ಭಾನುವಾರ, ಏಪ್ರಿಲ್ 27, 2025
HomeBUDGETBellary Mega Dairy : ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್‌ 2023 : ಬಳ್ಳಾರಿ ಮೆಗಾ...

Bellary Mega Dairy : ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್‌ 2023 : ಬಳ್ಳಾರಿ ಮೆಗಾ ಡೈರಿಗೆ 100 ಕೋಟಿ ರೂ.

- Advertisement -

ಬೆಂಗಳೂರು: ಕರ್ನಾಟಕ ಬಜೆಟ್​​ಗೆ (Karnataka Budget 2023) ಆರಂಭವಾಗಿದ್ದು, ಇಂದು 10.15ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavarj Bommai) ಬಜೆಟ್ ಮಂಡನೆ ಮಾಡಿದ್ದಾರೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಾಗಿತ್ತು. ಕುವೆಂಪು ಕವನದ ಸಾಲು ಓದುತ್ತಾ ಸಿಎಂ ಬಜೆಟ್ ಭಾಷಣ ಶುರು ಮಾಡಿದ್ದಾರೆ. ಕುವೆಂಪು ಅವರು ನುಡಿದಂತೆ ಹೋಗುತಿದೆ ಹಳೆ ಕಾಲ, ಹೊಸ ಕಾಲ ಬರುತಲಿದೆ. ಬರುತಲಿದೆ ಹೊಸ ದೃಷ್ಟಿ, ಹಳೆಯ ಬಾಳು ಹೋಗುತಲಿದೆ, ಹೊಸ ಬಾಳು ಬರುತಿದೆ. ಹೊಸ ದೃಷ್ಟಿಕೋನದೊಂದಿಗೆ ಈ ಬಜೆಟ್ ಮಂಡಿಸುತ್ತಿದ್ದೇನೆ ಎಂದ ಬೊಮ್ಮಾಯಿ. ಹೈನುಗಾರಿಕೆಗೆ ಬೆಂಬಲ ಸನೀಡುವ ಸಲುವಾಗಿ ಬಳ್ಳಾರಿ ಮೆಗಾ ಡೈರಿಗೆ (Bellary Mega Dairy) 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಗೆ ಅನುದಾನ ಘೋಷಣೆ ಮಾಡಿದ್ದಾರೆ.

ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಬಜೆಟ್ ಗೆ ಸಿದ್ದರಾಮಯ್ಯ ವಿಭಿನ್ನ ಪ್ರತಿಭಟನೆ: ಕಿವಿ ಮೇಲೆ ಕೇಸರಿ ಹೂವಿಟ್ಟುಕೊಂಡು ಬಂದ ವಿಪಕ್ಷ ನಾಯಕ

ಇದನ್ನೂ ಓದಿ : Fishermen Budget 2023 : ಬೈಂದೂರಿನಲ್ಲಿ ಸೀ ಪುಡ್ ಪಾರ್ಕ್ : ಬಜೆಟ್ ನಲ್ಲಿ ಮೀನುಗಾರರಿಗೆ ಸಿಕ್ಕಿದ್ದೇನು ?

ಇದನ್ನೂ ಓದಿ : ಕರ್ನಾಟಕ ರಾಜ್ಯ ಬಜೆಟ್‌ 2023 : ಶೂನ್ಯ ಬಡ್ಡಿದರದಲ್ಲಿ ರೈತರಿಗೆ 5 ಲಕ್ಷ ರೂಪಾಯಿ ಸಾಲ : ರೈತರಿಗೆ ಬಂಪರ್ ಗಿಫ್ಟ್‌

ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಈ ಸೋಂಕಿನಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 55 ಕೋಟಿ ರೂ. ಮಂಜೂರು ಮಾಡಲಾಗಿದೆ.

CM Bommai State Budget 2023: Rs 100 crore for Bellary Mega Dairy.

RELATED ARTICLES

Most Popular