ನವದೆಹಲಿ : ದಿನ ಕಳೆದಂತೆ ಅಡುಗೆ ಅನಿಲ ಬೆಲೆ ಜನಸಾಮಾನ್ಯರಿಗೆ ಕಣ್ಣೀರು ತರಿಸುತ್ತಿದೆ. ಸಿಲಿಂಡರ್ ಬೆಲೆ 819 ರೂಪಾಯಿಗೆ ಬಂದು ತಲುಪಿದೆ. ಇದೀಗ ಗ್ರಾಹಕರಿಗೆ ಪೇಟಿಯಂ ಗುಡ್ ನ್ಯೂಸ್ ಕೊಟ್ಟಿದ್ದು, ಗ್ಯಾಸ್ ಬುಕ್ಕಿಂಗ್ ಮೇಲೆ 100 ರೂಪಾಯಿ ಕ್ಯಾಶ್ ಬ್ಯಾಕ್ ಘೋಷಿಸಿದೆ.

ಪೇಟಿಯಂ ಡಿಜಿಟಲ್ ಪೇಮೆಂಟ್ ಆ್ಯಪ್ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಆಫರ್ ಘೋಷಣೆ ಮಾಡಿದೆ. ಮೊದಲ ಬಾರಿಗೆ ಯಾವುದೇ ಕಂಪೆನಿಯ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ. ಮಾರ್ಚ್ 31ರವರೆಗೆ ಕೇವಲ ಒಂದು ಸಿಲಿಂಡರ್ ಮಾತ್ರವೇ ಬುಕ್ಕಿಂಗ್ ಮಾಡಬಹುದಾಗಿದೆ.

ಪೇಟಿಯಂ ಮೂಲಕ ಗ್ಯಾಸ್ ಬುಕ್ಕಿಂಗ್ ಮಾಡಿ ಹಣ ಪಾವತಿ ಮಾಡಿದ ನಂತರದಲ್ಲಿ ಪೇಟಿಯಂ ಖಾತೆಗೆ ಸ್ಕ್ರ್ಯಾಚ್ ಕಾರ್ಡ್ ಲಭ್ಯವಾಗಲಿದೆ. ಈ ಕಾರ್ಡ್ ನ್ನು ಏಳು ದಿನಗಳ ಒಳಗಾಗಿ ಸ್ಕ್ರ್ಯಾಚ್ ಮಾಡಬೇಕು. ಒಂದೊಮ್ಮೆ ಸ್ಕ್ರ್ಯಾಚ್ ಮಾಡದಿದ್ರೆ ಆಫರ್ ನಿಮಗೆ ಲಭ್ಯವಾಗೋದಿಲ್ಲ. ಸ್ಕ್ರ್ಯಾಚ್ ಮಾಡಿದಾಗ ಲಭ್ಯವಾಗುವ ಆಫರ್ ಹಣ ನಿಮ್ಮ ಖಾತೆಗೆ ನೇರವಾಗಿ ಜಮೆಯಾಗಲಿದೆ.

ಕಳೆದೊಂದು ತಿಂಗಳ ಅವಧಿಯಲ್ಲಿಯೇ ಗ್ಯಾಸ್ ದರದಲ್ಲಿ ಬರೋಬ್ಬರಿ 125 ರೂಪಾಯಿ ಏರಿಕೆಯಾಗಿದೆ. ಇದೀಗ ಪೇಟಿಯಂ ನೀಡಿರುವ ಆಫರ್ ಗ್ರಾಹಕರಿಗೆ ಖುಷಿಯನ್ನು ಕೊಟ್ಟಿದೆ.