Commercial LPG cylinder : ದಿನ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವುದು ಶ್ರೀ ಸಾಮಾನ್ಯನಿಗೆ ಇನ್ನಿಲ್ಲದ ಸಮಸ್ಯೆಯನ್ನು ತಂದೊಡ್ಡಿದೆ. ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳು, ಹಾಲಿನ ಉತ್ಪನ್ನಗಳು ಹೀಗೆ ಪ್ರತಿಯೊಂದು ಪದಾರ್ಥಗಳ ಬೆಲೆಯಲ್ಲಿಯೂ ಏರಿಕೆ ಕಾಣುತ್ತಿದೆ. ಈ ಎಲ್ಲಾ ಸಮಸ್ಯೆಗಳಿಂದ ಮಧ್ಯಮ ವರ್ಗದ ಹಾಗೂ ಬಡ ಜನತೆ ತಲೆ ಮೈ ಮೇಲೆ ಕೈ ಹೊತ್ತು ಕುಳಿತಿರುವ ನಡುವೆಯೇ ಇದೀಗ 19 ಕೆಜಿ ತೂಕದ ಎಲ್ಪಿಜಿ ಸಿಲಿಂಡರ್ಗಳ ದರವು ಇಂದಿನಿಂದ ಇಳಿಕೆ ಕಂಡಿದ್ದು ಶ್ರೀ ಸಾಮಾನ್ಯನಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಪ್ರತಿ ಯೂನಿಟ್ನ ಬೆಲೆಯನ್ನು 36 ರೂಪಾಯಿಗಳಿಗೆ ಕಡಿತಗೊಳಿಸಲಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ಗಳ ದರದಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಇರುವುದಿಲ್ಲ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ನ ದರವು ಪ್ರತಿ ಯೂನಿಟ್ಗೆ ಪ್ರಸ್ತುತ 1,975.5 ರೂಪಾಯಿ ಆಗಿದೆ . ಇದಕ್ಕೂ ಮುನ್ನ ಜುಲೈ ಆರರಂದು 19 ಕಿಲೋ ಗ್ರಾಮ್ ತೂಕದ ವಾಣಿಜ್ಯ ಸಿಲಿಂಡರ್ ದರವನ್ನು ಪ್ರತಿ ಯೂನಿಟ್ಗೆ 8.5 ರೂಪಾಯಿ ಕಡಿಮೆ ಮಾಡಲಾಗಿತ್ತು. ಇದಾದ ಬಳಿಕ ಇದೀಗ ಮತ್ತೆ ವಾಣಿಜ್ಯ ಸಿಲಿಂಡರ್ಗಳ ದರದಲ್ಲಿ ಇಳಿಕೆ ಮಾಡಲಾಗಿದೆ. ಅಂಕಿ ಅಂಶಗಳ ಪ್ರಕಾರ ದೇಶದ ಪ್ರಮುಖ ನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈಗಳಲ್ಲಿ ಎಲ್ಪಿಜಿ ಸಿಲಿಂಡರ್ ದರಗಳು ಕ್ರಮವಾಗಿ 2,012.50, ರೂ 2,132.00, ರೂ 1,972.50, ಮತ್ತು ರೂ 2,177.50 ಆಗಿದೆ.
ಜುಲೈ ಆರರಂದು 14.2 ಕೆಜಿ ತೂಕದ ಗೃಹೋಪಯೋಗಿ ಸಿಲಿಂಡರ್ಗಳ ಬೆಲೆಯನ್ನು ಪ್ರತಿ ಯೂನಿಟ್ಗೆ 50 ರೂಪಾಯಿ ಏರಿಕೆ ಮಾಡಲಾಗಿತ್ತು. ಇದಕ್ಕೂ ಹಿಂದೆ ಮೇ 19ರಂದು ದೇಶಿ ಸಿಲಿಂಡರ್ಗಳ ದರವನ್ನು ಪರಿಷ್ಕರಣೆ ಮಾಡಲಾಗಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಸ್ತುತ ಗೃಹೋಪಯೋಗಿ ಸಿಲಿಂಡರ್ಗಳ ದರವನ್ನು ಪ್ರತಿ ಯೂನಿಟ್ಗೆ 1053 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ಇದು ಕ್ರಮವಾಗಿ ರೂ 1,079, ರೂ 1,052.5 ಮತ್ತು ರೂ 1,068.5 ನಲ್ಲಿ ಮಾರಾಟವಾಗುತ್ತದೆ .
ಇದನ್ನು ಓದಿ : assault on kannada actor chandan kumar : ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಮೇಲೆ ಹಲ್ಲೆ: ತೆಲುಗಿನ ಶೂಟಿಂಗ್ ವೇಳೆ ಘಟನೆ
ಇದನ್ನೂ ಓದಿ : Former CM HD Kumaraswamy : ಪ್ರವೀಣ್, ಮಸೂದ್ ನಿವಾಸಕ್ಕೆ ಹೆಚ್ಡಿಕೆ ಭೇಟಿ : ತಲಾ 5 ಲಕ್ಷ ರೂ. ಪರಿಹಾರ
Commercial LPG cylinder prices slashed by Rs 36, domestic unchanged