Gruha Lakshmi Scheme : ರಾಜ್ಯ ಸರ್ಕಾರ ಆರಂಭಿಸಿದ ಗ್ಯಾರಂಟಿಗಳ ಪೈಕಿ ಅತ್ಯಂತ ಹೆಚ್ಚು ಜನರನ್ನು ತಲುಪಿದ್ದು ಗೃಹ ಲಕ್ಷ್ಮೀ ಯೋಜನೆ. ಪ್ರತಿಮನೆಯ ಹೆಣ್ಣುಮಕ್ಕಳಿಗೆ ಎರಡು ಸಾವಿರ ರೂಪಾಯಿ ಕೊಡುವ ಈ ಯೋಜನೆ ಸಹಜವಾಗಿಯೇ ಗೃಹಲಕ್ಷ್ಮೀಯರ ಮನಗೆದ್ದಿತ್ತು. ಮಾತ್ರವಲ್ಲ ಮಹಿಳೆಯರ ಸಬಲೀಕರಣಕ್ಕೂ ಸಹಾಯವಾಗಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಯ ಇತರ ಯೋಜನೆಗಳು ಹಾಗೂ ಗೃಹಲಕ್ಷ್ಮೀಯರು ಇಬ್ಬರೂ ಕಾಂಗ್ರೆಸ್ ಕೈಹಿಡಿದಿಲ್ಲ. ಅದಕ್ಕಾಗಿ ಸದ್ಯ ಸರ್ಕಾರ ಆರ್ಥಿಕವಾಗಿ ಹೊರೆಯಾಗುತ್ತಿರುವ ಗೃಹಲಕ್ಷ್ಮೀ ಯೋಜನೆ ಸ್ಥಗಿತಕ್ಕೆ ಸಿದ್ಧತೆ ನಡೆಸಿದ್ದು ಈಗಾಗಲೇ ಜೂನ್ ತಿಂಗಳಿನಿಂದ ಹಣ ನೀಡದಿರಲು ತೀರ್ಮಾನಿಸಿದೆ ಎನ್ನಲಾಗ್ತಿದೆ.

ಸರ್ಕಾರದ ಬಹುತೇಕ ಇಲಾಖೆಗಳು ಆರ್ಥಿಕನಷ್ಟದಲ್ಲಿದೆ. ಇಂಧನ ಇಲಾಖೆ ಗೃಹಜ್ಯೋತಿಯಿಂದ ನಲುಗಿದ್ದರೇ, ಉಚಿತ ಬಸ್ ಪ್ರಯಾಣದ ಕಾರಣಕ್ಕೆ ರಾಜ್ಯ ಸಾರಿಗೆ ಇಲಾಖೆ ಸಂಬಳಕೊಡಲು ಹಣವಿಲ್ಲದ ಸ್ಥಿತಿ ತಲುಪಿದೆ. ಈ ಮಧ್ಯೆ ಗೃಹಲಕ್ಷ್ಮಿಯರಿಗೆ ಹಣ ಕೊಡಲು ಸರಕಾರದ ಬಳಿ ಹಣ ಇಲ್ಲ ಎನ್ನಲಾಗಿದ್ದು, ಜೂನ್ ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದ್ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗ್ತಿದೆ.
ಕಳೆದ ಕೆಲ ತಿಂಗಳಿನಿಂದಲೇ ರಾಜ್ಯದ ಸಾವಿರಾರು ಗೃಹಲಕ್ಷ್ಮೀ ಫಲಾನುಭವಿಗಳಿಗೆ ಸರ್ಕಾರದಿಂದ ಹಣಬಂದಿಲ್ಲ. ಆದರೆ ಚುನಾವಣೆಯ ಕಾರಣಕ್ಕೆ ಯೋಜನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿರಲಿಲ್ಲ. ಆದರೆ ಈಗ ಜೂನ್ ತಿಂಗಳಿನಲ್ಲಿ ಯಾರಿಗೂ ಹಣ ಪಾವತಿಯಾಗಿಲ್ಲ. ನ್ಯೂಸ್ ಫರ್ಸ್ಟ್ ಗೆ ಲಭ್ಯವಾದ ದಾಖಲೆಗಳ ಪ್ರಕಾರ ಕಳೆದ ಆಗಸ್ಟ್ ನಿಂದ ಮೇ ತಿಂಗಳವರೆಗೆ ಮಾತ್ರ ಹಣ ಪಾವತಿಯಾಗಿದ್ದು ಜೂನ್ ತಿಂಗಳ ಹಣವನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಆರ್ಥಿಕ ಇಲಾಖೆ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ
ಮೇ ತಿಂಗಳ ನಂತರ ಹಣ ಕೊಡಲು ಇಲಾಖೆ ಬಳಿ ಹಣ ಇಲ್ಲ. ಹೀಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೂನ್ ತಿಂಗಳು ಹಣ ಪಾವತಿ ಮಾಡದೇ ಕೈ ಕಟ್ಟಿ ಕುಳಿತಿದೆ. ಈಗಾಗಲೇ ಮೇ-ಜೂನ್-ಜುಲೈ ಮೂರು ತಿಂಗಳ ಅನುದಾನ ಬಿಡುಗಡೆಗೆ ಇಲಾಖೆ ಮನವಿ ಮಾಡಲಾಗಿದ್ದರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮನವಿಗೆ ಸರ್ಕಾರಕ್ಕೆ ಸ್ಪಂದಿಸಿಲ್ಲ.
ಹೀಗಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಆದ್ರೆ ಮಾತ್ರ ಪಾವತಿ ಇಲ್ಲವಾದಲ್ಲಿ ಈ ತಿಂಗಳೂ ಹಣ ಯಾರೊಬ್ಬರಿಗೂ ಗೃಹಲಕ್ಷ್ಮಿ ಸೇರೋದಿಲ್ಲ ಅನ್ನೋದು ಇಲಾಖೆಯ ಅಧಿಕಾರಿಗಳ ಆಫ್ ದ್ ರೆಕಾರ್ಡ್ ಮಾಹಿತಿ. ಇದುವರೆಗೆ 1.10 ಕೋಟಿ ಗೃಹಲಕ್ಷ್ಮಿಯರಿಗೆ 116826031 ಹಣ ಬಿಡುಗಡೆಯಾಗಿದೆ. ಈ ಪೈಕಿ 114876838 ಹಣ ಫಲಾನುಭವಿಗಳನ್ನು ತಲುಪಿದ್ದು, ಉಳಿದ 1949193 ಹಣ ತಾಂತ್ರಿಕ ಸಮಸ್ಯೆ ಸೇರಿದಂತೆ ಇತರೆ ಕಾರಣಗಳಿಗೆ ವಿತರಣೆ ಆಗದೇ ಇಲಾಖೆಗೆ ವಾಪಸ್ ಬಂದಿದೆ.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದ್ಯಾ ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್

ಈ ಮೊದಲು ಗೃಹಲಕ್ಷ್ಮಿ ಯೋಜನೆಗೆ ಸರಕಾರ 4500 ಕೋಟಿ ಅನುದಾನ ಬಿಡುಗಡೆಮಾಡುತ್ತಿತ್ತು. ಪ್ರತಿ ತಿಂಗಳು 2100 ಕೋಟಿ ಹಣ ಡಿಬಿಟಿ ಮೂಲಕ ಜಮೆಯಾಗುತ್ತಿತ್ತು. ಇದುವರೆಗೆ ರಾಜ್ಯದಲ್ಲಿ 1.16 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿಯಾಗಿದ್ದು, ಈ ಪೈಕಿ ಅರ್ಹ 1.3 ಕೋಟಿ ಫಲಾನುಗಳಿಗೆ ಎರಡು ಸಾವಿರ ಹಣ ಕೊಡುತ್ತ ಬರಲಾಗಿದೆ .
ಇದನ್ನೂ ಓದಿ : 3 ಲಕ್ಷ ಬಿಪಿಎಲ್ ಕಾರ್ಡ್ ರದ್ದು: ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ಯಾ ಚೆಕ್ ಮಾಡಿ
ತಾಂತ್ರಿಕ ಸಮಸ್ಯೆಗಳ ಅಗರ
- ಸರ್ಕಾರ ಆರಂಭಿಸಿದ ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿಸಿಕೊಳ್ಳಲು ಗೃಹಿಣಿಯರಿಗೆ ನೊರೆಂಟು ತಾಂತ್ರಿಕ ಸಮಸ್ಯೆ ಇದೆ.
- NPCI inactive – ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಲಿಂಕ್ ಆಗದೇ ಇರುವುದು
- Payment failed – ಫಲಾನುಭವಿ ಹೆಸರು, ತಂದೆತಾಯಿ, ಗಂಡ ಹೆಸರು ಮ್ಯಾಚ್ ಆಗದೇ ಹಣ ವರ್ಗಾವಣೆ ಆಗದೇ ಇರುವುದು
- K2 – ಖಜಾನೆ 2 – ರಾಜ್ಯ ಸರಕಾರ ಹಣ ವರ್ಗಾವಣೆ ಬಳಸುವ ತಂತ್ರಾಂಶ
- K2 DDO Rejected – ಖಜಾನ 2 ಡ್ರಾಯಿಂಗ್ ಆಫೀಸರ್ (DDO) ಫಲಾನುಭವಿ ಪರಿಶೀಲನೆ ವೇಳೆ ತಿರಸ್ಕರಿಸಿದ ಹಣ
- DBT DDO Rejected – ಡಿಬಿಟಿ ಮಾಡುವ ವೇಳೆ ತಾಂತ್ರಿಕ ಕಾರಣಗಳಿಂದ ರಿಜೆಕ್ಟ್ ಆದ ಮೊತ್ತ
ಇದೆಲ್ಲದಕ್ಕಿಂತ ಮುಖ್ಯವಾಗಿ ಈಗ ಸರ್ಕಾರ ಜೂನ್ ತಿಂಗಳಿನಿಂದ ನಿಧಾನಕ್ಕೆ ಗೃಹಲಕ್ಷ್ಮೀ ಅನುದಾನ ಹಂಚಿಕೆ ವಿಳಂಬ ಹಾಗೂ ಪ್ರಮಾಣ ಕಡಿಮೆ ಮಾಡುತ್ತ ಬಂದೂ ಕಾಲಕ್ರಮೇಣ ಯೋಜನೆಯನ್ನು ನಿಲ್ಲಿಸುವ ಲೆಕ್ಕಾಚಾರದಲ್ಲಿದ್ದು, ಅದಕ್ಕಾಗಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಾಮಮಾರ್ಗ ಅನುಸರಿಸುತ್ತಿದೆ ಎಂಬ ಆರೋಪ ವಿಪಕ್ಷಗಳಿಂದ ಕೇಳಿಬಂದಿದೆ.
Gruha Lakshmi Scheme Money for the Month of June has not Arrived ? here is Reason