ನವದೆಹಲಿ : ಪೆಟ್ರೋಲ್ ದರ ಏರಿಕೆಯ ಬೆನ್ನಲ್ಲೇ ವಾಹನ ಸವಾರರಿಗೆ ಇದೀಗ ಡಿಸೇಲ್ ಶಾಕ್ ಕೊಟ್ಟಿದೆ. ಪೆಟ್ರೋಲ್ ದರ ನೂರರ ಗಡಿದಾಟಿದ ಬೆನ್ನಲ್ಲೇ ಇದೀಗ ಡಿಸೇಲ್ ಕೂಡ ಲೀಟರ್ ಗೆ 100 ರೂಪಾಯಿ ದಾಟಿದೆ. ಹಲವು ನಗರಗಳಲ್ಲಿಯೂ ಡಿಸೇಲ್ ದರ ನೂರರ ಗಡಿಯಲ್ಲಿದೆ.
ದೇಶದ ಹಲವು ನಗರಗಳಲ್ಲಿಯೂ ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ರಾಜಸ್ತಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಡೀಸೆಲ್ ಬೆಲೆಯು 99.80 ಇದ್ರೆ, ಪ್ರೀಮಿಯಮ್ ಡಿಸೇಲ್ ದರ 103.47ಕ್ಕೆ ಏರಿಕೆಯಾಗಿದೆ. ಬೆಂಗಳೂರಲ್ಲಿ ಡಿಸೇಲ್ ಬೆಲೆ 92.03 ರೂಪಾಯಿ ಇದ್ದು, ಶೀಘ್ರದಲ್ಲಿಯೇ ನೂರರ ಗಡಿದಾಟುವ ಸಾಧ್ಯತೆಯಿದೆ.
ದೇಶದ ಪ್ರಮುಖ ನಗರಗಳಾದ ಅಹಮದಾಬಾದ್ ನಲ್ಲಿ 93.66 ರೂ., ಚೆನ್ನೈನಲ್ಲಿ 91.64 ರೂ. ದೇಹಲಿಯಲ್ಲಿ 86.98 ರೂ., ಹೈದ್ರಾಬಾದ್ ನಲ್ಲಿ 94.82 ರೂ., ಕೋಲ್ಕತ್ತಾದಲ್ಲಿ 89.83ರೂ., ಮಂಗಳೂರಿನಲ್ಲಿ 91.44 ರೂ., ವಿಶಾಖಪಟ್ಟಣಂನಲ್ಲಿ 95.17ರೂ., ಇದ್ದು, ಎಲ್ಲಾ ನಗರಗಳಲ್ಲಿಯೂ ಡಿಸೇಲ್ ದರ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸದ್ಯದಲ್ಲಿಯೇ ಬಹುತೇಕ ರಾಜ್ಯಗಳಲ್ಲಿ ಡಿಸೇಲ್ ದರ ಶತಕ ಬಾರಿಸೋದು ಖಚಿತ
ಇನ್ನು ಪೆಟ್ರೋಲ್ ದರ ಈಗಾಗಲೇ 100 ರೂಪಾಯಿ ದಾಟಿದೆ. ಕಳೆದ 40 ದಿನಗಳ ಅವಧಿಯಲ್ಲಿ 23ನೇ ಬಾರಿಗೆ ತೈಲದರ ಏರಿಕೆ ಮಾಡಲಾಗಿದೆ. ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ತೈಲ ಬೆಲೆಯಲ್ಲಿ ಬಾರೀ ಏರಿಕೆಯಾಗುತ್ತಿದೆ. ಇನ್ನು ತೆರಿಗೆಯ ಹಿನ್ನೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸವಿದೆ.