ಬೆಂಗಳೂರು: ಕರ್ನಾಟಕ ಬಜೆಟ್ಗೆ (Karnataka Budget 2023) ಆರಂಭವಾಗಿದ್ದು, ಇಂದು 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai State Budget 2023) ಬಜೆಟ್ ಮಂಡನೆ ಮಾಡಿದ್ದಾರೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿತ್ತು. ಕುವೆಂಪು ಕವನದ ಸಾಲು ಓದುತ್ತಾ ಸಿಎಂ ಬಜೆಟ್ ಭಾಷಣ ಶುರು ಮಾಡಿದ್ದಾರೆ. ಕುವೆಂಪು ಅವರು ನುಡಿದಂತೆ ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ. ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಿದೆ. ಹೊಸ ದೃಷ್ಟಿಕೋನದೊಂದಿಗೆ ಈ ಬಜೆಟ್ ಮಂಡಿಸುತ್ತಿದ್ದೇನೆ ಎಂದ ಬೊಮ್ಮಾಯಿ. ಈ ಬಾರಿ ಸಿಎಂ ಬೊಮ್ಮಾಯೊ ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 1,230 ಶಾಲಾ ಕೊಠಡಿ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುವರಿಯಾಗಿ 2022-2023ನೇ ಸಾಲಿನಲ್ಲಿ 1,230 ಶಾಲಾ ಕೊಠಡಿ ನಿರ್ಮಾಣ. ರಾಜ್ಯದಲ್ಲಿ ಹೊಸದಾಗಿ 7 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಇದ್ದರಿಂದಾಗಿ ವಿಶ್ವವಿದ್ಯಾಲಯದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದಂತೆ ಆಗುತ್ತದೆ. ಹಾಗೇಯೇ ವಿದ್ಯಾರ್ಥಿಗಳಿಗೆ ಓದಿನ ಕಡೆ ಹೆಚ್ಚಿನ ಆಸಕ್ತಿಯನ್ನು ತರುವಂತೆ ಆಗುತ್ತದೆ. ಹೆಚ್ಚಿನ ಜಿಲ್ಲೆಗಳಲ್ಲಿ ಶಿಕ್ಷಣಕ್ಕೆ ಕಟ್ಟಡದ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸಮಸ್ಯೆ ಆಗುತ್ತಿತ್ತು. ಇದ್ದರಿಂದಾಗಿ ಸರಕಾರಿ ವಿದ್ಯಾಸಂಸ್ಥೆಗೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ.
ಇದನ್ನೂ ಓದಿ : Fishermen Budget 2023 : ಬೈಂದೂರಿನಲ್ಲಿ ಸೀ ಪುಡ್ ಪಾರ್ಕ್ : ಬಜೆಟ್ ನಲ್ಲಿ ಮೀನುಗಾರರಿಗೆ ಸಿಕ್ಕಿದ್ದೇನು ?
ಇದನ್ನೂ ಓದಿ : Karnataka Budget 2023 : ಉತ್ತರ ಕನ್ನಡದ ಜನರಿಗೆ ಬೊಮ್ಮಾಯಿ ಗಿಫ್ಟ್: ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ ಮಾಡಲಾಗುವುದು. ಇದ್ದರಿಂದಾಗಿ ಈ ಜಿಲ್ಲೆಯಲ್ಲಿ ತಂತ್ರಜ್ಞಾನ ಶಿಕ್ಷಣಕ್ಕೆ ಪ್ರೋತ್ಸಾಹ ಸಿಕ್ಕಂತೆ ಆಗುತ್ತದೆ. ಇದ್ದರಿಂದ ಹೆಚ್ಚಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರಯೋಜನ ಕೂಡ ಆಗಲಿದೆ.
ಇದನ್ನೂ ಓದಿ : Bellary Mega Dairy : ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್ 2023 : ಬಳ್ಳಾರಿ ಮೆಗಾ ಡೈರಿಗೆ 100 ಕೋಟಿ ರೂ.
ಇದನ್ನೂ ಓದಿ : ಕರ್ನಾಟಕ ರಾಜ್ಯ ಬಜೆಟ್ 2023 : ಶೂನ್ಯ ಬಡ್ಡಿದರದಲ್ಲಿ ರೈತರಿಗೆ 5 ಲಕ್ಷ ರೂಪಾಯಿ ಸಾಲ : ರೈತರಿಗೆ ಬಂಪರ್ ಗಿಫ್ಟ್
Bommai State Budget 2023: Construction of additional 1,230 school rooms in the state