Gruha Lakshmi Scheme : ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ ಹಣಕ್ಕಾಗಿ ಕಾದು ಕುಳಿತಿರುವ ಗೃಹಿಣಿಯರಿಗಾಗಿ ರಾಜ್ಯ ಸರಕಾರ ಗುಡ್‌ನ್ಯೂಸ್ ಕೊಟ್ಟಿದೆ. ಪ್ರತೀ ತಿಂಗಳು ಆರಂಭವಾದ್ರೆ ಸಾಕು ಯಾವ ದಿನಾಂಕದಂದು ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುತ್ತೆ ಅಂತಾ ಕಾದು ಕುಳಿತಿರುವ ಯಜಮಾನಿಯರು ಇನ್ಮುಂದೆ ಕಾಯುವ ಅಗತ್ಯ ಇರೋದಿಲ್ಲ. ಯಾಕೆಂದ್ರೆ ಸರಕಾರ ಈ ಕುರಿತು ಮಹತ್ವದ ಮಾಹಿತಿಯೊಂದನ್ನು ನೀಡಿದೆ.

ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈಗಾಗಲೇ ಹತ್ತು ಕಂತುಗಳ ಹಣ ಗೃಹಿಣಿಯರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಆಗಿದೆ. ಸದ್ಯ 11 ನೇ ಕಂತಿನ ಹಣಕ್ಕಾಗಿ ಕೋಟ್ಯಾಂತರ ಯಜಮಾನಿಯರು ಕಾಯುತ್ತಿದ್ದಾರೆ. ಈ ಹೊತ್ತಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿರುವ ಕುಟುಂಬಗಳ ಪೈಕಿ ಒಟ್ಟು ಶೇ.98 ರಷ್ಟು ಮಹಿಳೆಯರು ಈಗಾಗಲೇ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಬಹುತೇಕ ಮಹಿಳೆಯರು ಕಳೆದ ಹತ್ತು ತಿಂಗಳಿನಿಂದಲೂ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ ೧೧ನೇ ಕಂತಿನ ಹಣಕ್ಕಾಗಿ ಗೃಹಿಣಿಯರು ಕಾಯುತ್ತಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ : ಈ ಮಹಿಳೆಯರ ಹೆಸರು ಪಟ್ಟಿಯಿಂದ ಡಿಲೀಟ್, ಇನ್ಮುಂದೆ ಸಿಗಲ್ಲ ಹಣ
ಸದ್ಯ ಬಾಕಿ ಇರುವ 11ನೇ ಕಂತಿನ ಹಣ ಜುಲೈ ೧೫ರ ಒಳಗಾಗಿ ಪಾವತಿಯಾಗಲಿದೆ ಎಂದು ಹೇಳಿ ನೀಡಿದ್ದಾರೆ. ಸದ್ಯ ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಗೆ ಬಾಕಿ ಉಳಿದಿದೆ. ಹೀಗಾಗಿ ಒಂದು ತಿಂಗಳ ಹಣ ಪಾವತಿಯಾದ ಒಂದು ವಾರದ ಒಳಗಾಗಿ ಬಾಕಿ ಹಣ ಪಾವತಿಯಾಗಲಿದೆ.

ಇದನ್ನೂ ಓದಿ : 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ಯಾ ಚೆಕ್ ಮಾಡಿ
ಅಷ್ಟೇ ಅಲ್ಲದೇ ಇನ್ಮುಂದೆ ಪ್ರತೀ ತಿಂಗಳ 15ನೇ ತಾರೀಕಿನ ಒಳಗಾಗಿ ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಆಗಲಿದೆ. ಈ ಕುರಿತು ಯಾರೂ ಕೂಡ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ಚುನಾವಣೆಯ ಬೆನ್ನಲ್ಲೇ ರದ್ದಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಇದನ್ನೂ ಓದಿ : ಜೂನ್ ತಿಂಗಳ ಗೃಹಲಕ್ಷ್ಮೀ ಹಣ ಬಂದಿಲ್ವಾ ? ಕಾರಣ ಇಲ್ಲಿದೆ ನೋಡಿ
ಇದಕ್ಕೆ ಪುಷ್ಟಿ ನೀಡುವಂತೆ ಚುನಾವಣೆಯ ನಂತರದಲ್ಲಿ ಯಜಮಾನಿಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಆದ್ರೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದ್ಯ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳನ್ನೂ ರದ್ದು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
Gruha Lakshmi Scheme Big Updates Good News For Karnataka News In Kannada