ಭಾನುವಾರ, ಏಪ್ರಿಲ್ 27, 2025
Homebusinessಕೇವಲ ಒಂದು ದಿನದಲ್ಲಿ ಎಲ್‌ಐಸಿಗೆ 1,400 ಕೋಟಿ ರೂ. ನಷ್ಟ !

ಕೇವಲ ಒಂದು ದಿನದಲ್ಲಿ ಎಲ್‌ಐಸಿಗೆ 1,400 ಕೋಟಿ ರೂ. ನಷ್ಟ !

- Advertisement -

ನವದೆಹಲಿ : ಭಾರತೀಯ ಜೀವವಿಮಾ ನಿಗಮ (LIC) ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಕೇವಲ ಒಂದೇ ಒಂದು ದಿನದಲ್ಲಿ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಎಲ್‌ಐಸಿಯು (LIC) ಅದಾನಿ ಕಂಪೆನಿಯ (Adani Company) ಹೊಡೆತಕ್ಕೆ ಸಿಲುಕಿ 1,400 ಕೋಟಿ ರೂ. ನಷ್ಟಕ್ಕೆ ಒಳಗಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಗಳ (OCCRP) ವರದಿ ಅದಾನಿ ಸಮೂಹಕ್ಕೆ ಬಾರೀ ಹೊಡೆತ ಕೊಟ್ಟಿದೆ. ಬಿಲಿಯನೇರ್ ಗೌತಮ್ ಅದಾನಿ (Gautham Adani) ಮತ್ತು ಅವರ ಪೋರ್ಟ್-ಟು-ಎನರ್ಜಿ ಗ್ರೂಪ್ ವಿರುದ್ಧ OCCRP ತನ್ನ ವರದಿಯಲ್ಲಿ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳನ್ನು ಮಾಡಿದೆ. ಅದಾನಿ ಸಮೂಹದ ಷೇರುಗಳು ಪಾತಾಳಕ್ಕೆ ಕುಸಿಯಲು ಆರಂಭಿಸಿದ್ದು, ಎಲ್‌ಐಸಿ ಕ್ಷಣಾರ್ಧದಲ್ಲಿಯೇ 1,400 ಕೋಟಿ ರೂ. ನಷ್ಟಕ್ಕೆ ಒಳಗಾಗಿದೆ.

ಅಷ್ಟಕ್ಕೂ ಅದಾನಿ ಸಮೂಹದ ಷೇರುಗಳ ಕುಸಿತಕ್ಕೂ ಭಾರತೀಯ ಜೀವ ವಿಮಾ ನಿಗಮಕ್ಕೂ ಇರುವ ಸಂಬಂಧವೇನು ಅಂತಾ ಅಚ್ಚರಿಯಾಗಬಹುದು. ಆದರೆ ವಿಚಾರ ಇರುವುದೇ ಇಲ್ಲಿ. ಭಾರತೀಯ ಜೀವ ವಿಮಾ ಕಂಪೆನಿ ಅದಾನಿ ಸಮೂಹದ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ. ಅದಾನಿ ಕಂಪೆನಿಯ ಷೇರುಗಳು ಕುಸಿತದ ಬೆನ್ನಲ್ಲೇ ಎಲ್‌ಐಸಿ ಕೂಡ ನಷ್ಟಕ್ಕೆ ಒಳಗಾಗಿದೆ.

Gautam Adani: Rs 1,400 crore for LIC in just one day. Loss!
Image Credit Original Source

ಪಾತಾಳಕ್ಕೆ ಕುಸಿದ ಅದಾನಿ ಕಂಪೆನಿ ಷೇರುಗಳು !

ಎನ್‌ಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.3.51ರಷ್ಟು ಕುಸಿದಿವೆ. ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇಕಡಾ 2.24 ರಷ್ಟು ಕುಸಿದವು. ಅದಾನಿ ಎನರ್ಜಿ ಸಲ್ಯೂಷನ್ಸ್‌ನ ಷೇರಿನ ಬೆಲೆಯು ಶೇಕಡಾ 3.53 ರಷ್ಟು ಕುಸಿದಿದೆ. ಅದಾನಿ ಗ್ರೀನ್ ಎನರ್ಜಿಯ ಷೇರಿನ ಬೆಲೆಯು ಶೇಕಡಾ 3.76 ರಷ್ಟು ಕಡಿಮೆಯಾಗಿದೆ. ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಷೇರುಗಳು ಶೇ.3.18ರಷ್ಟು ಕುಸಿದವು. ಆಗಸ್ಟ್ 31 ರಂದು ಎಸಿಸಿ ಷೇರುಗಳು ಶೇ.0.73, ಅಂಬುಜಾ ಸಿಮೆಂಟ್ಸ್ ಶೇ.3.66, ಎನ್‌ಡಿಟಿವಿ ಶೇ.1.92, ಅದಾನಿ ಪವರ್ ಶೇ.1.93 ಮತ್ತು ಅದಾನಿ ವಿಲ್ಮರ್ ಶೇ.2.70ರಷ್ಟು ಕುಸಿದವು. ಇದನ್ನೂ ಓದಿ : ಮನೆ ಖರೀದಿಸುವವರಿಗೆ ಸಿಹಿ ಸುದ್ದಿ : ಇಂದಿನಿಂದ ಜಾರಿಯಾಯ್ತು ಅಗ್ಗದ ಸಾಲದ ಯೋಜನೆ

Gautam Adani: Rs 1,400 crore for LIC in just one day. Loss!
Image Credit Original Source

ಅದಾನಿ ಕಂಪೆನಿಗೆ 35,000 ಕೋಟಿ ರೂಪಾಯಿ ನಷ್ಟ

ಅದಾನಿ ಸಮೂಹವು ಗುರುವಾರ 35,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ವಿನಿಮಯದ ಮಾಹಿತಿಯ ಪ್ರಕಾರ, ಆಗಸ್ಟ್ 30, 2023 ರಂತೆ ಎಲ್ಲಾ 10 ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ಸುಮಾರು 10.84 ಲಕ್ಷ ಕೋಟಿ ರೂ. ಆದರೆ ಆಗಸ್ಟ್ 31 ರಂದು ಸುಮಾರು 10.49 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ, ಒಂದೇ ದಿನದಲ್ಲಿ ಅದಾನಿ ಗ್ರೂಪ್ ಸುಮಾರು 35,000 ಕೋಟಿ ನಷ್ಟ ಅನುಭವಿಸಿದೆ. ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಪಡಿತರ ಕಾರ್ಡ್ ತಿದ್ದುಪಡಿಗೆ ಹೊಸ ರೂಲ್ಸ್

ಅದಾನಿ ಕಂಪೆನಿ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿದ ಬೆನ್ನಲ್ಲೇ ಅದಾನಿ ಕಂಪೆನಿ ಷೇರುಗಳು ಕುಸಿತವಾಗಿತ್ತು. ಆದರೆ ಒಸಿಸಿಆರ್‌ಪಿ ಮಾಡಿರುವ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್‌ ನಿರಾಕರಿಸಿದೆ. ಇದು ಸೊರೊಸ್‌ ನಿಧಿಯ ಗುಂಪುಗಳ ಹೊಸ ಪಿತೂರಿಯಾಗಿದೆ. ವಿದೇಶಿ ಮಾಧ್ಯಮಗಳೊಂದಿಗೆ ಸಹಕರಿಸಿ, ಷೇರುಗಳ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ನಮ್ಮನ್ನು ದೂಷಿಸಲು ಮುಂದಾಗಿದ್ದಾರೆ ಎಂದು ಅದಾನಿ ಕಂಪೆನಿ ಹೇಳಿದೆ ಎಂದು ಇಕಾನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಅಷ್ಟಕ್ಕೂ ಏನಿದು ಒಸಿಸಿಆರ್‌ಪಿ ವರದಿ ?
ಒಸಿಸಿಆರ್‌ಪಿ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವ ಸಂಸ್ಥೆಯಾಗಿದೆ. ಈ ಕಂಪೆನಿಯ ತನಿಖಾ ಪತ್ರಕರ್ತರ ತಂಡ ಆರು ಖಂಡಗಳಲ್ಲಿದ್ದು, 2006 ರಲ್ಲಿ ಈ ಸಂಸ್ಥೆ ಆರಂಭಗೊಂಡಿತ್ತು. ಪ್ರಮುಖವಾಗಿ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಮಾಡುವುದರಲ್ಲಿ ಇದು ಪ್ರಖ್ಯಾತಿಯನ್ನು ಹೊಂದಿದ್ದು, ರಷ್ಯನ್‌ ಹಾಗೂ ಇಂಗ್ಲೀಷ್‌ ಭಾಷೆಗಳಲ್ಲಿ ತನಿಖಾ ವರದಿಗಳನ್ನು ತನ್ನ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತಿದೆ.

Gautam Adani: Rs 1,400 crore for LIC in just one day. Loss!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular