ಶನಿವಾರ, ಜೂನ್ 14, 2025
HomeBUDGET300 ಯೂನಿಟ್‌ ಉಚಿತ ವಿದ್ಯುತ್‌ : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಸೂರ್ಯಘರ್‌ ಯೋಜನೆ ಘೋಷಣೆ

300 ಯೂನಿಟ್‌ ಉಚಿತ ವಿದ್ಯುತ್‌ : ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಸೂರ್ಯಘರ್‌ ಯೋಜನೆ ಘೋಷಣೆ

- Advertisement -

Union Budget 2024 : ನವದೆಹಲಿ : ಕರ್ನಾಟಕ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್‌ ಯೋಜನೆ ಘೋಷಣೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ( PM Narendra Modi) ಅವರ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರ ಬಜೆಟ್‌ (Union Budget 2024) ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಸೂರ್ಯಘರ್‌ ಯೋಜನೆಯ (PM Surya Ghar Yojana ) ಅಡಿಯಲ್ಲಿ 300 ಯೂನಿಟ್‌ ವಿದ್ಯುತ್‌ ಲಭ್ಯವಾಗಲಿದೆ.

300 units of free electricity PM Surya Ghar Yojana announced by Prime Minister Narendra Modi government
Image Credit to Original Source

ಕೇಂದ್ರದ ಬಜೆಟ್‌ ಮಂಡನೆ ಮಾಡಿರುವ ನಿರ್ಮಲಾ ಸೀತಾರಾಮನ್‌, ಬಡವರು ಹಾಗೂ ಮಧ್ಯಮ ವರ್ಗದವರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಿದ್ದಾರೆ. ದೇಶದಲ್ಲಿರುವ ಸುಮಾರು 1 ಕೋಟಿ ಕುಟುಂಬಗಳಿಗೆ ಸೂರ್ಯಘರ್‌ ಯೋಜನೆಯ ಪ್ರಯೋಜನ ದೊರೆಯಲಿದೆ. ಸೂರ್ಯಘರ್‌ ಯೋಜನೆಯ ಅಡಿಯಲ್ಲಿ 300 ಯೂನಿಟ್‌ ವಿದ್ಯುತ್‌ ಲಭ್ಯವಾಗಲಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಸಿಗಲಿದೆ 5 ಲಕ್ಷ ರೂ. ಯೋಜನೆ : ಅರ್ಜಿ ಸಲ್ಲಿಸುವುದು ಹೇಗೆ ?

ಪ್ರಧಾನ ಮಂತ್ರಿ ಸೂರ್ಯಘರ್‌ ಯೋಜನೆಯ ಮೂಲಕ ಉಚಿತ ವಿದ್ಯುತ್‌ ಯೋಜನೆ ಘೋಷಿಸಲಾಗಿದ್ದು, ಮನೆಯ ಮೇಲ್ಚಾವಣೆಯ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್‌ ಸೌಕರ್ಯ ಒದಗಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ.

300 units of free electricity PM Surya Ghar Yojana announced by Prime Minister Narendra Modi government
Image Credit to Original Source

ಸೂರ್ಯಘರ್‌ ಯೋಜನೆಯ ಮೂಲಕ ಪ್ರತೀ ಮನೆಯ ಮೇಲ್ಚಾವಣೆ ಮೇಲೆ ಸೌರ ವಿದ್ಯುತ್‌ ಫ್ಯಾನಲ್‌ಗಳನ್ನು ಅಳವಡಿಸುವ ಮೂಲಕ ಮಾಸಿಕ ಸುಮಾರು 300 ಯೂನಿಟ್‌ ವಿದ್ಯುತ್‌ ಪಡೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಬಡ ಹಾಗೂ ಮಧ್ಯ ವರ್ಗದವರಿಗೆ ಉಚಿತ ಶಾಶ್ವತ ವಿದ್ಯುತ್‌ ಕಲ್ಪಿಸುವುದು ಪ್ರಧಾನಿ ಮೋದಿ ನೇತೃತ್ವದ ಸರಕಾರದ ಗುರಿಯಾಗಿದೆ.

ಇದನ್ನೂ ಓದಿ :  Union Budget 2024 : 1 ಲಕ್ಷ ವಿದ್ಯಾರ್ಥಿಗಳಿಗೆ ಸಿಗಲಿದೆ 10 ಲಕ್ಷ ರೂ. : ಮುದ್ರಾ ಸಾಲದ ಮೊತ್ತ 20 ಲಕ್ಷಕ್ಕೆ ಏರಿಕೆ

ವಾಣಿಜ್ಯ ಉಷ್ಣ ವಿದ್ಯುತ್‌ ಸ್ಥಾಪರ ಘೋಷಣೆ

ಕೇಂದ್ರ ಸರಕಾರ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಉಷ್ಣ ವಿದ್ಯುತ್‌ ಸ್ಥಾಪರ ಆರಂಭಿಸಲು ಯೋಜನೆಯನ್ನು ರೂಪಿಸಿದೆ. ಎನ್‌ಟಿಪಿಸಿ ಮತ್ತು ಬಿಎಚ್‌ಇಎಲ್‌ ಜೊತೆಗಿನ ಜಂಟಿಯಾಗಿ ಎಯುಎಸ್‌ಸಿ ತಂತ್ರಜ್ಞಾನವನ್ನು ಬಳಸಿಕೊಂಡು 100  ಮೆಗಾವ್ಯಾಟ್‌ ವಾಣಿಜ್ಯ ಉಷ್ಣ ವಿದ್ಯುತ್‌ ಸ್ಥಾವರ ಆರಂಭವಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : 7th Pay Commission | ಸರಕಾರಿ ನೌಕರರಿಗೆ ವೇತನ ಹೆಚ್ಚಳ : ಕರ್ನಾಟಕ ಸರಕಾರದಿಂದ ಅಧಿಕೃತ ಆದೇಶ, ವೇತನದಲ್ಲಿ ಎಷ್ಟು ಹೆಚ್ಚಳ ?

300 units of free electricity: PM Surya Ghar Yojana announced by Prime Minister Narendra Modi government

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular