ದೆಹಲಿ : ದೇಶಾದ್ಯಂತ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಮೇ 3ರ ವರೆಗೂ ಜನ ಮನೆಯಿಂದ ಹೊರಗೆ ಬರುವಂತಿಲ್ಲ. ದುಡಿಮೆಯಿಲ್ಲದೇ ಕಂಗಾಲಾಗಿರೋ ಜನರಿಗೆ ಬ್ಯಾಂಕುಗಳು ಗುಡ್ ನ್ಯೂಸ್ ನೀಡಿದೆ. ಗ್ರಾಹಕರಿಗೆ ಎಟಿಎಂ ವಹಿವಾಟು ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿವೆ.

ಲಾಕ್ ಡೌನ್ ಘೋಷಣೆಯಾಗುತ್ತಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎಟಿಎಂನಿಂದ ಹಣ ಪಡೆದರೂ ಮೂರು ತಿಂಗಳ ಕಾಲ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಹೇಳಿದ್ದರು.

ಇದೀಗ ಎಸ್ ಬಿಐ ಸೇರಿದಂತೆ ದೇಶದ ವಿವಿಧ ಬ್ಯಾಂಕುಗಳು ಜೂನ್ 30ರ ವರೆಗೆ ಎಟಿಎಂ ಸೇವಾ ಶುಲ್ಕವನ್ನು ಮನ್ನಾ ಮಾಡುವುದಾಗಿ ಹೇಳಿವೆ.

ಈ ಹಿಂದೆ ಬ್ಯಾಂಕುಗಳು ಮೆಟ್ರೋ ನಗರಗಳಲ್ಲಿ ಮೂರು ಉಚಿತ ವಹಿವಾಟು ಹಾಗೂ ಇತರ ಕಡೆಗಳಲ್ಲಿ 5 ಉಚಿತ ವಹಿವಾಟು ನೀಡಲಾಗುತ್ತಿತ್ತು. ನಂತರದ ವಹಿವಾಟುಗಳಿಗೆ ಬ್ಯಾಂಕುಗಳು ಎಟಿಎಂ ಸೇವಾ ಶುಲ್ಕಗಳನ್ನು ವಿಧಿಸಲಾಗುತ್ತಿತ್ತು. ಇದೀಗ ಕೇಂದ್ರ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಬ್ಯಾಂಕುಗಳು ಎಟಿಎಂ ಸೇವಾ ಶುಲ್ಕ ಮನ್ನಾ ಮಾಡಿರೋದ್ರಿಂದಾಗಿ ಗ್ರಾಹಕರು ಮೂರು ತಿಂಗಳ ಕಾಲ ಉಚಿತವಾಗಿ ಎಟಿಎಂ ಸೇವೆ ಪಡೆಯಬಹುದಾಗಿದೆ.