ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆ ಬಗ್ಗೆ ಜನರಿಗೆ ಭರವಸೆ ನೀಡಿತ್ತು. ಆದರೆ ಮಹಿಳೆಯರಿಗೆ ಸರಕಾರ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಅದೆನೆಂದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯಲ್ಲಿ ಬಾರೀ ಬದಲಾವಣೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ. ರಾಜ್ಯದಲ್ಲಿ ವಾಸಿಸುವ ಮನೆಯ ಯಜಮಾನಿಗೆ (Gruha Lakshmi Scheme) ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಎರಡು ಸಾವಿರ ರೂ. ನೀಡುವುದಾಗಿ ಹೇಳಿಕೆ ನೀಡಿದ್ದು, ಇದೀಗ ಅದರಲ್ಲಿ ಭಾರೀ ಬದಲಾವಣೆಯನ್ನು ತಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸರಕಾರವು ಆಗಸ್ಟ್ 30 ರಂದು ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದರು. ಯೋಜನೆಯ ಪ್ರಕಾರ, ರಾಜ್ಯದಲ್ಲಿ ವಾಸಿಸುವ ಕುಟುಂಬದ ಮೊದಲ ಮಹಿಳಾ ಸದಸ್ಯೆಯ ಬ್ಯಾಂಕ್ ಖಾತೆಗೆ (Bank Account) ಸರಕಾರದಿಂದ ಪ್ರತಿ ತಿಂಗಳಿಗೆ 2,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿದ್ದಾರೆ. ರೇಷನ್ ಕಾರ್ಡ್‌ನಲ್ಲಿ ಮೊದಲ ಸದಸ್ಯೆ ಮನೆಯ ಯಜಮಾನಿ ಆಗಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನೆಯನ್ನು ಪಡೆಯುತ್ತಾರೆ. ಅದರ ಬದಲು ರೇಷನ್ ಕಾರ್ಡ್‌ನಲ್ಲಿ ಮೊದಲ ಹೆಸರು ಮನೆ ಯಜಮಾನದ್ದು ಇದ್ದರೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಅನ್ನಭಾಗ್ಯ ಯೋಜನೆ (Anna Bhagya Yojana) ಯಲ್ಲೂ ಇದೇ ಬದಲಾವಣೆಯನ್ನು ಮಾಡಲಾಗಿದ್ದು, ರೇಷನ್ ಕಾರ್ಡ್‌ನಲ್ಲಿ ಮನೆಯ ಯಜಮಾನಿಯ ಬದಲು ಯಜಮಾನನ ಹೆಸರು ಇದ್ದರೆ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದಿದ್ದಾರೆ. ಮನೆ ಯಜಮಾನನ ಹೆಸರು ಮೊದಲು ಇದ್ದರೆ ಅವರ ಬಳಿ ಹೊರಗಡೆ ದುಡಿಯುವುದಕ್ಕೆ ಹೇಳಿ, ನಾವು ಮನೆಯ ಯಜಮಾನಿಗೆ ಮಾತ್ರ ಯೋಜನೆ ಲಾಭ ನೀಡುತ್ತೇವೆ ಎಂದು ಹೇಳಿದ್ದು ಎಂದು ಸಿಎಂ ಸಿದ್ದರಾಮಯ್ಯ ಸರಕಾರ ಹೇಳಿದೆ.
ರಾಜ್ಯ ಸರಕಾರದ ಅಂಕಿಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಸುಮಾರು 1.10 ಕೋಟಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಸರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ‘ಗೃಹಲಕ್ಷ್ಮಿ’ ಕಾರ್ಯಕ್ರಮಕ್ಕೆ 17,500 ಕೋಟಿ ರೂ. ಮೀಸಲಿಡಲಾಗಿದೆ. ಮೇ ತಿಂಗಳಲ್ಲಿ ನಡೆದ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ 5 ಭರವಸೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯೂ ಒಂದಾಗಿದೆ.

ಕಾಂಗ್ರೆಸ್ ಸರಕಾರವು ಚುನಾವಣಾ ಪೂರ್ವ ಐದು ಭರವಸೆಗಳ ಪೈಕಿ ಮೂರನ್ನು ‘ಶಕ್ತಿ ಯೋಜನೆ’, ‘ಗೃಹ ಜ್ಯೋತಿ ಯೋಜನೆ’ ಮತ್ತು ‘ಅನ್ನ ಭಾಗ್ಯ’ ಈಗಾಗಲೇ ಜಾರಿಗೆ ತಂದಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೆಯದು ‘ಗೃಹ ಲಕ್ಷ್ಮಿ ಯೋಜನೆ’ ಆಗಿದ್ದು, ಈಗಾಗಲೇ ಅದಕ್ಕೂ ಚಾಲನೆ ನೀಡಲಾಗಿದೆ. ಐದನೆ ಯೋಜನೆಯಾದ ‘ಯುವ ನಿಧಿ’ಅಡಿಯಲ್ಲಿ ರಾಜ್ಯದ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಭರವಸೆ ನೀಡಲಾಗಿದೆ.
ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಜುಲೈ 19 ರಂದು ಪ್ರಾರಂಭವಾಯಿತು. ಅಂತ್ಯೋದಯ, ಬಡತನ ರೇಖೆಗಿಂತ ಕೆಳಗಿರುವ (BPL), ಮತ್ತು ಬಡತನ ರೇಖೆಗಿಂತ ಮೇಲಿನ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರೆಂದು ಪಟ್ಟಿ ಮಾಡಲಾದ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಾಗಿರುತ್ತಾರೆ. ಒಂದು ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಈ ಯೋಜನೆಯ ಫಲಾನುಭವಿಯಾಗುತ್ತಾರೆ. ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗದಿರುವುದಕ್ಕೆ ಇದೇ ಕಾರಣ ! ಹಾಗಾಗಿ ಈ ಕೆಲಸವನ್ನು ಇಂದೇ ಮಾಡಿ
ಒಂದೊಮ್ಮೆ ನೀವು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಆಗಿದ್ದರೆ, ನಿಮ್ಮ ಖಾತೆಗೆ ಹಣ ವರ್ಗಾವಣೆ ಆದ ಕೂಡಲೇ ಮೆಸೇಜ್ ಬರುತ್ತದೆ. ಈ ಮೆಸೇಜ್ ಬಂದಿಲ್ಲ ಎಂದಾದ್ರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಲಿಲ್ಲ ಎಂದೇ ಅರ್ಥ. ಇನ್ನು ಅಗಸ್ಟ್ 15 ರ ಒಳಗಾಗಿ ನೀವು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದರೆ ನಿಮ್ಮ ಖಾತೆಗೆ ಬಹುತೇಕ ಹಣ ವರ್ಗಾವಣೆ ಆಗಲಿದೆ. ಇದನ್ನೂ ಓದಿ : ಸೆಪ್ಟೆಂಬರ್ 11 ರಂದು ಬೆಂಗಳೂರು ಬಂದ್ : ಏನಿರುತ್ತೆ ? ಏನಿರಲ್ಲ ?
ಗೃಹ ಲಕ್ಷ್ಮಿ ಯೋಜನೆಯ ಸ್ಟೇಟಸ್ ಪರಿಶೀಲಿಸಿ :
ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿದವರು ತಮ್ಮ ಹೆಸರನ್ನು ನೋಂದಾಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಮುಂದಿನ ಹಂತಗಳನ್ನು ಅನುಸರಿಸಬೇಕಾಗಿದೆ.
- ಮೊದಲು ಸೇವಾ ಸಿಂಧು sevasindhuservices.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
- ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಿ ಎಂಬ ಆಯ್ಕೆಯು ವೆಬ್‌ಸೈಟ್‌ನ ಮೊದಲ ಪುಟದಲ್ಲಿಯೇ ಕಾಣಿಸುತ್ತದೆ.
- ನಿಮ್ಮ ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ. ನೆನಪಿಡಿ, ನೀವು ಅರ್ಜಿ ಸಲ್ಲಿಸಿದಾಗ ಸ್ವೀಕರಿಸಿದ ಅಪ್ಲಿಕೇಶನ್ ಸಂಖ್ಯೆಯು ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ಸಹ ಅಗತ್ಯವಿದೆ.
- ಚೆಕ್ ಸ್ಟೇಟಸ್ ನೌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಯಶಸ್ವಿಯಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಪಡೆಯಿರಿ. ಯಶಸ್ವಿಯಾದರೆ ಇಂದಿನಿಂದ 2 ಸಾವಿರ ರೂ. ಇದು ಇನ್ನೂ ಪ್ರಕ್ರಿಯೆ ಹಂತದಲ್ಲಿದ್ದರೆ ಈ ತಿಂಗಳು ನಿಮಗೆ ಈ ಹಣ ಸಿಗುವುದಿಲ್ಲ.
Congress government gave a big shock to women: Change in Annabhagya, Gruha Lakshmi Yojana