ನವದೆಹಲಿ : ದೇಶದಲ್ಲಿ ಯಾವುದೇ ವ್ಯವಹಾರಕ್ಕೂ ಪಾನ್‌ಕಾರ್ಡ್ ಕಡ್ಡಾಯಗೊಳಿಸಿದೆ. ಪಾನ್‌ಕಾರ್ಡ್ ಇಲ್ಲದೇ 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದ ವ್ಯವಹಾರ ನಡೆಯೋದು ಅಸಾಧ್ಯ. ಆದ್ರೆ ಪಾನ್ ಕಾರ್ಡ್ ಮನೆಯಲ್ಲಿಯೇ ಕುಳಿತು ಉಚಿತವಾಗಿ ಪಡೆಯಬಹುದು ಅನ್ನೋದು ಹಲವರಿಗೆ ಗೊತ್ತೇ ಇಲ್ಲಾ. ಹಾಗಾದ್ರೆ ಹತ್ತೇ ನಿಮಿಷದಲ್ಲಿ ಉಚಿತವಾಗಿ ಪಾನ್ ಕಾರ್ಡ್ ಪಡೆಯೋದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಆದಾಯ ತೆರಿಗೆ ಇಲಾಖೆಯ ಹಲವು ನಿಯಮಗಳಲ್ಲಿ ಸಡಿಲಿಕೆಯನ್ನು ಮಾಡಿದೆ. ಪಾನ್‌ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೋಷಣೆಗೆ ಸೂಚನೆಯನ್ನು ನೀಡಿದ್ದ ಆದಾಯ ತರಿಗೆ ಇಲಾಖೆ, ಇದೀಗ ಪಾನ್ ಕಾರ್ಡ್ ವಿತರಣೆ ಪ್ರಕ್ರಿಯೆ ಯನ್ನು ಸರಳಗೊಳಿಸಲಿದೆ. ಕೇವಲ ಹತ್ತು ನಿಮಿಷಗಳಲ್ಲಿ ರಿಯಲ್ ಟೈಂ ಆಧಾರದಲ್ಲಿ,ಅದರಲ್ಲೂ ಉಚಿತವಾಗಿ ಪಾನ್ ಕಾರ್ಡ್ ವಿತರಣೆ ಮಾಡುತ್ತಿದೆ.
ಕಳೆದ ಕೆಲವು ತಿಂಗಳ ಹಿಂದೆ ಇ-ಪಾನ್ ವಿತರಣೆ ಸೌಲಭ್ಯ ಆರಂಭಿಸಿದ್ದ, ಪ್ರಾಯೋಗಿಕ ಹಂತದ ಯಶಸ್ಸಿನಿಂದಾಗಿ ಇದೀಗ ಆದಾಯ ತೆರಿಗೆ ಇಲಾಖೆ ಇದೀಗ ಪೂರ್ಣ ಪ್ರಮಾಣದಲ್ಲಿಇ -ಪಾನ್ ಕಾರ್ಡ್ ವಿತರಣೆಯನ್ನು ಮಾಡುತ್ತಿದೆ. ಹೀಗಾಗಿ ಮನೆಯಲ್ಲಿಯೇ ಕುಳಿತು ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಆದಾಯ ತೆರಿಗೆ ಇಲಾಖೆ ಆನ್‌ಲೈನ್ ಇನ್‌ಸ್ಟಾಂಟ್ ಪ್ಯಾನ್ ಕಾರ್ಡ್ (ಇಪಿಎಎನ್) ವ್ಯವಸ್ಥೆ ಶುರು ಮಾಡಿದೆ. ಬಳಕೆದಾರರು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಗೆ ಹೋಗಿ ಲಾಗಿನ್ ಮಾಡಬೇಕು. ನಂತರ ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಬೇಕು. ಆದರೆ ಇದಕ್ಕೆ ಪ್ರತ್ಯೇಕವಾಗಿ ಯಾವುದೇ ದಾಖಲೆಗಳು ಬೇಕಾಗುವುದಿಲ್ಲ. ಮೊದಲು ಬಂದವರಿಗೆ ಮೊದಲ ಆಧ್ಯತೆ ಆಧಾರದ ಮೇಲೆ ಪಾನ್ ಪಡೆಯಬಹುದಾಗಿದೆ. ಇಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನೇ ವ್ಯಕ್ತಿಯ ಮೂಲ ಮಾಹಿತಿಗಳಾಗಿ ಪರಿಗಣಿಸಲಾಗುತ್ತದೆ.
ಇ-ಪಾನ್‌ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಲಾಗಿದ್ದು, ವ್ಯಕ್ತಿಯ ಮೂಲ ಮಾಹಿತಿಗಳನ್ನು ಒಳಗೊಂಡಿರಲಿದೆ. ಅಲ್ಲದೇ ಇ -ಪಾನ್ ಕಾರ್ಡ್‌ನಲ್ಲಿ ಅತೀ ಹೆಚ್ಚು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಈ ಕಾರ್ಡ್‌ನ್ನು ನಕಲು ಮಾಡಲು ಸಾಧ್ಯವಿಲ್ಲ. ಅಷ್ಟೇ ಅಲ್ಲಾ ಆದಾಯ ತೆರಿಗೆ ಇಲಾಖೆ ಇ -ಪಾನ್‌ಕಾರ್ಡ್‌ನ್ನು ಜನರಿಗೆ ಉಚಿತವಾಗಿ ವಿತರಣೆಯನ್ನು ಮಾಡಲು ಮುಂದಾಗಿದೆ.
ಆದಾಯ ತೆರಿಗೆ ಇಲಾಖೆ ಇನ್ಸ್ಟ್ಂಟ್ ಇ-ಪ್ಯಾನ್ ವ್ಯವಸ್ಥೆಯಡಿಯಲ್ಲಿ ಇ-ಪ್ಯಾನ್ ಕಾರ್ಡ್ ನ್ನು ಅತ್ಯಂತ ಸುಲಭವಾಗಿ ಪಡೆಯಬಹುದಾಗಿದೆ. ಬಳಕೆದಾರರು ತಮ್ಮ ಸಹಿಯಯನ್ನು ಸ್ಕ್ಯಾನ್ ಮಾಡಿ JPEG ಮಾದರಿಯಲ್ಲಿ ಅಪ್ಲೋಡ್ ಮಾಡಬೇಕು. ಆಧಾರ್ ಜೊತೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವ ಮೂಲಕ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಲಾಗುತ್ತದೆ. ಆದರೆ ಇದು ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಮಾತ್ರವೇ ಲಭ್ಯವಾಗಲಿದೆ.
ಇದನ್ನೂ ಓದಿ : TAX PAYERS ಗೆ ಸಿಹಿ ಸುದ್ಧಿ: ʼತೆರಿಗೆ ರಿಟರ್ನ್ಸ್ʼ ಸಲ್ಲಿಸಲು ಅವಧಿ ವಿಸ್ತರಿಸಿದ ಕೇಂದ್ರ ಸರಕಾರ
ಇದನ್ನೂ ಓದಿ : ಶಾಪಿಂಗ್ ಪ್ರಿಯರಿಗೆ ಬಿಗ್ ಶಾಕ್ : ಶಾಪಿಂಗ್ ಮಾಡಲು ಪಾನ್ ಜೊತೆ ಆಧಾರ್ ಲಿಂಕ್ ಕಡ್ಡಾಯ
(Get it for free in 10 minutes PANCARD: How to get a PAN without a Documents)