ಭಾನುವಾರ, ಏಪ್ರಿಲ್ 27, 2025
Homebusinessಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಇದ್ರೆ ಸಾಕು, ಮಹಿಳೆಯರಿಗೆ ಸಿಗಲಿದೆ ಬಡ್ಡಿ ರಹಿತ 3 ಲಕ್ಷ...

ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಇದ್ರೆ ಸಾಕು, ಮಹಿಳೆಯರಿಗೆ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ

- Advertisement -

udyogini yojana scheme Karnataka : ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ, ಕೇಂದ್ರ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದೀಗ ಸ್ವತಃ ಉದ್ದಿಮೆಯನ್ನು ಆರಂಭಿಸಲು ಉತ್ತೇಜನ ನೀಡುವ ಸಲುವಾಗಿ ಯೋಜನೆಯೊಂದನ್ನು ಸರಕಾರ ಪರಿಚಿಯಿಸಿದೆ. ಕೆಲವೇ ಕೆಲವು ದಾಖಲೆಗಳನ್ನು ಹೊಂದಿದ್ದರೆ ಸಾಕು ಮಹಿಳೆಯರಿಗೆ ಬಡ್ಡಿ ಇಲ್ಲದೇ 3 ಲಕ್ಷ ರೂಪಾಯಿ ಸಾಲವನ್ನು ಒದಗಿಸಲಾಗುತ್ತಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಈಗಾಗಲೇ ಗೃಹಲಕ್ಷ್ಮೀ, ಶಕ್ತಿ ಯೋಜನೆಯನ್ನು ಪರಿಚಯಿಸಿದೆ. ಗೃಹಲಕ್ಷ್ಮೀ ಯೋಜನೆಯ ಮೂಲಕ ಮನೆಯ ಯಜಮಾನಿಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತಿದ್ರೆ, ಶಕ್ತಿ ಯೋಜನೆಯ ಮೂಲಕ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

Aadhaar card, ration card is enough, women will get an interest-free loan of 3 lakh rupees udyogini yojana scheme Karnataka
Image Credit to Original Source

ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದಲೇ ಸರಕಾರ ಉದ್ಯೋಗಿನಿ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರು ಕೇವಲ ಒಂದು ರೂಪಾಯಿಯೂ ಬಡ್ಡಿಯನ್ನು ಪಾವತಿ ಮಾಡದೇ, ಯಾವುದೇ ಗ್ಯಾರಂಟಿಯನ್ನೂ ನೀಡದೆ, 3 ಲಕ್ಷ ರೂಪಾಯಿ ವರೆಗೆ ಸಾಲವನ್ನು ನೀಡಲಾಗುತ್ತದೆ. ಉದ್ಯೋಗಿನಿ ಯೋಜನೆಯ ಮೂಲಕ ಮಹಿಳೆಯರು ಸಾಲವನ್ನು ಪಡೆದು ಸ್ವ ಉದ್ಯೋಗವನ್ನು ಆರಂಭಿಸಬಹುದಾಗಿದೆ.

ಇದನ್ನೂ ಓದಿ : Bank Holiday : ಇಂದಿನಿಂದ ಬ್ಯಾಂಕುಗಳಿಗೆ ಸತತ ಮೂರು ದಿನ ರಜೆ

ಯಾರಿಗೆಲ್ಲಾ ಸಿಗಲಿದೆ ಉದ್ಯೋಗಿನಿ ಯೋಜನೆ ?

ಉದ್ಯೋಗಿನಿ ಯೋಜನೆಯು ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಲಭಿಸಲಿದೆ. 18  ರಿಂದ 55 ವರ್ಷದ ಒಳಗಿನ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅದ್ರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರು ಪಡೆದುಕೊಂಡ ಸಾಲದಲ್ಲಿ ಶೇ.40 ರಷ್ಟು ಸಬ್ಸಿಡಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : ಸುಕನ್ಯಾ ಸಮೃದ್ದಿ ಹಣ ಅವಧಿಗೂ ಮುನ್ನ ವಾಪಾಸ್‌ ಪಡೆಯುವುದು ಹೇಗೆ ? ಇಲ್ಲಿದೆ ಹೊಸ ರೂಲ್ಸ್‌

ಅಲ್ಲದೇ ಸಾಮಾನ್ಯ ವರ್ಗದ ಮಹಿಳೆಯರಿಗೂ ಕೂಡ ಪಡೆದ ಸಾಲದಲ್ಲಿ ಸಬ್ಸಿಡಿ ದೊರೆಯಲಿದೆ. ಸಾಮಾನ್ಯ ಮಹಿಳೆಯರಿಗೆ ಶೇ.30 ರಷ್ಟು ಸಬ್ಸಿಡಿ ಅಥವಾ 90000 ರೂಪಾಯಿ ವರೆಗೆ ರಿಯಾಯಿತಿಯನ್ನು ಪಡೆದು ಕೊಳ್ಳಲು ಈ ಯೋಜನೆಯ ಅಡಿಯಲ್ಲಿ ಅವಕಾಶವಿದೆ. ಅಲ್ಲದೇ ಅತ್ಯಂತ ಸುಲಭವಾಗಿ ಈ ಯೋಜನೆಯಡಿ ಸಾಲ ಪಡೆಯಬಹುದಾಗಿದೆ.

Aadhaar card, ration card is enough, women will get an interest-free loan of 3 lakh rupees udyogini yojana scheme Karnataka
Image Credit to Original Source

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರ, ಬ್ಯಾಂಕ್‌ ಖಾತೆಯ ವಿವರ, ಜನನ ಪ್ರಮಾಣ ಪತ್ರ, ಪಾಸ್‌ ಪೋರ್ಟ್‌ ಸೈಜಿನ ಪೋಟೋ, ಯಾವ ಉದ್ಯೋಗ ಕೈಗೊಳ್ಳುತ್ತೇವೋ ಆ ಉದ್ಯೋಗಕ್ಕೆ ಸಂಬಂಧಿಸಿದ ವಿವರಗಳನ್ನು ಸಲ್ಲಿಕೆ ಮಾಡಬೇಕು.

ಇದನ್ನೂ ಓದಿ : ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ : ರೈತರಿಗೆ ಸಿಗಲಿದೆ ದುಪ್ಪಟ್ಟು ಹಣ

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಸುಲಭವಾಗಿ ಸಲ್ಲಿಸಲು ಅವಕಾಶವಿದೆ. ಆಯಾಯ ಜಿಲ್ಲೆಯಲ್ಲಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗೆ ಖುದ್ದಾಗಿ ತೆರಳಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ರೆ ತಕ್ಷಣದಲ್ಲಿಯೇ ನಿಮಗೆ ಸಾಲ ಮಂಜೂರಾತಿ ದೊರೆಯಲಿದೆ.

Aadhaar card, ration card is enough, women will get an interest-free loan of 3 lakh rupees udyogini yojana scheme Karnataka

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular