ನವದೆಹಲಿ : ತೈಲದರ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಮೂರು ದಿನಗಳಿಂದಲೂ ಮತ್ತೆ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಏರಿಕೆಯಾಗುತ್ತಿದೆ. ಮಂಗಳವಾರ ತೈಲ ದರ ದೇಶದಾದ್ಯಂತ ದಾಖಲೆಯ ಗರಿಷ್ಟ ಮಟ್ಟಕ್ಕೆ ಏರಿಕೆಯಾಗಿದೆ. ಕ್ರಮವಾಗಿ 25 ಪೈಸೆ ಮತ್ತು 30 ಪೈಸೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 102.64 ರೂ. ಮತ್ತು ಮುಂಬೈನಲ್ಲಿ 108.67 ರೂ. ಕ್ಕೆ ಏರಿಕೆ ಕಂಡಿದೆ. ಡೀಸೆಲ್ ದರಗಳು ದೆಹಲಿಯಲ್ಲಿ91.07 ರೂ. ಇದ್ರೆ, ಮುಂಬೈನಲ್ಲಿ 98.80ರೂ. ಗರಿಷ್ಠ ದಾಖಲೆಯನ್ನು ಬರೆದಿದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ 103.36 ರೂ. ಮತ್ತು ಡೀಸೆಲ್ 94.17 ರೂ. ಕ್ಕೆ ಸಿಗುತ್ತದೆ ಮತ್ತು ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 100.23 ರೂ. ಮತ್ತು ಒಂದು ಲೀಟರ್ ಡೀಸೆಲ್ ಗೆ 95.59 ರೂ. ಪಾವತಿಸಬೇಕು. ಸ್ಥಳೀಯ ತೆರಿಗೆಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ತೈಲದರದಲ್ಲಿ ವ್ಯತ್ಯಾಸವಿದೆ.
ಇದನ್ನೂ ಓದಿ : LPG subsidy : ನಿಮಗೆ ಎಲ್‌ಪಿಜಿ ಸಬ್ಸಿಡಿ ಬರ್ತಿಲ್ವಾ : ಈ ಕೆಲಸ ಮಾಡಿದ್ರೆ ತಕ್ಷಣವೇ ನಿಮ್ಮ ಖಾತೆಗೆ ಜಮೆಯಾಗುತ್ತೆ ಹಣ !
ಇನ್ನು ಉತ್ಪಾದನೆ ಮತ್ತು ಸಂಗ್ರಹಣೆಯ ವ್ಯಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಜಾಗತಿಕ ಪಟ್ಟದಲ್ಲಿಯೂ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆ ಗಳು ಮೂರು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪ್ (IOC), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (HPCL) ಅಂತಾರಾಷ್ಟ್ರೀಯ ತೈಲ ಬೆಲೆಗಳು ಮೂರು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಾಗತಿಕ ಮಾನದಂಡ ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ $ 78 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ.
ಆದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ಅಂತರಾಷ್ಟ್ರೀಯ ಕಚ್ಚಾ ತೈಲದ ದರ ಇಳಿಕೆಯಾಗಿದ್ದರೂ ಕೂಡ ದೆಹಲಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರವನ್ನು ಏರಿಕೆ ಮಾಡಲಾಗಿತ್ತು.
ಇದನ್ನೂ ಓದಿ : ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಭಾರೀ ಏರಿಕೆ ಕಂಡ ಅಡುಗೆ ಎಣ್ಣೆಯ ದರ
( Petrol and diesel prices goes record high in India : Check today rates )