ಸೋಮವಾರ, ಏಪ್ರಿಲ್ 28, 2025
HomebusinessBank Holiday : ಗ್ರಾಹಕರಿಗೆ ಎಚ್ಚರಿಕೆ : ಮುಂದಿನ ವಾರ 4 ದಿನ ಬ್ಯಾಂಕ್‌ ಬಂದ್‌

Bank Holiday : ಗ್ರಾಹಕರಿಗೆ ಎಚ್ಚರಿಕೆ : ಮುಂದಿನ ವಾರ 4 ದಿನ ಬ್ಯಾಂಕ್‌ ಬಂದ್‌

- Advertisement -

ನವದೆಹಲಿ : ಬ್ಯಾಂಕ್‌ ಗ್ರಾಹಕರು ಈ ಸುದ್ದಿಯನ್ನು ಓದಲೇ ಬೇಕು. ನೀವೇನಾದ್ರೂ ತುರ್ತು ಬ್ಯಾಂಕ್‌ ವ್ಯವಹಾರವನ್ನು ಮಾಡುವುದಿದ್ರೆ, ಮುಂದಿನ ವಾರದಲ್ಲಿ ಶೀಘ್ರದಲ್ಲಿಯೇ ಮುಗಿಸಿಕೊಳ್ಳಲು ಯತ್ನಿಸಿ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಬಂದ್‌ (Bank Holiday) ಆಗಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಭಾರತದ ಪ್ರಾದೇಶಿಕ ಬ್ಯಾಂಕ್‌ಗಳು ನಿಗದಿತ ದಿನಾಂಕಗಳಲ್ಲಿ ಮುಚ್ಚಬೇಕಾಗುತ್ತದೆ. ಆರ್‌ಬಿಐ ಈ ವರ್ಗಗಳ ಅಡಿಯಲ್ಲಿ ಸಾಲದಾತರಿಗೆ ರಜಾದಿನಗಳನ್ನು ಘೋಷಿಸಿದೆ. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳಿಗೆ ರಜೆಯನ್ನು ನೀಡಲಾಗಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕುಗಳ ರಜಾ ದಿನಗಳ ವಿಭಿನ್ನವಾಗಿವೆ.

ಭಾರತದಲ್ಲಿ ಸಾಮಾನ್ಯವಾಗಿ ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ (ಆಗಸ್ಟ್ 15), ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್ಮಸ್ ದಿನ (ಡಿಸೆಂಬರ್ 25) ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿರುತ್ತದೆ. ಇದೀಗ ಎಪ್ರಿಲ್‌ ತಿಂಗಳಲ್ಲಿ ಬ್ಯಾಂಕುಗಳು ಒಟ್ಟು ಏಳು ದಿನಗಳ ಕಾಲ ವ್ಯವಹಾರ ನಡೆಸುತ್ತಿಲ್ಲ.

ಏಪ್ರಿಲ್ 15, 2022 (ಶುಕ್ರವಾರ) : ಶುಭ ಶುಕ್ರವಾರ /ಬಂಗಾಳಿ ಹೊಸ ವರ್ಷದ ದಿನ (ನಬಬರ್ಶಾ)/ಹಿಮಾಚಲ ದಿನ/ವಿಶು/ಬೋಹಾಗ್ ಬಿಹು (ರಾಜಸ್ಥಾನ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಭಾರತದಾದ್ಯಂತ). ಏಪ್ರಿಲ್ 16, 2022 (ಶನಿವಾರ) – ಬೋಹಾಗ್ ಬಿಹು (ಅಸ್ಸಾಂ). ಜೊತೆಗೆ ಎರಡು ಭಾನುವಾರಗಳು ಸೇರಿದಂತೆ ಮುಂದಿನ ವಾರ ನಾಲ್ಕು ದಿನಗಳ ಕಾಲ ಬ್ಯಾಂಕ್‌ ವ್ಯವಹಾರ ಬಂದ್‌ ಆಗಲಿದೆ.

ಇದನ್ನೂ ಓದಿ : Aadhaar PAN link : ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಆಗಿದೆಯಾ ? ಮೊಬೈಲ್‌ನಲ್ಲೇ ಚೆಕ್‌ ಮಾಡಿ

ಇದನ್ನೂ ಓದಿ : Cheque Transaction : ಬ್ಯಾಂಕ್ ಗ್ರಾಹಕರೇ ಎಚ್ಚರ : ಚೆಕ್ ವಹಿವಾಟಿಗೆ ಹೊಸ ನಿಯಮ ಜಾರಿ

Bank Holiday : Banks to remain closed for 4 days next week

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular