಮೂಲಕ  ಈ ಪರಂಪರೆ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲ ಹೊಸತೊಂದು ವಿಭಿನ್ನ ಹಾಗೂ ಸ್ಟಾರ್ ನಟಿಯ ಜೊತೆಗಿನ ಧಾರಾವಾಹಿ ನಿರ್ದೇಶನದ ಸುಳಿವುಕೊಟ್ಟಿದ್ದಾರೆ.

ಸದ್ಯ ಕನ್ನಡ ಕಿರುತೆರೆ ಲೋಕದಲ್ಲಿ ಹೈಯೆಸ್ಟ್ ವೀವ್ವರ್ಸ್ ದಾಖಲಿಸಿ ಮನಗೆದ್ದಿರೋ ಜೊತೆ ಜೊತೆಯಲಿ ಅಂತಹ ಧಾರಾವಾಹಿ ನೀಡಿದ ಆರೂರು ಜಗದೀಶ್ ಈಗಾಗಲೇ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿ ಯಶಸ್ವಿ ಸಾವಿರ ಎಪಿಸೋಡ್ ನಿರ್ಮಿಸಿ ಹೆಂಗಳೆಯರ ಮನಗೆದ್ದಿದ್ದಾರೆ.

ಜಿಕೆ ಹಾಗೂ ಮಯೂರಿಯಂತಹ ಜೋಡಿಯನ್ನು ಹಿಟ್ ಮಾಡಿದ ಅಶ್ವಿನಿ ನಕ್ಷತ್ರ, ಮುಗ್ಧ ಜೋಡಿಯ ಕತೆ ಹೇಳುವ ಜೋಡಿಹಕ್ಕಿ ಹೀಗೆ ಹಲವು ಪ್ರೇಕ್ಷಕರ ಮನಗೆದ್ದ ಕತೆಗಳನ್ನು ಕಟ್ಟಿಕೊಟ್ಟ ಜಗದೀಶ್ ಜೊತೆ ಜೊತೆಯಲಿ  ಧಾರಾವಾಹಿ ಮುಗಿಯುವ ಮುನ್ನವೇ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

ಆರೂರು ಜಗದೀಶ್ ನಿರ್ದೇಶನದಲ್ಲಿ ಹೊಸತೊಂದು ಧಾರಾವಾಹಿ ಝೀ ಕನ್ನಡದಲ್ಲಿ ಮೂಡಿ ಬರಲಿದ್ದು, ಈ ಧಾರಾವಾಹಿ ಮೂಲಕ ಸ್ಯಾಂಡಲ್ ವುಡ್ ನ ಎವ್ವರ್ ಗ್ರೀನ್ ಸ್ಟಾರ್ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ  ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಂತೆ.

ತಾಯಿಯೊಬ್ಬಳೇ ಮೂವರು ಹೆಣ್ಣುಮಕ್ಕಳನ್ನು ಬೆಳೆಸಿ,ಓದಿಸಿ,ದಡ ಮುಟ್ಟಿಸುವ ಕತೆಯನ್ನು ಹೇಳಲು ತಾಯಿ ಪಾತ್ರದಲ್ಲಿ ಉಮಾಶ್ರೀ ಬರಲಿದ್ದಾರಂತೆ. ಈಗಾಗಲೇ ಸೀರಿಯಲ್ ನ ಮುಹೂರ್ತವೂ ನಡೆದಿದ್ದು, ಚಿತ್ರೀಕರಣ ಆರಂಭವಾಗಿದೆಯಂತೆ. ಒಟ್ಟಿನಲ್ಲಿ ಕಿರುತೆರೆ ಪ್ರೇಕ್ಷಕರಿಗೆ , ಝೀ ಕನ್ನಡ ಅಭಿಮಾನಿಗಳಿಗೆ ಮತ್ತೊಂದು ಸಖತ್ ಮನೋರಂಜನೆಯ ಸೀರಿಯಲ್ ಸಿದ್ಧವಾಗುತ್ತಿದೆ.

RELATED ARTICLES

Most Popular