ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ (Gruha lakshmi Scheme) ಫಲಾನುಭವಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಮೂರು ತಿಂಗಳಿನಿಂದಲೂ ಗೃಹಲಕ್ಷ್ಮೀ ಹಣ ಸಿಗದೆ ಕಂಗಾಲಾಗಿದ್ದ ಗೃಹಿಣಿಯರಿಗೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹಾಗಾದ್ರೆ ಗೃಹಲಕ್ಷ್ಮೀ ಬಾಕಿ ಹಣ ಯಾವಾಗ ಪಾವತಿ ಆಗಲಿದೆ ಅನ್ನೋ ಕಂಪ್ಲೀ ಡೀಟೇಲ್ಸ್ ಇಲ್ಲಿದೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮೂರು ತಿಂಗಳ ಹಣ ಇನ್ನೂ ಜಮೆ ಆಗೋದಕ್ಕೆ ಬಾಕಿ ಉಳಿದಿದೆ.
ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳ ಗೃಹಲಕ್ಷ್ಮೀ ಹಣ ಜಮೆ ಆಗಿಲ್ಲ. ಇದರ ಬೆನ್ನಲ್ಲೇ ಗೃಹಲಕ್ಷ್ಮೀ ಯೋಜನೆಯೇ ಸ್ಥಗಿತವಾಗುತ್ತೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದ್ರೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಮಾಹಿತಿ ಗೃಹಿಣಿಯರಿಗೆ ಖುಷಿ ಕೊಟ್ಟಿದೆ. ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 19ನೇ ಕಂತಿನ ಹಣ ಈಗಾಗಲೇ ಜಮೆ ಆಗಿದೆ.
Also Reach : BIG UPDATES : 500 ರೂಪಾಯಿ ನೋಟು ನಿಷೇಧ..!
ಶೀಘ್ರದಲ್ಲಿಯೇ 20ನೇ ಕಂತಿನ ಹಣ ಜಮೆ ಆಗಲಿದೆ. ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಗೆ ತಾಂತ್ರಿಕ ಸಮಸ್ಯೆ ಆಗಿದೆ. ಆದರೆ ಎಪ್ರಿಲ್‌ತಿಂಗಳ ಹಣ ಶೀಘ್ರದಲ್ಲಿಯೇ ಜಮೆ ಆಗಲಿದೆ. ಯಾರೂ ಕೂಡ ಗೃಹಲಕ್ಷ್ಮೀ ಯೋಜನೆಯ ಕಂತಿನ ಪಾವತಿಯ ಕುರಿತು ಆತಂಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.
ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಿನಿಂದ ಒಟ್ಟು 6000 ರೂಪಾಯಿ ಒಟ್ಟಿಗೆ ಜಮೆ ಆಗುವ ಸಾಧ್ಯತೆಯಿದೆ. ಕಳೆದ ಚುನಾವಣೆಯ ಹೊತ್ತಲ್ಲೂ ಸರಕಾರ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣವನ್ನು ಒಟ್ಟಿಗೆ ಪಾವತಿ ಮಾಡಿತ್ತು. ಇದೀಗ ಒಟ್ಟಿಗೆ ಮೂರು ಕಂತುಗಳ ಹಣ ಜಮೆ ಮಾಡುವ ಸಾಧ್ಯತೆಯಿದೆ.
Also Read : 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ : ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆ
ಗೃಹಲಕ್ಷ್ಮೀ ಯೋಜನೆಯ (Gruha lakshmi Scheme) ಅಡಿಯಲ್ಲಿ ಕರ್ನಾಟಕ ಸರಕಾರ ಪ್ರತೀ ಕುಟುಂಬದ ಗೃಹಿಣಿಯರಿಗೆ ಮಾಸಿಕ 2000 ರೂಪಾಯಿಯನ್ನು ನೀಡುತ್ತಿದೆ. ಆರ್ಥಿಕ ಸ್ವಾವಲಂಬನೆಗಾಗಿ ಈ ಯೋಜನೆಯ ಹಣವನ್ನು ಗೃಹಿಣಿಯರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದು, ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇರುವವರೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುವುದು ಖಚಿತ ಎನ್ನಲಾಗುತ್ತಿದೆ.
Gruha lakshmi Scheme Good News this month deposited 4000rs in account Kannada News