Gruha Lakshmi Scheme : ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಕರ್ನಾಟಕದಲ್ಲಿನ ಕೋಟ್ಯಾಂತರ ಮಹಿಳೆಯರು ಪಡೆಯುತ್ತಿದ್ದಾರೆ. ಯೋಜನೆ ಆರಂಭಗೊಂಡು ವರ್ಷ ಕಳೆಯುತ್ತಾ ಬಂದರೂ ಕೂಡ ಕೆಲವರು ಮಹಿಳೆಯರಿಗೆ ಈ ಯೋಜನೆಯ ಲಾಭ ದೊರೆತಿಲ್ಲ. ಈ ನಡುವಲ್ಲೇ ಗೃಹಲಕ್ಷ್ಮೀಯರಿಗೆ ಸರಕಾರ ಗುಡ್‌ನ್ಯೂಸ್ ಕೊಟ್ಟಿದ್ದು, ಯೋಜನೆಯಡಿ ಗೃಹಿಣಿಯರ ಖಾತೆ ( Bank Savings Account) ಗೆ 400ರೂಪಾಯಿ ಜಮೆ ಆಗಲಿದೆ.

ಕರ್ನಾಟಕ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಸಕ್ಸಸ್ ಕಂಡಿದೆ. ಎಪಿಎಲ್, ಬಿಪಿಎಲ್ ಕುಟುಂಬದ ಹಿರಿಯ ಯಜಮಾನಿಗೆ ಈ ಯೋಜನೆಯ ಲಾಭ ದೊರಕುತ್ತಿದೆ. ರಾಜ್ಯದಲ್ಲಿ ಸುಮಾರು 1 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು 2000 ರೂಪಾಯಿ ಪ್ರಯೋಜನ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದ್ಯಾ ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಮಂದಿಗೆ ಇಂದಿಗೂ ಈ ಯೋಜನೆಯ ಪ್ರಯೋಜನ ಸಿಕ್ಕಿಲ್ಲ. ಅಷ್ಟೇ ಅಲ್ಲದೇ ಕೆಲವು ಗೃಹಿಣಿಯರಿಗೆ ಇನ್ನೂ 8, 9, 10 ನೇ ಕಂತಿನ ಹಣವೂ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ನಡುವಲ್ಲೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 11 ಮತ್ತು 12 ನೇ ಕಂತಿನ ಹಣ ಜಮೆ ಆಗಬೇಕಾಗಿದೆ.
ಕರ್ನಾಟಕ ರಾಜ್ಯ 16 ಜಿಲ್ಲೆಗಳಿಗೆ ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆಯ ಕಾರ್ಯ ನಡೆಯುತ್ತಿದೆ. ಮೊದಲ ಹಂತದಲ್ಲಿ 16 ಜಿಲ್ಲೆಗಳಿಗೆ ನೀಡಿದ ನಂತರ ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಹಂಚಿಕೆ ಮಾಡಲು ಸರಕಾರ ಸಿದ್ದತೆ ನಡೆಸಿದೆ.
ಇದನ್ನೂ ಓದಿ : Gruha Lakshmi Yojana : ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗಿಲ್ವಾ : ಚಿಂತೆ ಬಿಡಿ ಎನ್‌ಪಿಸಿಐ ಚೆಕ್ ಮಾಡಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಯಾವುದೇ ಮಹಿಳೆಯರು ಆತಂಕಕ್ಕೆ ಒಳಗಾಗುವುದು ಬೇಡ. ಬಾಕಿ ಇರುವ ಹಣ ಪ್ರತಿಯೊಬ್ಬರ ಖಾತೆಗೂ ಜಮೆ ಆಗಲಿದೆ. 11 ಮತ್ತು 12 ನೇ ಕಂತಿನ ಹಣ ವರ್ಗಾವಣೆ ಮಾಡುವ ವೇಳೆಯಲ್ಲಿ ಬಾಕಿ ಉಳಿದಿರುವ ಹಣವೂ ಕೂಡ ವರ್ಗಾವಣೆ ಆಗಲಿದೆ ಎಂದಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಈ ಜಿಲ್ಲೆಗಳಿಗೆ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು ಪಟ್ಟಿಯಲ್ಲಿದ್ಯಾ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈ ಬಾರಿ 11 ಮತ್ತು 12 ನೇ ಕಂತಿನ ಹಣ ಒಟ್ಟಿಗೆ ಮಹಿಳೆಯರ ಖಾತೆಗೆ ಜಮೆ ಆಗಲಿದ್ದು, ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ 4ಸಾವಿರ ರೂಪಾಯಿ ಹಣ ದೊರೆಯಲಿದೆ. ಇನ್ನು ಉಳಿದ ಕಂತುಗಳು ಜಮೆ ಆಗದೇ ಇರುವುದಕ್ಕೆ ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿದ್ದಾರೆ. ಅಲ್ಲದೇ ರೇಷನ್ ಕಾರ್ಡ್ ಇಕೆವೈಸಿ ಮಾಡಿಸದೇ ಇರುವುದರಿಂದ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ
ಪ್ರಮುಖವಾಗಿ 10 ವರ್ಷದ ಹಳೆಯ ಆಧಾರ್ ಕಾರ್ಡ್ ಅನ್ನು ಹಲವು ಅಪ್ಡೇಟ್ಸ್ ಮಾಡಿಲ್ಲ. ಅಲ್ಲದೇ ರೇಷನ್ ಕಾರ್ಡ್ ಇಕೆವೈಸಿ ಮಾಡಿಸದೇ ಇರುವ ಜೊತೆಗೆ ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರು ಹಾಗೂ ಬ್ಯಾಂಕ್ ಖಾತೆಯ ಹೆಸರು ತಾಳೆ ಆಗದೇ ಇರುವುದು ಗೃಹಿಣಿಯರಿಗೆ ಹಣ ವಿಳಂಭವಾಗೋದಕ್ಕೆ ಕಾರಣ ಎನ್ನಲಾಗುತ್ತಿದೆ. ಹಣ ಬಾರದೇ ಇರುವವರು ಒಮ್ಮೆ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
Gruha Lakshmi Scheme You will get 4000 rupees, Complete this task without fail