ಸೋಮವಾರ, ಏಪ್ರಿಲ್ 28, 2025
Homebusinessಚಿನ್ನದ ಬೆಲೆ ಮತ್ತೆ ಏರಿಕೆ, ತುಸು ತಗ್ಗಿದ ಬೆಳ್ಳಿಯ ದರ

ಚಿನ್ನದ ಬೆಲೆ ಮತ್ತೆ ಏರಿಕೆ, ತುಸು ತಗ್ಗಿದ ಬೆಳ್ಳಿಯ ದರ

- Advertisement -

ನವದೆಹಲಿ : ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರವು (Gold Silver Rate) ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸತತವಾಗಿ ಇಳಿಕೆ ಕಂಡಿತ್ತು. ಆದರೆ ಇಂದು (ಮೇ 14) ಚಿನ್ನದ ಬೆಲೆಯಲ್ಲಿ ತುಸು ಏರಿಕೆ ಕಂಡಿದ್ದ, ಬೆಳ್ಳಿ ಮತ್ತಷ್ಟು ಅಗ್ಗವಾಗಿದೆ. ಜನರು ತಮ್ಮ ಆದಾಯದ ಸ್ವಲ್ಪ ಭಾಗವನ್ನು ಉತ್ತಮ ಭವಿಷ್ಯದ ನಿರ್ವಹಣೆಗಾಗಿ ಚಿನ್ನಾಭರಣಗಳ ಮೇಲೆ ಹೂಡಿಕೆ ಮಾಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದಿಂದಾಗಿ ಗೊಂದಲಕ್ಕೆ ಒಳಗಾಗಿದ್ದಾರೆ.

ಕಳೆದ ವಾರ ಅಂದರೆ ಮೇ 5ರಂದು 100 ಗ್ರಾಮ್‌ಗೆ 7825 ರೂ. ಇದ್ದ ಬೆಳ್ಳಿ ಬೆಲೆ ಇದೀಗ 7485 ರೂ. ಗೆ ಇಳಿದಿದೆ. ಹೀಗಾಗಿ 9 ದಿನದಲ್ಲಿ ಸುಮಾರು 345 ರೂ.ನಷ್ಟು ಬೆಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಸದ್ಯ ಭಾರತದಲ್ಲಿ ವಿವಿಧ ವಾಣಿಜ್ಯ ನಗರಗಳಲ್ಲಿ 10 ಗ್ರಾಮ್‌ನ 22 ಕ್ಯಾರೆಟ್‌ ಚಿನ್ನದ ಬೆಲೆ 56650 ರೂಪಾಯಿ ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ 61800 ರೂಪಾಯಿ ಆಗಿದೆ. 100 ಗ್ರಾಮ್‌ ಬೆಳ್ಳಿ ಬೆಲೆ 7480 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 56700 ರೂಪಾಯಿ ಆಗಿದೆ. ಬೆಳ್ಳಿ ಬೆಲೆ 100 ಗ್ರಾಮ್‌ಗೆ 7850 ರೂಪಾಯಿ ಆಗಿರುತ್ತದೆ. ಇನ್ನುಳಿದಂತೆ ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿರುವ 22 ಕ್ಯಾರೆಟ್‌ ಚಿನ್ನದ ಬೆಲೆ (10ಗ್ರಾಮ್‌) ವಿವರ :

  • ಬೆಂಗಳೂರು : ರೂ. 56700
  • ಚೆನ್ನೈ : ರೂ. 57150
  • ಮುಂಬೈ : ರೂ. 56650
  • ದೆಹಲಿ : ರೂ. 56800
  • ಕೋಲ್ಕತ್ತಾ : ರೂ. 56650
  • ಕೇರಳ : ರೂ. 56650
  • ಅಹ್ಮದಬಾದ್‌ : ರೂ. 56700
  • ಜೈಪುರ : ರೂ. 56800
  • ಲಕ್ನೋ : ರೂ. 56800
  • ಭುವನೇಶ್ವರ್‌ : ರೂ. 56650

ದೇಶದ ವಿವಿಧ ವಾಣಿಜ್ಯ ನಗರಗಳಲ್ಲಿ ಬೆಳ್ಳಿ ಬೆಲೆ (100ಗ್ರಾಮ್)‌ ವಿವರ :

  • ಬೆಂಗಳೂರು : ರೂ. 7850
  • ಚೆನ್ನೈ : ರೂ. 7850
  • ಮುಂಬೈ : ರೂ. 7480
  • ದೆಹಲಿ : ರೂ. 7480
  • ಕೋಲ್ಕತ್ತಾ : ರೂ. 7480
  • ಕೇರಳ : ರೂ. 7850
  • ಅಹ್ಮದಾಬಾದ್‌ : ರೂ. 7480
  • ಜೈಪುರ : ರೂ. 7480
  • ಲಕ್ನೋ : ರೂ. 7480
  • ಭುವನೇಶ್ವರ್‌ : ರೂ. 7850

ಇದನ್ನೂ ಓದಿ : ನಿಮ್ಮ ಪ್ಯಾನ್‌ ಕಾರ್ಡ್‌ ತಿದ್ದುಪಡಿ ಮಾಡಬೇಕಾ ? ಹಾಗಾದ್ರೆ ಇಲ್ಲಿದೆ ಮಾಹಿತಿ

ಇನ್ನು ಅನ್ವಯವಾಗುವ ಎಲ್ಲಾ ತೆರಿಗೆಗಳು ಮತ್ತು ಶುಲ್ಕಗಳು ಸೇರಿದಂತೆ ನಿಜವಾದ ದರಗಳನ್ನು ಪಡೆಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣ ಅಂಗಡಿಗಳಿಗೆ ಭೇಟಿ ನೀಡಲು ಸಲಹೆ ನೀಡಲಾಗುತ್ತದೆ. ಗ್ರಾಹಕರು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಪಾವತಿಸಬೇಕಾದ ಅಂತಿಮ ಬೆಲೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಭಾರತದಲ್ಲಿ ಚಿನ್ನದ ಬೆಲೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಬಾಷ್ಪಶೀಲ ನೀತಿಗಳು, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಯುಎಸ್ ಡಾಲರ್ ಎದುರು ರೂಪಾಯಿಯ ಬಲ ಸೇರಿದಂತೆ ಹಲವಾರು ಅಂಶಗಳಿಂದ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

Gold Silver Rate: Gold price increased again, silver rate slightly decreased

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular