ಮಂಗಳವಾರ, ಏಪ್ರಿಲ್ 29, 2025
HomebusinessChildren's Mutual Funds : ಚೈಲ್ಡ್‌ ಮ್ಯೂಚುವಲ್‌ ಫಂಡ್‌ ಬಗ್ಗೆ ನಿಮಗೆ ಗೊತ್ತಾ; ನಿಮ್ಮ ಮಕ್ಕಳ...

Children’s Mutual Funds : ಚೈಲ್ಡ್‌ ಮ್ಯೂಚುವಲ್‌ ಫಂಡ್‌ ಬಗ್ಗೆ ನಿಮಗೆ ಗೊತ್ತಾ; ನಿಮ್ಮ ಮಕ್ಕಳ ಭವಿಷ್ಯವನ್ನು ಹೀಗೆ ಸುರಕ್ಷಿತಗೊಳಿಸಿ

- Advertisement -

ಪೋಷಕರಿಗೆ ಯಾವಾಗಲೂ ತಮ್ಮ ಮಕ್ಕಳ (Children) ಭವಿಷ್ಯದ ಕನಸುಗಳ ಬಗ್ಗೆ ಯೋಚಿಸುತ್ತಿರುತ್ತಾರೆ. ಗಂಡು ಅಥವಾ ಹೆಣ್ಣು (Girl/Boy) ಮಗು ಯಾವುದೇ ಆಗಿರಲಿ ಶಿಕ್ಷಣದಿಂದ ಹಿಡಿದು ಮದುವೆಯವರೆಗಿನ ಖರ್ಚುಗಳಿಗಾಗಿ ಜನರು ಆರಂಭದಿಂದಲೂ ಯೋಚಿಸುತ್ತಿರುತ್ತಾರೆ. ಆದಾಯವು ಉತ್ತಮವಾಗಿರುವಾಗ ಅಪಾಯವೂ ಕಡಿಮೆ. ಅದಕ್ಕಾಗಿ ಮಕ್ಕಳ ಭವಿಷ್ಯಕ್ಕಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿಯೂ (Children’s Mutual Funds) ಹೂಡಿಕೆ ಮಾಡುವುದು ಉತ್ತಮ. ಅದು ದೀರ್ಘಾವಧಿಯಲ್ಲಿ ಉತ್ತಮ ಗಳಿಕೆ ತಂದುಕೊಡಬಲ್ಲದು.

ಸಾಮಾನ್ಯವಾಗಿ ಜನರು ಮಕ್ಕಳ ಭವಿಷ್ಯಕ್ಕಾಗಿ 5, 10 ಅಥವಾ ಅದಕ್ಕಿಂತ ಹೆಚ್ಚು ಕಾಲ ಹಣ ಹೂಡಿಕೆ ಮಾಡುತ್ತಾರೆ. ಇಕ್ವಟಿಗಳಲ್ಲಿ ಹೂಡಿಕೆ ಮಾಡುವುದು ಅವುಗಳಲ್ಲಿ ಒಂದಾಗಿದೆ. ದೀರ್ಘ ಸಮಯದೊಂದಿಗೆ ಅಪಾಯವೂ ಕಡಿಮೆ. ಇಕ್ವಿಟಿಗಳು ದೀರ್ಘಾವಧಿಯಲ್ಲಿ ಉತ್ತಮ ರಿಟರ್ನ್ಸ್‌ ನೀಡುತ್ತವೆ ಎಂದು ಹಣಕಾಸು ಸಲಹೆಗಾರರು ಹೇಳುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಷೇರು ಮಾರುಕಟ್ಟೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕಾಗುತ್ತದೆ. ಜೊತೆಗೆ ಪರಿಣತಿಯನ್ನು ಹೊಂದಿರಬೇಕಾಗುತ್ತದೆ. ಆದರೆ ಇಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಯಾವುದೇ ತೊಂದರೆಯಲ್ಲ. ಇದರಲ್ಲಿ ಉತ್ತಮ ಮ್ಯೂಚುವಲ್‌ ಫಂಡ್‌ಗಳನ್ನು ಆಯ್ದುಕೊಳ್ಳುವುದೇ ಜಾಣತನ. ಕೆಲವು ಮ್ಯೂಚುವಲ್‌ ಫಂಡ್‌ ಕಂಪನಿಗಳು ವಿಶೇಷವಾಗಿ ಮಕ್ಕಳಿಗಾಗಿ ಕೆಲವು ಯೋಜನೆಗಳನ್ನು ಪ್ರಾರಂಭಿಸಿವೆ.

ಮಕ್ಕಳ ಮ್ಯೂಚುವಲ್ ಫಂಡ್ ಅನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೆಗೆದುಕೊಳ್ಳಬಹುದು. ಈ ಹಣವನ್ನು ಮಕ್ಕಳ ಹೆಸರಿನಲ್ಲಿ ಮಾತ್ರ ತೆಗೆದುಕೊಳ್ಳಬಹುದಾಗಿದೆ. ಇದರಲ್ಲಿ ಜಂಟಿ ಖಾತೆಯಂತೆ ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೂಡಿಕೆಯ ಸಮಯದಲ್ಲಿ, ಮಗುವಿನ ವಯಸ್ಸಿನ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್‌ನ ಫೋಟೋಕಾಪಿ ಮತ್ತು ಮಗುವಿನೊಂದಿಗೆ ಪೋಷಕರ ಸಂಬಂಧದ ಪುರಾವೆಯನ್ನು ಹೊಂದಿರಬೇಕು. ಸಿಸ್ಟಮೆಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ನಲ್ಲಿ (SIP) ಸಂಪೂರ್ಣ ಮೊತ್ತವನ್ನು ಒಂದೇಸಲ ಹೂಡಿಕೆ ಮಾಡುವ ಬದಲು ಮಾಸಿಕ ಕಂತುಗಳನ್ನು ಪಾವತಿಸಿದರೆ ಉತ್ತಮ. ಇದು ಮಗುವಿಗೆ 18 ವರ್ಷ ತುಂಬುವವರಗೆ ಮುಂದುವರಿಯುತ್ತದೆ. ನಂತರ, SIP ನಿಲ್ಲುತ್ತದೆ. ಇದು ಮಕ್ಕಳ ನಿರ್ದಿಷ್ಟ ಗುರುಗಳನ್ನು ರೂಪಿಸಿಕೊಡುವುದರಲ್ಲಿ ಸಹಾಯ ಮಾಡುತ್ತದೆ. SIP ಮಾಡುವುದರಿಂದ ಹೂಡಿಕೆಯನ್ನು ಮಾನಿಟರ್‌ ಮಾಡುವುದು ಸುಲಭವಾಗುತ್ತದೆ.

ಮಕ್ಕಳ ಭವಿಷ್ಯಕ್ಕಾಗಿ ಆಯ್ದುಕೊಳ್ಳಬಹುದಾದ ಕೆಲವು ಉತ್ತಮ ಮ್ಯೂಚುವಲ್‌ ಫಂಡ್‌ಗಳು:
HDFC ಚಿಲ್ಡ್ರನ್ಸ್‌ ಗಿಫ್ಟ್‌ ಫಂಡ್‌
SBI ಮ್ಯಾಗ್ನಮ್‌ ಚೈಲ್ಡ್ಸ್‌ ಬೆನಿಫಿಟ್‌ ಫಂಡ್‌
ICICI ಪ್ರುಡೆನ್ಶಿಯಲ್‌ ಚೈಲ್ಡ್‌ ಕೇರ್‌ ಫಂಡ್‌

ಇದನ್ನೂ ಓದಿ : LIC Dhan Varsha Plan : ಎಲ್‌ಐಸಿ ಈ ಹೊಸ ಯೋಜನೆಯ ಪ್ರೀಮಿಯಂನಿಂದ ಪಡೆಯಿರಿ 10 ಪಟ್ಟು ಲಾಭ

ಇದನ್ನೂ ಓದಿ : ATM New Rules : ಈ ಬ್ಯಾಂಕ್‌ ಗ್ರಾಹಕರು ಎಟಿಎಂ ಹಣ ಡ್ರಾ ಮಾಡುವ ಮೊದಲು ಈ ಹೊಸ ನಿಯಮ ತಪ್ಪದೇ ಓದಿ

(Do you know Children’s Mutual Funds? How to invest there?)

RELATED ARTICLES

Most Popular