ಗೃಹಲಕ್ಷ್ಮೀ ಯೋಜನೆ 11ನೇ ಕಂತು : ರಾಜ್ಯ ಸರಕಾರದಿಂದ ಭರ್ಜರಿ ಗುಡ್‌ನ್ಯೂಸ್‌

Gruha lakshmi 11th installment  : ಗೃಹಲಕ್ಷ್ಮೀ ಯೋಜನೆಯ (Gruha Lakshmi scheme ) ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋಟಿಗೂ ಅಧಿಕ ಮಹಿಳೆಯರು ಪ್ರತೀ ತಿಂಗಳು 2000 ರೂಪಾಯಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ.

Gruha lakshmi 11th installment  : ಗೃಹಲಕ್ಷ್ಮೀ ಯೋಜನೆಯ (Gruha Lakshmi scheme ) ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋಟಿಗೂ ಅಧಿಕ ಮಹಿಳೆಯರು ಪ್ರತೀ ತಿಂಗಳು 2000 ರೂಪಾಯಿ ಆರ್ಥಿಕ ನೆರವು ಪಡೆಯುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ಈಗಾಗಲೇ 10ನೇ ಕಂತು ಬಿಡುಗಡೆ ಆಗಿದ್ದು, 11ನೇ ಕಂತಿನ ಹಣ ಬಿಡುಗಡೆಗಾಗಿ ಮಹಿಳೆಯರು ಕಾಯುತ್ತಿದ್ದಾರೆ. ಈ ನಡುವಲ್ಲೇ ಗೃಹಲಕ್ಷ್ಮೀ ಯೋಜನೆಯ ವಿಚಾರದಲ್ಲಿ ಮತ್ತೊಂದು ಗುಡ್‌ನ್ಯೂಸ್‌ ಹೊರಬಿದ್ದಿದೆ.

Gruha Lakshmi 11th installment payment released date 2024 Karnataka Gruha Lakshmi scheme Good News
Image Credit : News Next

ಕರ್ನಾಟಕ ಸರಕಾರ ನೀಡಿರುವ ಅಂಕಿ ಅಂಶಗಳ ಪ್ರಕಾರ ಸರಿ ಸುಮಾರು 1 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು, ಕೆಲವೇ ಕೆಲವು ಮಹಿಳೆಯರಿಗೆ ಮಾತ್ರ ಈ ಯೋಜನೆಯ ಪ್ರಯೋಜ ಸಿಗುತ್ತಿಲ್ಲ. ಬ್ಯಾಂಕ್‌ ಖಾತೆಯ ಸಮಸ್ಯೆ (Bank Account), ಆಧಾರ್‌ ಜೊತೆ ರೇಷನ್‌ ಕಾರ್ಡ್‌ ಲಿಂಕ್‌ (Aadhaar Card and Ration Card Link) ಆಗದೇ ಇರುವುದು, ಹೆಸರಿನ ದೋಷ ಸೇರಿದಂತೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ ಜಮೆ (DBT)  ಆಗಿಲ್ಲ.

ಒಂದೊಮ್ಮೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ನಿಮಗೆ ಇದುವರೆಗೂ ಗೃಹಲಕ್ಷ್ಮೀ ಯೋಜನೆಯ ಕಂತಿನ ಹಣ ಜಮೆ ಆಗದೇ ಇದ್ದಲ್ಲಿ ನೀವು ಕೂಡ ನಿಮ್ಮ ಬ್ಯಾಂಕ್‌ ಖಾತೆಯ ವಿವರ (Bank Details), ಆಧಾರ್‌ ಕಾರ್ಡ್‌ (Aadhaar Card), ರೇಷನ್‌ ಕಾರ್ಡ್‌ (Ration Card) ನಲ್ಲಿರುವ ಮಾಹಿತಿ, ನಿಮ್ಮ ಹೆಸರಿನ ದೋಷವಿದೆಯಾ ಅಂತಾ ಒಮ್ಮೆ ಪರಿಶೀಲನೆ ನಡೆಸಿಕೊಳ್ಳಿ. ಬ್ಯಾಂಕ್‌ ಖಾತೆಯಲ್ಲಿ ದೋಷವಿದ್ದರೆ ಬ್ಯಾಂಕ್‌ ಶಾಖೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು.

Gruha Lakshmi 11th installment payment released date 2024 Karnataka Gruha Lakshmi scheme Good News
Image Credit to Original Source

ಬ್ಯಾಂಕ್‌ ಖಾತೆಯ ಬದಲು ಅಂಚೆ ಕಚೇರಿಯಲ್ಲಿ (Post Office Account) ಖಾತೆಯನ್ನು ತೆರೆದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತಾಂತ್ರಿಕ ಕಾರಣದಿಂದಲೇ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಬಾರದೇ ಇದ್ರೆ ನಿಮ್ಮ ಸಮೀಪದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡುವುದು ಒಳಿತು. ಅಧಿಕಾರಿಗಳು ನಿಮಗೆ ಸಂಪರ್ಕವಾಗಿ ಮಾಹಿತಿಯನ್ನು ಒದಗಿಸುತ್ತಾರೆ.

ಇದನ್ನೂ ಓದಿ : Google Wallet : ಭಾರತದಲ್ಲಿ ಆರಂಭವಾಯ್ತು ಗೂಗಲ್‌ ವ್ಯಾಲೆಟ್‌ Google Payಗಿಂತ ಹೇಗೆ ಭಿನ್ನ ? ಏನಿದರ ಉಪಯೋಗ ?

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ನಿಮಗೆ 10 ನೇ  (Gruha Lakshmi 110 th installment )ಕಂತಿನ ಹಣ ಜಮೆ ಆಗಿದ್ರೆ 11 ನೇ ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಮಾಹಿತಿಯನ್ನು ನೀಡಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಲೋಕಸಭಾ ಚುನಾವಣೆ (Lok Sabha election 2024) ಯ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುವುದು ವಿಳಂಭವಾಗಿತ್ತು.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ :ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಸಿಗುತ್ತೆ ಹಣ

ಆದರೆ ಗೃಹಲಕ್ಷ್ಮೀ ಯೋಜನೆ ೧೧ನೇ ಕಂತಿನ ಹಣ ಇನ್ನೂ ಎರಡು ದಿನಗಳಲ್ಲಿ ನಿಮ್ಮ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಆಗಲಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ನೀಡಿರುವ ಮಾಹಿತಿಯ ಪ್ರಕಾರ, ಜೂನ್‌ ೨೦ ರಂದು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗುವುದು ಖಚಿತ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಯ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆ ರದ್ದಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದು, ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ರೀಗ ಖುದ್ದು ಸಚಿವರೇ ಈ ಕುರಿತು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಮಹಿಳೆಯರ ಆತಂಕ ಕಡಿಮೆ ಆಗಲಿದೆ.

ಇದನ್ನೂ ಓದಿ :40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !

Gruha Lakshmi 11th installment payment released date 2024 Karnataka Gruha Lakshmi scheme Good News

Comments are closed.