ಸೋಮವಾರ, ಏಪ್ರಿಲ್ 28, 2025
HomebusinessAadhaar-PAN Linking : ಎಚ್ಚರ! ಆಧಾರ್‌–ಪಾನ್‌ ಲಿಂಕ್‌ ಮಾಡ್ಲಿಲ್ಲ ಅಂದ್ರೆ ಫೈನ್‌ ಅಷ್ಟೇ ಬೀಳಲ್ಲ, ನಿಮ್ಮ...

Aadhaar-PAN Linking : ಎಚ್ಚರ! ಆಧಾರ್‌–ಪಾನ್‌ ಲಿಂಕ್‌ ಮಾಡ್ಲಿಲ್ಲ ಅಂದ್ರೆ ಫೈನ್‌ ಅಷ್ಟೇ ಬೀಳಲ್ಲ, ನಿಮ್ಮ ಕಾರ್ಡ್‌ ಡಿಲೀಟ್‌ ಆಗಬಹುದು

- Advertisement -

ನಿಮ್ಮ ಹತ್ತಿರ ಪಾನ್‌ (PAN) ಕಾರ್ಡ್‌ ಇದ್ದರೆ, ಅದನ್ನು ಆಧಾರ್‌ (Aadhaar) ಕಾರ್ಡ್‌ನೊಂದಿಗೆ ಖಂಡಿತ ಲಿಂಕ್‌ ಮಾಡಿ. ಏಕೆಂದರೆ ಮಾರ್ಚ್‌ 2023 ರ ಮೊದಲು ಪಾನ್‌ ಕಾರ್ಡ್ ಜೊತೆ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ (Aadhaar-PAN Linking) ಮಾಡಲು ವಿಫಲವಾದರೆ, ಮಾರ್ಚ್‌ 2023 ರ ನಂತರ ಪರ್‍ಮನೆಂಟ್‌ ಅಕೌಂಟ್‌ ನಂಬರ್‌ (PAN) ನಿಷ್ಕ್ರೀಯಗೊಳ್ಳುತ್ತದೆ ಎಂದು ಸೆಂಟ್ರಲ್‌ ಬೋರ್ಡ್‌ ಆಫ್‌ ಡೈರೆಕ್ಟ್‌ ಟಾಕ್ಸ್‌ (CBDT) ತೀರ್ಪು ನೀಡಿದೆ. ಮಾರ್ಚ್‌ 31, 2022 ರ ಒಳಗೆ ಆಧಾರ್‌ ಲಿಂಕ್‌ ಮಾಡದವರಿಗೆ ಆದಾಯ ತೆರಿಗೆ ಇಲಾಖೆಯು 1000 ರೂ. ಗಳ ವರೆಗೆ ದಂಡ ವಿಧಿಸಬಹುದು. ಆದರೆ ನಂತರ ಪಾನ್‌ ಕಾರ್ಡ್‌ ಅನ್ನು 2023 ರಲ್ಲಿ ನಿಷ್ಕ್ರೀಯಗೊಳುವವರೆಗೆ ಮಾತ್ರ ಬಳಸಬಹುದಾಗಿದೆ. ಆದಾಯ ತೆರಿಗೆ ಇಲಾಖೆ ಆಧಾರ್‌–ಪಾನ್‌ ಕಾರ್ಡ್‌ ಲಿಂಕ್‌ ಮಾಡುವ ಗಡುವನ್ನು ಹಲವು ಬಾರಿ ವಿಸ್ತರಿಸಿದೆ. ಇದನ್ನ ಯಾವುದೇ ದಂಡವಿಲ್ಲದೆ ಲಿಂಕ್‌ ಮಾಡಲು ಮಾರ್ಚ್‌ 31, 2022 ಕೊನೆ ದಿನವಾಗಿತ್ತು.

ಆದಾಯ ತೆರಿಗೆ ಇಲಾಖೆಯು ಇನ್ನೂ ಪ್ಯಾನ್ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದ ಎಲ್ಲರಿಗೂ ಟ್ವಿಟರ್‌ ಮೂಲಕ ಎಚ್ಚರಿಕೆ ನೀಡಿದೆ.
ಆಧಾರ್‌–ಪಾನ್‌ ಲಿಂಕ್‌ ಮಾಡಲು ವಿಫಲವಾದರೆ, ಅಂತಹವರ PAN ನಿಷ್ಕ್ರೀಯಗೊಳ್ಳುತ್ತದೆ. ಮತ್ತು PAN ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸಲಾಗುತ್ತದೆ. ನಿಗದಿತ ಶುಲ್ಕ ಪಾವತಿಸಿದ ನಂತರ ಮತ್ತು ಅದನ್ನು ನಿಗದಿತ ಪ್ರಾಧಿಕಾರಕ್ಕೆ ಆಧಾರ್‌ ಅನ್ನು ತಿಳಿಸಿದ ನಂತರ ಪಾನ್‌ ಅನ್ನು ಪುನಃ ಕಾರ್ಯಗತಗೊಳಿಸಲಾಗುವುದು ಎಂದು ಇಲಾಖೆ ಹೇಳಿದೆ.

ಸದ್ಯ ಪಾನ್‌– ಆಧಾರ್‌ ಲಿಂಕ್‌ ಮಾಡಲು ಮಾರ್ಚ್‌ 31, 2023ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಪಾನ್‌–ಆಧಾರ್‌ ಅನ್ನು ನೀವೇ ಸುಲಭವಾಗಿ ಲಿಂಕ್‌ ಮಾಡಿಕೊಳ್ಳಬಹುದು. ಈ ಕೆಳಗಿನ ಹಂತಗಳನ್ನು ಪಾಲಿಸಿ ಪಾನ್‌–ಆಧಾರ್‌ ಲಿಂಕ್‌ ಮಾಡಿ.

  1. ಇನ್‌ಕಮ್‌ ಟ್ಯಾಕ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.
  2. ಅಲ್ಲಿ ಕ್ವಿಕ್‌ ಲಿಂಕ್‌ ಸೆಕ್ಷನ್‌ಗೆ ಹೋಗಿ. ಅಲ್ಲಿ ಲಿಂಕ್‌ ಆಧಾರ್‌ ಮೇಲೆ ಕ್ಲಿಕ್ಕಿಸಿ.
  3. ಈಗ ಹೊಸ ವಿಂಡೋ ತೆರೆಯುವುದು ಅಲ್ಲಿ ಆಧಾರ್‌ನ ವಿವರಗಳನ್ನು, ಪಾನ್‌ ನಂಬರ್‌ ಮತ್ತು ಮೊಬೈಲ್‌ ನಂಬರ್‌ ನಮೂದಿಸಿ.
  4. ಐ ವ್ಯಾಲಿಡೇಟ್‌ ಮೈ ಆಧಾರ್‌ ಡಿಟೇಲ್ಸ್‌ ಅನ್ನು ಸಿಲೆಕ್ಟ್‌ ಮಾಡಿ.
  5. ನಿಮ್ಮ ನೋಂದಾಯಿತ ಮೊಬೈಲ್‌ ನಂಬರ್‌ಗೆ ಬರುವು OTP ಯನ್ನು ನಮೂದಿಸಿ. ಮತ್ತು ವ್ಯಾಲಿಡೇಟ್‌ ಮೆಲೆ ಕ್ಲಿಕ್ಕಿಸಿ.
  6. ದಂಡ ಪಾವತಿಸಿದ ನಂತರ ಪಾನ್‌ –ಆಧಾರ್‌ ಲಿಂಕ್‌ ಆಗುವುದು.

ಗಮನಿಸಬೇಕಾದ ವಿಷಯ :
ದಂಡವನ್ನು ಪಾವತಿಸಿದೇ ನಿಮ್ಮ ಪ್ಯಾನ್‌ ಅನ್ನು, ನಿಮ್‌ ಆಧಾರ್‌ಗೆ ಲಿಂಕ್‌ ಮಾಡಲಾಗುವುದಿಲ್ಲ.

ಇದನ್ನೂ ಓದಿ :SBI YONO App: ನೀವು ಎಸ್‌ಬಿಐ ಗ್ರಾಹಕರೇ? YONO ಆ್ಯಪ್ ನೋಂದಣಿ, ಬಳಕೆ ಕುರಿತ ಸಮಗ್ರ ಮಾಹಿತಿ ಇಲ್ಲಿದೆ

ಇದನ್ನೂ ಓದಿ : Twitter Alternatives : ಟ್ವಿಟರ್‌ಗೆ ಪರ್ಯಾಯವಾಗಿ ಭಾರತದಲ್ಲಿ ನೀವು ಬಳಸಬಹುದಾದ 5 ಮೈಕ್ರೋಬ್ಲಾಗಿಂಗ್‌ ಆಪ್‌ಗಳು

(Aadhaar-PAN Linking. Be careful if you do not link aadhaar with pan, your card may also get deleted)

RELATED ARTICLES

Most Popular