ಭಾನುವಾರ, ಏಪ್ರಿಲ್ 27, 2025
Homebusinessಅಕ್ಷಯ ತೃತೀಯ 2023 : ಮಾರುಕಟ್ಟೆಯಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ

ಅಕ್ಷಯ ತೃತೀಯ 2023 : ಮಾರುಕಟ್ಟೆಯಲ್ಲಿ ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ

- Advertisement -

ನವದೆಹಲಿ : ದೇಶದಾದ್ಯಂತ ಇಂದು ಅಕ್ಷಯ ತೃತೀಯ ಹಬ್ಬವನ್ನು (Akshaya Tritiya 2023) ಆಚರಿಸುತ್ತಿದ್ದಾರೆ. ಈ ಶುಭ ದಿನದಂದು ಜನ ಸಾಮಾನ್ಯರು ತಮ್ಮ ಹೂಡಿಕೆಯ ಭಾಗದಲ್ಲಿ ಚಿನ್ನಾಭರಣ ಖರೀದಿಗೆ ಮುಂದಾಗಿದ್ದಾರೆ. ಇನ್ನು ಅಕ್ಷಯ ತೃತೀಯವು ಭಾರತ ಮತ್ತು ನೇಪಾಳದಾದ್ಯಂತ ಹಿಂದೂಗಳು ಮತ್ತು ಜೈನರು ಆಚರಿಸುವ ಸಮೃದ್ಧಿಯ ದಿನವಾಗಿದೆ. ಯಾವುದೇ ರೀತಿಯ ಹೊಸ ಆರಂಭಕ್ಕೆ ಇದು ಮಂಗಳಕರವೆಂದು ಪರಿಗಣಿಸಲಾಗಿದೆ. ಜನರು ಸಾಮಾನ್ಯವಾಗಿ ಹೊಸ ಉದ್ಯಮಗಳನ್ನು ಪ್ರಾರಂಭಿಸುತ್ತಾರೆ, ಮದುವೆಯಂತಹ ಶುಭಕಾರ್ಯಕ್ರಮಗಳನ್ನು ನಡೆಸುತ್ತಾರೆ. ಹಾಗೆಯೇ ಚಿನ್ನ, ಆಸ್ತಿ ಮತ್ತು ಇತರ ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ.

ಆದರೆ ಅಕ್ಷಯ ತೃತೀಯ ಸಂದರ್ಭದಲ್ಲಿ ದೇಶದಾದ್ಯಂತ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ. ಹೀಗಾಗಿ ಆಭರಣ ಪ್ರಿಯರಿಗೆ ಹಬ್ಬದ ದಿನದಂದು ಖುಷಿಯ ಬದಲು ಬೇಸರವಾಗಿದೆ. ಹಬ್ಬದ ಸಂದರ್ಭದಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 5,605 ಆಗಿದ್ದು, ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆ ರೂ. 6,115 ಆಗಿದೆ. ಚಿನ್ನದ ಶುದ್ಧತೆಯನ್ನು ಅಳೆಯಲು, ಕ್ಯಾರಟ್‌ಗಳ ‘ಕೆ’ ಪದವನ್ನು ಬಳಸಲಾಗುತ್ತದೆ. 24ಕ್ಯಾರೆಟ್ ಶುದ್ಧ ಚಿನ್ನ ಎಂದೂ ಕರೆಯುತ್ತಾರೆ, ಇದು 99.9 ಶೇಕಡಾ ಶುದ್ಧತೆಯನ್ನು ಹೊಂದಿದೆ. ಹೀಗಾಗಿ ಇದು ಇತರೆ ಬೇರೆ ಲೋಹಗಳ ಒಳಗೊಂಡಿರುವುದಿಲ್ಲ. 22ಕ್ಯಾರೆಟ್ ಚಿನ್ನವು ತಾಮ್ರ ಮತ್ತು ಸತುವು ಮಿಶ್ರಿತ ಇತರ ಲೋಹದ 22 ಭಾಗಗಳನ್ನು ಒಳಗೊಂಡಿದೆ. ಆಭರಣಗಳನ್ನು ತಯಾರಿಸಲು ಇದು ಸೂಕ್ತವಾಗಿದೆ.

ಅಕ್ಷಯ ತೃತೀಯ 2023 ರಂದು ವಿವಿಧ ಭಾರತೀಯ ನಗರಗಳ ಚಿನ್ನದ ಬೆಲೆಗಳ ವಿವರ :

ನಗರದ ಹೆಸರು 22 ಕ್ಯಾರೆಟ್ ಚಿನ್ನದ ಬೆಲೆ (Rs.10 GM) 24ಕ್ಯಾರೆಟ್ ಚಿನ್ನದ ಬೆಲೆ (Rs. 10 GM)

  • ದೆಹಲಿ ರೂ. 56,200 ರೂ. 61,300
  • ಮುಂಬೈ ರೂ. 56,050 ರೂ. 61,150
  • ಚೆನ್ನೈ ರೂ. 56,050 ರೂ. 61,150
  • ಕೋಲ್ಕತ್ತಾ ರೂ. 56,050 ರೂ. 61,150
  • ಬೆಂಗಳೂರು ರೂ. 56,100 ರೂ. 61,200
  • ಹೈದರಾಬಾದ್ ರೂ. 56,050 ರೂ. 61,150
  • ಅಹಮದಾಬಾದ್ ರೂ. 56,100 ರೂ.61,200

ಅಕ್ಷಯ ತೃತೀಯದಲ್ಲಿ, ಚಿನ್ನವನ್ನು ಖರೀದಿಸುವುದು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಮನೆಯೊಳಗೆ ಸಮೃದ್ಧಿಯ ಆಹ್ವಾನವಾಗಿದೆ. ಆದ್ದರಿಂದ ಈ ಶುಭ ದಿನದಂದು ಚಿನ್ನದ ಬೆಲೆ ಎಷ್ಟಿದ್ದರೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಆದರೂ ಚಿನ್ನ ಹಾಗೂ ಬೆಳ್ಳಿಯನ್ನು ಜನರು ಖರೀದಿಸುತ್ತಾರೆ.

ಇದನ್ನೂ ಓದಿ : ಸರಕಾರಿ ನೌಕರರಿಗೆ ಗುಡ್‌ನ್ಯೂಸ್ : ಫಿಟ್‌ಮೆಂಟ್ ಪರಿಷ್ಕರಣೆ ಬಗ್ಗೆ ಕೇಂದ್ರ ಹೇಳಿದ್ದೇನು ?

ಇದನ್ನೂ ಓದಿ : Blue Aadhaar Card : ಏನಿದು ಬ್ಲೂ ಆಧಾರ್‌ ಕಾರ್ಡ್‌, ಬಾಲ ಆಧಾರ್‌ ಕಾರ್ಡ್‌ ಬಗ್ಗೆ ನಿಮಗೆಷ್ಟು ಗೊತ್ತು ?

ಪ್ರಮುಖ ನಗರಗಳಲ್ಲಿ ಬೆಳ್ಳಿ ದರದ ವಿವರ :
ಅಕ್ಷಯ ತೃತೀಯ 2023 ರ ಸಂದರ್ಭದಲ್ಲಿ ಬೆಳ್ಳಿಯ ಬೆಲೆಯು ಬಹುತೇಕ ಬದಲಾಗದೆ ಉಳಿದಿದೆ. ಭಾರತದ ಹಲವಾರು ನಗರಗಳಲ್ಲಿ ಒಂದು ಗ್ರಾಂ ಬೆಳ್ಳಿಯ ಬೆಲೆ ರೂ. 76.90. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ ಬೆಳ್ಳಿಯ ಬೆಲೆ ರೂ.769 ರಷ್ಟಿದೆ. ಮತ್ತೊಂದೆಡೆ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಬೆಳ್ಳಿಯ ಬೆಲೆ ರೂ. 804 ಆಗಿದೆ.

Akshaya Tritiya 2023 : Do you know the price of gold and silver in the market today?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular