ಸೋಮವಾರ, ಏಪ್ರಿಲ್ 28, 2025
Homebusinessಬ್ಯಾಂಕ್ ಅಕೌಂಟ್ ಗೆ ಆಧಾರ ಜೋಡಣೆ ಕಡ್ಡಾಯ…! 2021 ರ ಮಾರ್ಚ್ ಲಾಸ್ಟ್ ಡೇಟ್ ..!

ಬ್ಯಾಂಕ್ ಅಕೌಂಟ್ ಗೆ ಆಧಾರ ಜೋಡಣೆ ಕಡ್ಡಾಯ…! 2021 ರ ಮಾರ್ಚ್ ಲಾಸ್ಟ್ ಡೇಟ್ ..!

- Advertisement -

ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಕಡ್ಡಾಯ ಎಂಬುದನ್ನು ಪುನರುಚ್ಛರಿಸಿರುವ ಕೇಂದ್ರ ಸರ್ಕಾರ ಬ್ಯಾಂಕ್ ಅಕೌಂಟ್ ಗೆ ಆಧಾರ ಜೋಡಣೆಗೆ 2021 ರ ಮಾರ್ಚ್ 31ರ ಗಡುವು ವಿಧಿಸಿದೆ.

(adsbygoogle = window.adsbygoogle || []).push({});

ಎಲ್ಲ ಬ್ಯಾಂಕ್ ಖಾತೆಗಳಿಗೂ ಆಧಾರ ಜೋಡಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಚನೆ ನೀಡಿದ್ದಾರೆ.

ಭಾರತೀಯ ಬ್ಯಾಂಕ್ ಒಕ್ಕೂಟದ 73 ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮ್ ನ, ವಿತ್ತೀಯ ಸೇರ್ಪಡೆ ಇನ್ನು ಮುಗಿದಿಲ್ಲ. ಈಗಲೂ ಹಲವು ಬ್ಯಾಂಕ್ ಖಾತೆಗಳು ಆಧಾರ ಜೊತೆ ಜೋಡಣೆಯಾಗಿಲ್ಲ. ಅಗತ್ಯ ಹಾಗೂ ಅನ್ವಯ ಇರುವ ಎಲ್ಲ ಕಡೆ ಬ್ಯಾಂಕ್ ಖಾತೆಗೆ ಫ್ಯಾನ್ ಕಾರ್ಡ್ ಜೋಡಿಸಬೇಕು. ಅದೇ ರೀತಿ ಬ್ಯಾಂಕ್ ನ ಪ್ರತಿಯೊಂದು ಖಾತೆಯನ್ನು ಆಧಾರ ಜೊತೆ ಜೋಡಿಸಬೇಕು.

(adsbygoogle = window.adsbygoogle || []).push({});

ಈ ಪ್ರಕ್ರಿಯೆ ಸಂಪೂರ್ಣವಾಗಿ 2021 ರ ಮಾರ್ಚ್ 31 ರ ಒಳಗೆ ಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಪ್ರತಿಯೊಂದು ವಹಿವಾಟು ಡಿಜಿಟಲ್ ರೂಪದಲ್ಲೇ ನಡೆಯಬೇಕು. ಡಿಜಿಟಲ್ ರೂಪದಲ್ಲಿ ನಡೆಯದ ವ್ಯವಹಾರಗಳಿಗೆ ಉತ್ತೇಜನ ನೀಡಬಾರದು ಎಂದು ಬ್ಯಾಂಕ್ ಗಳಿಗೆ ನಿರ್ಮಲಾ ಸೀತಾರಾಮನ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಅಷ್ಟೇ ಅಲ್ಲದೇ ರುಪೇ ಕಾರ್ಡ್ ಬಳಕೆಗೂ ಉತ್ತೇಜನ‌ ನೀಡಿ, ಎನ್ ಪಿಸಿಐ ದೇಶದ ಬ್ರ್ಯಾಂಡ್ ಆಗಿ ರೂಪಿಸುವಂತೆ ಯೂ ಬ್ಯಾಂಕ್ ಗಳಿಗೆ ಆದೇಶಿಸಿದ್ದಾರೆ. ಆಧಾರ ಕಡ್ಡಾಯಗೊಳಿಸುವ ಮೂಲಕ ಹಣಕಾಸು ವಹಿವಾಟನ್ನು ಅಧಿಕೃತಗೊಳಿಸುವುದು ಹಾಗೂ ಕಪ್ಪು ಹಣ ವಹಿವಾಟಿನ ಮೇಲೆ ನಿಗಾ ವಹಿಸುವುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ.

RELATED ARTICLES

Most Popular