ಬೆಂಗಳೂರು: ಕರ್ನಾಟಕ ಬಜೆಟ್ಗೆ (Karnataka Budget 2023) ಆರಂಭವಾಗಿದ್ದು, ಇಂದು 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai State Budget 2023) ಬಜೆಟ್ ಮಂಡನೆ ಮಾಡಿದ್ದಾರೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿತ್ತು. ರಾಜ್ಯದ ಜನರ ನಿರೀಕ್ಷೆ ಹುಸಿ ಆಗದಂತೆ ಉತ್ತಮವಾದ ಬಜೆಟ್ ಮಂಡನೆಯನ್ನು ಮಾಡುತ್ತಿದ್ದಾರೆ. ಈ ಬಾರಿ ಸಿಎಂ ಬೊಮ್ಮಾಯೊ ರಾಜ್ಯ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ ಗಳಿಗೆ (SC, ST BPL card holders ) ಬರ್ಜರಿ ಗಿಫ್ಟ್‌ನ್ನು ನೀಡಿದ್ದಾರೆ. ಇದ್ದರಿಂದಾಗಿ ಈ ವರ್ಗದವರು ರಾಜ್ಯ ಬಜೆಟ್‌ನಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಂತಾಗಿದೆ.
ಸಿಎಂ ಬೊಮ್ಮಾಯಿ ಬಜೆಟ್‌ನಲ್ಲಿ ಎಸ್‌ಸಿ/ಎಸ್‌ಟಿ ವರ್ಗದವರಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಹೀಗಾಗಿ ರಾಜ್ಯದ ಎಸ್‌ಸಿ/ಎಸ್‌ಟಿ ವರ್ಗದವರಿಗೆ ಅದರಲ್ಲು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಇನ್ನು ಮುಂದೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದಾರೆ. ಇದ್ದರಿಂದ ಈ ವರ್ಗದವರನ್ನು ಕತ್ತಲೆಯಿಂದ ಬೆಳಕಿನೆಡೆ ಕರೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗೆಯೇ ಈ ಯೋಜನೆಯಿಂದ ಪ್ರತಿಯೊಬ್ಬರ ಮನೆಯಲ್ಲಿ ಬೆಳಕು ನೋಡುವಂತೆ ಆಗಿದೆ.
ಇದನ್ನೂ ಓದಿ : Karnataka Budget 2023 : ಉತ್ತರ ಕನ್ನಡದ ಜನರಿಗೆ ಬೊಮ್ಮಾಯಿ ಗಿಫ್ಟ್: ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್
ಇದನ್ನೂ ಓದಿ : Karnataka Budget 2023 : CRZ ಮಾನದಂಡ ಸರಳೀಕರಣ : ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ವಿಶೇಷ ಯೋಜನೆ
ಇದನ್ನೂ ಓದಿ : Bommai State Budget 2023 : ಬೊಮ್ಮಾಯಿ ರಾಜ್ಯ ಬಜೆಟ್ 2023 : ರಾಜ್ಯದಲ್ಲಿ ಹೆಚ್ಚುವರಿಯಾಗಿ 1,230 ಶಾಲಾ ಕೊಠಡಿ ನಿರ್ಮಾಣ
ಅಷ್ಟೇ ಅಲ್ಲದೇ ಈ ವರ್ಗದ ಮನೆಯಲ್ಲಿ ಓದುವ ಮಕ್ಕಳಿಗೆ ಈ ಯೋಜನೆಯಿಂದಾಗಿ ವಿದ್ಯಾಬ್ಯಾಸಕ್ಕೂ ಪ್ರೋತ್ಸಾಹ ನೀಡಿದಂತೆ ಆಗಿದೆ. ಎಸ್‌ಸಿ, ಎಸ್‌ಟಿ ಗುತ್ತಿಗೆದಾರರಿಗೆ ಶೇ 24ರವರೆಗೆ ಮೀಸಲಾತಿ ನೀಡಲಾಗುವುದು. 50 ಲಕ್ಷ ಮೊತ್ತದಿಂದ 1 ಕೋಟಿವರೆಗಿನ ಟೆಂಡರ್ನಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈಗಾಗಲೇ ಬಿಪಿಎಲ್ ಕಾರ್ಡುದಾರರಿಗೆ ಸಾಕಷ್ಟು ವಿಶೇಷ ಯೋಜನೆಗಳನ್ನು ನೀಡಿದ್ದಾರೆ. ಅದರೊಂದಿಗೆ ಯೋಜನೆಯ ಲಾಭದ ಪ್ರಯೋಜನವನ್ನು ನೀಡಿದ್ದಾರೆ.
ಇದನ್ನೂ ಓದಿ : Fishermen Budget 2023 : ಬೈಂದೂರಿನಲ್ಲಿ ಸೀ ಪುಡ್ ಪಾರ್ಕ್ : ಬಜೆಟ್ ನಲ್ಲಿ ಮೀನುಗಾರರಿಗೆ ಸಿಕ್ಕಿದ್ದೇನು ?
ಇದನ್ನೂ ಓದಿ : ಕರ್ನಾಟಕ ರಾಜ್ಯ ಬಜೆಟ್ 2023 : ಶೂನ್ಯ ಬಡ್ಡಿದರದಲ್ಲಿ ರೈತರಿಗೆ 5 ಲಕ್ಷ ರೂಪಾಯಿ ಸಾಲ : ರೈತರಿಗೆ ಬಂಪರ್ ಗಿಫ್ಟ್
CM Bommai State Budget 2023 : Free electricity for SC, ST BPL card holders