ನವದೆಹಲಿ : ಕಾಳಧನಕ್ಕೆ ಕಡಿವಾಣ ಹಾಕೋ ಸಲುವಾಗಿ ಕೇಂದ್ರ ಸರಕಾರ 2,000 ರೂಪಾಯಿ ನೋಟ್ ಜಾರಿಗೆ ತಂದಿತ್ತು. ಆದ್ರೆ ಕಳೆದೆರಡು ವರ್ಷಗಳಿಂದಲೂ 2000 ರೂಪಾಯಿಯ ನೋಟ್ ಬ್ಯಾನ್ ಆಗುತ್ತೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಲೇ ಇದೆ. ಆದ್ರೀಗ ನಿಜಕ್ಕೂ 2,000 ರೂಪಾಯಿ ಮುಖಬೆಲೆಯ ನೋಟಿನ ಮರುಚಲಾವಣೆ ಬಂದ್ ಆಗಿದೆ.

ನಿಮಗೆ ಆಶ್ವರ್ಯವಾದ್ರೂ ನಂಬಲೇ ಬೇಕು, ಇನ್ಮುಂದೆ ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ 2,000 ರೂಪಾಯಿಯ ನೋಟ್ ಸಿಗೋದಿಲ್ಲ. ಆದರೆ ಜನರ ಬಳಿಯಲ್ಲಿರೋ ನೋಟುಗಳನ್ನು ಬ್ಯಾಂಕುಗಳಲ್ಲಿ ತೆಗೆದುಕೊಳ್ಳಲಾಗುತ್ತದೆ. ಆದರೆ ಈ ನೋಟನ್ನು ಮರುಬಳಕೆ ಮಾಡುವಂತಿಲ್ಲ. ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ಸೂಚನೆಯನ್ನು ನೀಡಿದ್ದು, ಫೆಬ್ರವರಿ 7 ರಿಂದಲೇ 2,000 ರೂಪಾಯಿಯ ನೋಟುಗಳನ್ನು ಮರುಬಳಕೆ ಮಾಡದಂತೆ ಸೂಚಿಸಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಕಾಳಧನಿಕರಿಗೆ ಬಿಸಿಮುಟ್ಟಿಸೋ ನಿಟ್ಟಿನಲ್ಲಿ ಕೇಂದ್ರ ಸರಕಾರ 500 ಹಾಗೂ 1,000 ರೂಪಾಯಿಯ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಾಗಿತ್ತು. ಅಲ್ಲದೇ ಇದೇ ವೇಳೆಯಲ್ಲಿಯೇ 2,000 ರೂಪಾಯಿ ಮುಖಬೆಲೆಯ ನೋಟ್ ನ್ನು ಜಾರಿಗೆ ತರಲಾಗಿತ್ತು.

ಆದರೆ ಕಾಳಧನಿಕರು 2,000 ರೂಪಾಯಿ ನೋಟನ್ನು ಬಾರೀ ಪ್ರಮಾಣದಲ್ಲಿ ಸಂಗ್ರಹ ಮಾಡಿರೋ ಶಂಕೆಯನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿದೆ. ಹೀಗಾಗಿಯೇ 2,000 ರೂಪಾಯಿಯ ನೋಟಿನ ಮುದ್ರಣವನ್ನು ಈಗಾಗಲೇ ನಿಲ್ಲಿಸಿದ್ದು, ಇದೀಗ ನೋಟುಗಳ ಮರುಬಳಕೆಯನ್ನೂ ನಿಲ್ಲಿಸಲಾಗುತ್ತಿದೆ.