ಭಾನುವಾರ, ಏಪ್ರಿಲ್ 27, 2025
HomeBUDGETKarnaraka State Budget 2023: ಈ ಬಾರಿ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಯಾವ ಇಲಾಖೆಗೆ...

Karnaraka State Budget 2023: ಈ ಬಾರಿ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ; ಇಲ್ಲಿದೆ ಸಂಪೂರ್ಣ ಮಾಹಿತಿ

- Advertisement -

ಬೆಂಗಳೂರು : ಕರ್ನಾಟಕ ಬಜೆಟ್​​(Karnataka Budget 2023) ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai State Budget 2023) ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಸದ್ಯದಲ್ಲೇ ಚುನಾವಣೆ ಇರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಎಲ್ಲರೂ ಮೆಚ್ಚುವಂತಹ ಬಜೆಟ್‌ನ್ನು ರಾಜ್ಯದ ಮುಂದೆ ಇಟ್ಟಿದ್ದಾರೆ. ಕಳೆದ ಹಣಕಾಸು ವರ್ಷದಲ್ಲಿ ರಾಜ್ಯ ಬಜೆಟ್‌ ಸುಮಾರು 2.6 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡನೆ ಆಗಿದ್ದು, ಈ ಬಾರಿ ಬರೋಬ್ಬರಿ 3.9 ಲಕ್ಷ ಕೋಟಿ ಗಾತ್ರದ ಬಜೆಟ್​ ಮಂಡನೆ ಮಾಡಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಧ್ಯೆಯವನ್ನು ಇಟ್ಟುಕೊಂಡು ಮನ್ನಣೆ ನೀಡಲಾಗಿದೆ.

ಮುಂಬರುವ ಚುನಾವಣೆಯನ್ನು ಗುರಿಯಾಗಿ ಇಟ್ಟುಕೊಂಡು, ಬಜೆಟ್‌ ಬುನಾದಿ ಹಾಕಿರುವ ಬೊಮ್ಮಾಯಿ, ಜನ ಸಾಮಾನ್ಯರ ಮನಸ್ಸಿಗೆ ಮುದ ನೀಡುವುದಕ್ಕೆ ಮುಂದಾಗಿದ್ದಾರೆ. ಅದರಲ್ಲೂ ರಾಜ್ಯದ ಅತಿ ದೊಡ್ಡ ವಾಣಿಜ್ಯ ನಗರಿಯಾದ ಬೆಂಗಳೂರಿಗೆ ಈ ಬಾರಿ ಕೊಡುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಹೀಗಾಗಿ ರಾಜ್ಯದ ರಾಜಧಾನಿಯಲ್ಲಿ ಕೇಸರಿ ಭದ್ರಕ್ಕೆ ಬೊಮ್ಮಾಯಿ ದೊಡ್ಡ ಉಪಾಯವನ್ನೇ ಹೂಡಿದ್ದಾರೆ. ಇನ್ನು ಈ ರಾಜ್ಯ ಬಜೆಟ್‌ನಿಂದ ಯಾವ ಯಾವ ಇಲಾಖೆಗೆ ಎಷ್ಟೆಷ್ಟು ದುಡ್ಡು ಹಂಚಿಕೆ ಮಾಡಿದ್ದಾರೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಹಣ ?

  • ಶಿಕ್ಷಣ ಇಲಾಖೆ : 37 ಸಾವಿರದ 960 ಕೋಟಿ ರೂ.
  • ಜಲಸಂಪನ್ಮೂಲ ಇಲಾಖೆ : 22 ಸಾವಿರದ 854 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ ಇಲಾಖೆ : 20 ಸಾವಿರದ 494 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ : 17 ಸಾವಿರದ 938 ಕೋಟಿ ರೂ.
  • ಕಂದಾಯ ಇಲಾಖೆ: 15 ಸಾವಿರದ 943 ಕೋಟಿ ರೂ.
  • ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ : 15 ಸಾವಿರದ 151 ಕೋಟಿ ರೂ.
  • ಒಳಾಡಳಿತ & ಸಾರಿಗೆ ಇಲಾಖೆ : 14 ಸಾವಿರದ 509 ಕೋಟಿ ರೂ.
  • ಇಂಧನ ಇಲಾಖೆ : 13 ಸಾವಿರದ 803 ಕೋಟಿ ರೂ.
  • ಸಮಾಜಕಲ್ಯಾಣ ಇಲಾಖೆ : 11 ಸಾವಿರದ 163 ಕೋಟಿ ರೂ.
  • ಲೋಕೋಪಯೋಗಿ ಇಲಾಖೆ : 10 ಸಾವಿರದ 741 ಕೋಟಿ ರೂ.
  • ಕೃಷಿ & ತೋಟಗಾರಿಕೆ ಇಲಾಖೆ : 9 ಸಾವಿರದ 456 ಕೋಟಿ ರೂ.
  • ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ : 5 ಸಾವಿರದ 676 ಕೋಟಿ ರೂಪಾಯಿ
  • ಆಹಾರ ಇಲಾಖೆ : 4 ಸಾವಿರದ 600 ಕೋಟಿ ರೂ.
  • ವಸತಿ ಇಲಾಖೆ : 3 ಸಾವಿರದ 787 ಕೋಟಿ ರೂ. ಮೀಸಲಿಡಲಾಗಿದೆ.

ಇದನ್ನೂ ಓದಿ : Sports budget 2023: ಲೆಕ್ಕಕ್ಕುಂಟು ಆಟಕ್ಕಿಲ್ಲದ ರಾಜ್ಯ ಕ್ರೀಡಾ ಬಜೆಟ್‌

ಇದನ್ನೂ ಓದಿ : Irrigation Project Budget:‌ ವಿವಿಧ ನೀರಾವರಿ ಯೋಜನೆಗಳ ಜಾರಿಗೆ 25 ಸಾವಿರ ಕೋಟಿ ರೂ ಅನುದಾನ

ಇದನ್ನೂ ಓದಿ : Bommai budget 2023: ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣ ಸ್ಥಾಪನೆ

ಹೀಗೆ ಎಲ್ಲಾ ಕ್ಷೇತ್ರಗಳಿಗೂ ಕೊಡುಗೆ ಕೊಟ್ಟಿರುವ ಸಿಎಂ ಬೊಮ್ಮಾಯಿ, ರಾಜಕೀಯ ಲೆಕ್ಕಾಚಾರದೊಂದಿಗೆ ಬಜೆಟ್ ಮಂಡಿಸಿದ್ದಾರೆ. ಹಾಗೆಯೇ ಮುಂಬರುವ ಚುನಾವಣೆಯಲ್ಲಿ ಭರ್ಜರಿ ಮತ ಬೇಟೆಗಾಗಿ ಎಲ್ಲರಿಗೂ ಮೆಚ್ಚುಗೆ ಆಗುವ ರೀತಿಯಲ್ಲಿ ಬಜೆಟ್‌ ಮಂಡಿಸಿದ್ದಾರೆ.

Karnaraka State Budget 2023: How much grant to which department in CM Bommai budget this time; Here is the complete information

RELATED ARTICLES

Most Popular