ಜಾಗತಿಕ ಮಟ್ಟದ ದೈತ್ಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಸಂಪರ್ಕ ಸಾಧಿಸೋದಕ್ಕೆ, ಉದ್ಯಮ, ವ್ಯವಹಾರದ ವೃದ್ದಿಗೆ ಫೇಸ್ ಬುಕ್ ಅತ್ಯಂತ ಸರಳ ಸಾಧನೆ. ಆದ್ರೀಗ ಫೇಸ್ ಬುಕ್ ಬಳಕೆ ಮಾಡುವುದು ಎಷ್ಟು ಸೇಫ್ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಯಾಕೆಂದ್ರೆ ಫೇಸ್ ಬುಕ್ ನಲ್ಲಿ ಒಟ್ಟು 275 ಮಿಲಿಯನ್ ಬಳಕೆದಾರರ ಖಾತೆ ನಕಲಿ ಅನ್ನೋ ಮಾಹಿತಿ ಹೊರಬಿದ್ದಿದೆ.

ಫೇಸ್ ಬುಕ್ ನಲ್ಲಿ ಒಟ್ಟು 2.50 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರಿದ್ದಾರೆ. ದಿನದಿಂದ ದಿನಕ್ಕೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಅದರಲ್ಲೂ ವ್ಯವಹಾರವನ್ನು ವೃದ್ದಿಸಿಕೊಳ್ಳಲು ಜನರು ಹೆಚ್ಚಾಗಿ ಫೇಸ್ ಬುಕ್ ನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಭಾರತ, ಇಂಡೋನೆಷ್ಯಾ, ಫಿಲಿಪೇನ್ಸ್ ದೇಶದ ಜನರೇ ಹೆಚ್ಚಾಗಿ ಫೇಸ್ ಬುಕ್ ಬಳಸುತ್ತಿದ್ದು, ಈ ದೇಶಗಳ ಗ್ರಾಹಕರಿಂದಲೇ ಫೇಸ್ ಬುಕ್ ತನ್ನ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಆದರೆ ವಿಶ್ವಾದ್ಯಂತ ಇರುವ ಮಾಸಿಕ ಸಕ್ರಿಯ ಬಳಕೆದಾರರ ಪೈಕಿ ಶೇ.11 ರಷ್ಟು ನಕಲಿ ಖಾತೆ ಅನ್ನೋದನ್ನು ಸ್ವತಃ ಫೇಸ್ ಬುಕ್ ಒಪ್ಪಿಕೊಂಡಿದೆ. ಅದರಲ್ಲೂ ಫಿಲಿಪೇನ್ಸ್, ವಿಯೆಟ್ನಾಮ್ ದೇಶಗಳಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ನಕಲಿ ಖಾತೆಗಳಿವೆ ಅನ್ನೋದನ್ನು ಫೇಸ್ ಬುಕ್ ಒಪ್ಪಿಕೊಂಡಿದೆ. ಇನ್ಮುಂದೆ ಫೇಸ್ ಬುಕ್ ನಂಬಿ ವ್ಯವಹಾರ ಮಾಡೋ ಮೊದಲು ಖಾತೆ ಅಸಲಿಯೋ ನಕಲಿಯೋ ಅಂತಾ ಅರಿತುಕೊಳ್ಳೋದು ಒಳಿತು.