ಭಾನುವಾರ, ಏಪ್ರಿಲ್ 27, 2025
HomebusinessBPL Card Holders Alert : ಬಿಪಿಎಲ್‌ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌

BPL Card Holders Alert : ಬಿಪಿಎಲ್‌ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌

BPL Card : ಕೇಂದ್ರ ಸರಕಾರದ ರಾಷ್ಟ್ರೀಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ ಆಹಾರ ಸಾಮಗ್ರಿಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ.

- Advertisement -

ಬೆಂಗಳೂರು : ಕರ್ನಾಟಕ ಸರಕಾರ ಬಿಪಿಎಲ್‌ ಕಾರ್ಡುದಾರರಿಗೆ ಇಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಈಗಾಗಲೇ ಲಕ್ಷಾಂತರ ನಕಲಿ ಬಿಪಿಎಲ್‌ ಕಾರ್ಡ್‌ಗಳನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಪತ್ತೆ ಹೆಚ್ಚಿದೆ. ಇದರ ಬೆನ್ನಲ್ಲೇ ಕಾರ್ಡುಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಈ ನಡುವಲ್ಲೇ ಬಿಪಿಎಲ್‌ ಕಾರ್ಡ್‌ದಾರರು ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಕರ್ನಾಟಕ ಸರಕಾರ ಗುಡ್‌ನ್ಯೂಸ್‌ ಕೊಟ್ಟಿದೆ.

ಕೇಂದ್ರ ಸರಕಾರದ ರಾಷ್ಟ್ರೀಯ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ ಆಹಾರ ಸಾಮಗ್ರಿಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಕೆವೈಸಿ ಅಪ್ಡೇಟ್ಸ್‌ ಮಾಡಿಸಿಕೊಂಡಿರುವ ಪಡಿತರದಾರರು ಆಹಾರ ಸಾಮಗ್ರಿಗಳನ್ನು ಪಡೆದುಕೊಳ್ಳಲು ಕರ್ನಾಟಕ ಸರಕಾರ ಅವಕಾಶವನ್ನು ಕಲ್ಪಿಸಿದೆ. ಅಂತ್ಯೋದಯ ಪಡಿತರ ಕಾರ್ಡುದಾರರು 20 ಕೆಜಿ ಅಕ್ಕಿ ಹಾಗೂ 14 ಕೆಜಿ ಜೋಳವನ್ನು ಅಕ್ಟೋಬರ್‌ 2024 ರ ಬಾಬ್ತು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.

ಇನ್ನು ಬಿಪಿಎಲ್‌ ಕಾರ್ಡುದಾರರ ಪ್ರತೀ ಸದಸ್ಯರಿಗೆ ತಲಾ 3 ಕೆಜಿ ಅಕ್ಕಿ ಹಾಗೂ 2 ಕೆಜಿ ಜೋಳ/ ಗೋಧಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಅಂತರಾಜ್ಯ ಪೋರ್ಟೆಬಿಲಿಟಿ ಸೌಲಭ್ಯದ ಮೂಲಕ ಪಡಿತ ಸಾಮಗ್ರಿಗಳನ್ನು ಪಡೆಯುವ ಗ್ರಾಹಕರಿಗೆ ಕೇಂದ್ರ ಸರಕಾರವು ಪ್ರತೀ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಪೂರೈಕೆ ಮಾಡುತ್ತಿದೆ. ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುದಾರರು ತಮ್ಮ ಪಡಿತರ ಚೀಟಿಯನ್ನು ಪಡಿತರ ಸಾಮಗ್ರಿ ಪೂರೈಕೆ ಮಾಡುವ ಅಂಗಡಿಗೆ ತೆರಳಿಗ ಕೆವೈಸಿ ಮಾಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

BPL Card Holders Alert Good news Karnataka Governament
Image Credit to Original Source

ಅಕ್ಟೋಬರ್‌ ತಿಂಗಳಿನ ಪಡಿತರ ಸಾಮಗ್ರಿಗಳನ್ನು ತಿಂಗಳ ಆರಂಭದಿಂದಲೇ ನೀಡಲಾಗುತ್ತಿದೆ. ಬೆಳಗಿನಿಂದ ಸಂಜೆಯ ಒಳಗಾಗಿ ಎಲ್ಲಾ ಗ್ರಾಹಕರು ತಮ್ಮ ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಕೆವೈಸಿ ಮಾಡಿಸಿಕೊಳ್ಳದೇ ಇರುವ ಗ್ರಾಹಕರಿಗೆ ಪಡಿತರ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗುವುದಿಲ್ಲ. ಪ್ರತೀ ಕುಟುಂಬದ ಸದಸ್ಯರು ಕೂಡ ತಮ್ಮ ಬೆರಳಚ್ಚು ನೀಡಿ ಕೆವೈಸಿ ಮಾಡಿಸಿವುದು ಕಡ್ಡಾಯವಾಗಿದೆ.

ಇದನ್ನೂ ಓದಿ : Ration Card e-KYC : ರೇಷನ್‌ ಕಾರ್ಡ್‌ಗೆ ಇಕೆವೈಸಿ ಕಡ್ಡಾಯ, ತಪ್ಪಿದ್ರೆ ರದ್ದಾಗುತ್ತೆ ಕಾರ್ಡ್‌

ಪಡಿತರ ವಿತರಣೆ ಮಾಡುವ ಅಂಗಡಿಗಳಲ್ಲಿಯೇ ಪಡಿತರ ಕಾರ್ಡುದಾರರ ಇಕೆವೈಸಿ ಕಾರ್ಯ ನಡೆಯುತ್ತಿದೆ. ಆದರೆ ಇದಕ್ಕಾಗಿ ಕಾರ್ಡುದಾರರು ಹಣವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಬಿಪಿಎಲ್‌ ಕಾರ್ಡುದಾರರ ಆಯ್ಕೆಗೆ ಸಂಬಂಧಿಸಿದಂತೆ ಹೊಸ ಮಾನದಂಡಗಳನ್ನು ಪರಿಚಯಿಸಿದೆ. ಇದರ ಅನ್ವಯ 1.20 ಲಕ್ಷಕ್ಕಿಂತ ಅಧಿಕ ಆದಾಯ ತೆರಿಗೆ ಪಾವತಿ ಮಾಡಿದವರ ಕಾರ್ಡುಗಳು ರದ್ದಾಗಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಯಾವಾಗ ಬಿಡುಗಡೆ ಆಗುತ್ತೆ ? ಇಲ್ಲಿದೆ ಮಹತ್ವದ ಸುದ್ದಿ

ಕಾಳಸಂತೆಯಲ್ಲಿ ಆಹಾರ ಸಾಮಗ್ರಿಗಳನ್ನು ಮಾರಾಟ ಮಾಡುವವರ ವಿರುದ್ದ ಹದ್ದಿನಕಣ್ಣು ಇರಿಸಲಾಗಿದೆ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಆಯಾಯ ಜಿಲ್ಲೆಗಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ. ಇನ್ನು ಕೇಂದ್ರ ಸರಕಾರ 2024ರ ವರೆಗೆ ಅಂತ್ಯೋದಯ, ಬಿಪಿಎಲ್‌ ಕಾರ್ಡುದಾರರಿಗೆ ಉಚಿತವಾಗಿ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಕೇಂದ್ರ ಸರಕಾರ ಗುಡ್‌ ನ್ಯೂಸ್‌ ಕೊಟ್ಟಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ದಾರರಿಗೆ ಶಾಕ್‌ : 22 ಲಕ್ಷ ಬಿಪಿಎಲ್‌, ಅಂತ್ಯೋದಯ ಕಾರ್ಡ್‌ ರದ್ದು

BPL Card Holders Alert Good news Karnataka Governament

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular