ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಹಾಗೂ ಕೈ ಪಾಳಯಕ್ಕೆ ಬಾರೀ ಮುಖಭಂಗವಾಗಿದೆ. 70 ಕ್ಷೇತ್ರಗಳ ಪೈಕಿ 53ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸೋ ಮೂಲಕ ಮತ್ತೊಮ್ಮೆ ದೆಹಲಿಯಲ್ಲಿ ಆಮ್ ಆದ್ಮಿ ಅಧಿಕಾರಕ್ಕೆ ಬರೋದು ಪಕ್ಕಾ ಆಗಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 67 ಸ್ಥಾನಗಳನ್ನು ಗೆದ್ದು ಬೀಗಿದ್ದ ಆಮ್ ಆದ್ಮಿ ಈಗಾಗಲೇ 53 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಬಾರಿ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಈಗಾಗಲೇ 16 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ ಕಳೆದ ಬಾರಿ 3 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಕೇವಲ 1 ಸ್ಥಾನಗಳಲ್ಲಿ ಮಾತ್ರವೇ ಮುನ್ನಡೆಯಲ್ಲಿದೆ.
70 ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಗೆಲ್ಲುವ ಪಕ್ಷ ದೆಹಲಿಯಲ್ಲಿ ಆಡಳಿತ ಮಾಡಲಿದೆ. ಹೀಗಾಗಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹಿನ್ನೆಲೆಯಲ್ಲಿ ಆಮ್ ಆದ್ಮಿ ಮೂರನೇ ಬಾರಿ ದೆಹಲಿಯ ಅಧಿಕಾರ ಹಿಡಿಯೋದು ಪಕ್ಕಾ ಆಗಿದೆ. ಅರವಿಂದ ಕೇಜ್ರಿವಾಲ್ ಸರಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳಿಗೆ ಜನ ಮಣೆ ಹಾಕಿದ್ದಾರೆ.
ದೆಹಲಿ ವಿಧಾನಸಭಾ ಕ್ಷೇತ್ರ ಒಟ್ಟು 70 ಕ್ಷೇತ್ರಗಳಿಗೆ ಕಳೆದ ಶನಿವಾರ ಚುನಾವಣೆ ನಡೆದಿತ್ತು. ಈ ಬಾರಿ ಶೇ.62.59 ರಷ್ಟು ಮತದಾನವಾಗಿತ್ತು. ಬೆಳಗ್ಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೇ ಬಹುತೇಕ ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದ ಆಪ್ ಕಳೆದೆರಡು ಅವಧಿಯಲ್ಲಿ ದೆಹಲಿಯನ್ನು ಆಳಿದ್ದ ಆಮ್ ಆದ್ಮಿ ಈ ಬಾರಿಯೂ ಪಾರುಪತ್ಯ ಮೆರೆದಿದೆ.
ರಾಜಧಾನಿಯಲ್ಲಿ ಮತ್ತೆ ಆಮ್ ಆದ್ಮಿ ಆರ್ಭಟ : 3ನೇ ಬಾರಿಗೆ ಮ್ಯಾಜಿಕ್ ಮಾಡಿದ ಕೇಜ್ರಿವಾಲ್
- Advertisement -