Ration Card e- KYC : ಬೆಂಗಳೂರು : ಪ್ರತೀ ಕುಟುಂಬಕ್ಕೂ ಪಡಿತರ ವ್ಯವಸ್ಥೆಯನ್ನು ಕಲ್ಪಿಸುವ ಸಲುವಾಗಿ ಪಡಿತರ ಕಾರ್ಡ್ಗಗಳನ್ನು ಕೇಂದ್ರ ರಾಜ್ಯ ಸರಕಾರಗಳು ನೀಡುತ್ತಿವೆ. ಇದೀಗ ಪಡಿತರ ಚೀಟಿ ( Ration Card)ಯನ್ನು ಹೊಂದಿರುವ ಪ್ರತೀ ಕುಟುಂಬಗಳು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಅದ್ರಲ್ಲೂ ಅಗಸ್ಟ್ 31 ರ ಒಳಗಾಗಿ ಕುಟುಂಬ ಸದಸ್ಯರು ಇಕೆವೈಸಿ ಮಾಡಿಸುವಂತೆ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ಸರಕಾರ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾಗಳ ಇಲಾಖೆಯ ಉಪನಿರ್ದೇಶರಾದ ಅವಿನ್ ಆರ್. ಅವರು ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಪಡಿತರ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ಉಚಿತವಾಗಿ ಇಕೆವೈಸಿ ಕಾರ್ಯವನ್ನು ಮಾಡಿಸಬಹುದಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಉಚಿತವಾಗಿ ಇಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 4000 ರೂ. ಯಾವಾಗ ಸಿಗುತ್ತೆ ? ಇಲ್ಲಿದೆ ಬಿಗ್ ಅಪ್ಟೇಟ್ಸ್
ಅಗಸ್ಟ್ ೩೧ರ ಒಳಗಾಗಿ ಇಕೆವೈಸಿ ಮಾಡಿಸದೇ ಇದ್ದಲ್ಲಿ ಪಡಿತರ ಸಾಮಗ್ರಿಗಳ ಹಂಚಿಕೆ ಮಾಡುವುದನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ. ಇಕೆವೈಸಿ ಮಾಡಿಸದೇ ಇದ್ರೆ ಅನ್ನಭಾಗ್ಯ ಯೋಜನೆಯ ಹಣವೂ ಸಿಗುವುದಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯ ಮಾಹಿತಿಯನ್ನು ನ್ಯಾಯಬೆಲೆ ಅಂಗಡಿಗೆ ನೀಡಬೇಕಾಗಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
ರೇಷನ್ ಕಾರ್ಡ್ ಇಕೆವೈಸಿ ಮಾಡಿಸುವುದು ಹೇಗೆ ?
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್‌ಸೈಟ್ Click ಮಾಡಿ
- ಇ-ಸೇವೆಗಳು ಆಯ್ಕೆಯ್ನು ಕ್ಲಿಕ್ ಮಾಡಿ ನಂತರ ಇ- ಪಡಿತರ ಚೀಟಿಯಲ್ಲಿ ಯುಐಡಿ ಲಿಕ್ ಮಾಡಿ ಆಯ್ಕೆಯನ್ನು ಕ್ಲಿಕ್ ಮಾಡಿ
- ಮುಂದಿನ ಆಯ್ಕೆಯಲ್ಲಿ ನಿಮ್ಮ ಜಿ್ಲ್ಲೆಯ ಆಯ್ಕೆಯನ್ನು ಬಳಸಿ, ಯುಐಡಿ ಲಿಂಕಿಗ್ ಫಾರ್ ಆರ್‌ಸಿ ಮೆಂಬರ್ಸ್ ಆಯ್ಕೆ ಕ್ಲಿಕ್ ಮಾಡಿ
- ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನೋದಿಸಿ
- ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿದ ನಂತರ ಮೊಬೈಲ್ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ
- ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ SUBMIT ಮಾಡಿ
- ಕೊನೆಯದಾಗಿ ನಿಮ್ಮ ರೇಷನ್ ಕಾರ್ಡ್ ಲಿಂಕ್ ಆಗಿರುವ ಕುರಿತು ನೋಟಿಫಿಕೇಶನ್ ಸಿಗಲಿದೆ.
ಇದನ್ನೂ ಓದಿ : ಮಹಿಳೆಯರಿಗೆ ಸಿಗಲಿದೆ 5000 ರೂ. ; ಹೊಸ ಯೋಜನೆ ಘೋಷಿಸಿದ ಪ್ರಧಾನ ನರೇಂದ್ರ ಮೋದಿ
Attention Ration Card Holders: If EKYC is not done by 31st August you will not get ration