7th pay commission Salary Hike : ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರಕಾರ ಸರಕಾರಿ ನೌಕರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಸರಕಾರಿ ನೌಕರರ ವೇತನ ಹೆಚ್ಚಳ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸರಕಾರ ಅಧಿಕೃತ ಆದೇಶ ಹೊರಡಿಸಿದ್ದು, ಮುಂದಿನ ತಿಂಗಳನಿಂದಲೇ ನೌಕರರು ಪರಿಷೃತ ವೇತನ ಪಡೆಯಲಿದ್ದಾರೆ.

7 ನೇ ವೇತನ ಆಯೋಗದ ವರದಿ ಅನ್ವಯ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ ಜುಲೈ 1 ರಿಂದಲೇ ಮೂಲವೇತನದ ಮೇಲೆ ಶೇ.27.5 ರಷ್ಟು ಫಿಟ್‌ಮೆಂಟ್ ಸೌಲಭ್ಯ ದೊರೆಯಲಿದ್ದು, ಪರಿಷ್ಕೃತ ವೇತನವನ್ನು ಸರಕಾರಿ ನೌಕರರು ಅಗಸ್ಟ್ 1 2024 ರಿಂದಲೇ ಪಡೆಯಲಿದ್ದಾರೆ.
ಇದನ್ನೂ ಓದಿ : ಹೊಸ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ : ಮನೆಯಲ್ಲಿಯೇ ಕುಳಿತು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
Image Credit to Original Sourceಇನ್ನು ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳ ಪರಿಷ್ಕೃರಣೆಗೆ ಸಂಬಂಧಿಸಿದಂತೆ ಹೊಸ ಆದೇಶದಲ್ಲಿ ತಿಳಿಸಿದೆ. ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮೊತ್ತವು ಕ್ರಮವಾಗಿ ಮಾಸಿಕ 8.500 ಮತ್ತು 25,300 ರಿಂದ 13,500 ಮತ್ತು 1,20,600 ರೂಪಾಯಿ ಹೆಚ್ಚಳವಾಗಲಿದೆ. ಅಲ್ಲೇ ಸಂವಾದಿ ಕುಟುಂಬ ಪಿಂಚಣಿಯು ಮಾಸಿಕ 8.500 ಮತ್ತು 45, 180 ರಿಂದ ಮತ್ತು 13,500 ಮತ್ತು 80,400 ರೂಪಾಯಿಗೆ ಪರಿಷ್ಕೃರಿಸಲಾಗಿದೆ.
ಇದನ್ನೂ ಓದಿ : 7ನೇ ವೇತನ ಆಯೋಗದ ಶಿಫಾರಸ್ಸು ಅಗಸ್ಟ್ 1ರಿಂದಲೇ ಜಾರಿ : ಸರಕಾರಿ ನೌಕರರಿಗೆ ಭರ್ಜರಿ ಗುಡ್‌ನ್ಯೂಸ್

ಪರಿಷ್ಕೃತ ಪಿಂಚಣಿ ಯೋಜನೆಗಳು ಜುಲೈ 1 ರಿಂದಲೇ ಜಾರಿಗೆ ಬರಲಿದ್ದು, ಆರ್ಥಿಕ ಲಾಭವು ಅಗಸ್ಟ್1 ರಿಂದ ಲಭ್ಯವಾಗಲಿದೆ. ಸರಕಾರಿ ನೌಕರರ ಮರಣ ಅಥವಾ ನಿವೃತ್ತಿ ಉಪದಾನದ ಪ್ರಸ್ತುತ ಗರಿಷ್ಠ ಮಿತಿ ಹಾಲಿ ಇರುವ 20 ಲಕ್ಷಗಳಲ್ಲಿ ಯಾವುದೇ ಬದಲಾವಣೆ ಇರೋದಿಲ್ಲ. ಇನ್ನು ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರಕಾರ ಪರಿಷೃತ ವೇತನ ಶ್ರೇಣಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಈ ಮಹಿಳೆಯರ ಹೆಸರು ಪಟ್ಟಿಯಿಂದ ಡಿಲೀಟ್, ಇನ್ಮುಂದೆ ಸಿಗಲ್ಲ ಹಣ
7th Pay salary Hike for Karnataka government employees Official order from Karnataka government, how much increase in salary