Gruha Lakshmi Yojana : ಬೆಂಗಳೂರು : ಕಾಂಗ್ರೆಸ್ ಸರಕಾರ ಮಹತ್ವಾಕಾಂಕ್ಷಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ಎರಡು ಕಂತಿನ ಹಣ ಇನ್ನೂ ಜಮೆ ಆಗಿಲ್ಲ. ಇದರಿಂದಾಗಿ ಹಣ ಸಿಗುತ್ತೋ ಇಲ್ಲವೋ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಈ ನಡುವಲ್ಲೇ ಸರಕಾರ ಮಹತ್ವದ ಮಾಹಿತಿಯನ್ನು ನೀಡಿದ್ದು, ಈ ದಿನದಂದು ನಿಮ್ಮ ಖಾತೆಗೆ ಹಣ ಜಮೆ ಆಗೋದು ಖಚಿತ ಎನ್ನಲಾಗುತ್ತಿದೆ.

ಗೃಹಲಕ್ಷ್ಮೀ ಯೋಜನೆಯ ಜೂನ್, ಜುಲೈ ತಿಂಗಳ ಒಟ್ಟು 4000 ರೂಪಾಯಿ ಹಣ ಗೃಹಿಣಿಯರ ಖಾತೆಗೆ ಜಮೆ ಆಗೋದಕ್ಕೆ ಬಾಕಿ ಇದೆ. ಈ ನಡುವಲ್ಲೇ ಅಗಸ್ಟ್ ತಿಂಗಳ ಹಣ ಸಿಗುತ್ತೋ ಇಲ್ಲವೋ ಅನ್ನೋ ಗೊಂದಲ ಮಹಿಳೆಯರನ್ನು ಕಾಡುತ್ತಿದೆ. ಈ ನಡುವಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಈ ಹಿಂದೆಯೇ ಹಣ ವರ್ಗಾವಣೆ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಎರಡು ತಿಂಗಳಿನಿಂದಲೂ ಹಣವನ್ನು ಗೃಹಿಣಿಯರ ಖಾತೆಗೆ ವರ್ಗಾಯಿಸಿಲ್ಲ. ಇದೀಗ ಸ್ವಾತಂತ್ರ್ಯೋತ್ಸವದ ನಂತರದಲ್ಲಿ ಎದುರಾಗುವ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲೇ ಗೃಹಲಕ್ಷ್ಮೀ ಯೋಜನೆಯ ಹಣ ಖಾತೆಗೆ ಜಮೆ ಆಗುತ್ತೆ ಅಂತಾ ಹೇಳಲಾಗುತ್ತಿದೆ.
ಇದನ್ನೂ ಓದಿ : ಮಹಿಳೆಯರಿಗೆ ಸಿಗಲಿದೆ 5000 ರೂ. ; ಹೊಸ ಯೋಜನೆ ಘೋಷಿಸಿದ ಪ್ರಧಾನ ನರೇಂದ್ರ ಮೋದಿ
ಲೋಕಸಭಾ ಚುನಾವಣೆಯ ಹೊತ್ತಲ್ಲೇ ಗೃಹಿಣಿಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ವರ್ಗಾವಣೆ ಮಾಡಲಾಗಿತ್ತು. ಆದರೆ ನಂತರದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿಲ್ಲ. ಆದ್ರೀಗ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ನೀಡಲು ಸರಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಈ ಹಿಂದೆ ಜುಲೈ ಅಂತ್ಯದಲ್ಲಿ ಅಥವಾ ಅಗಸ್ಟ್ ಮೊದಲ ವಾರ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುತ್ತೆ ಅಂತಾ ಹೇಳಲಾಗಿತ್ತು. ಆದ್ರೆ ಅಗಸ್ಟ್ ಅರ್ಧ ತಿಂಗಳು ಕಳೆದರೂ ಕೂಡ ಹಣ ಮಾತ್ರ ಸಿಕ್ಕಿಲ್ಲ. ಇನ್ನು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಈ ಬಾರಿ ಎರಡು ತಿಂಗಳ ಹಣ ಒಟ್ಟಿಗೆ ಜಮೆ ಆಗಲಿದೆ ಎನ್ನಲಾಗುತ್ತಿದೆ. ಜೂನ್ ಮತ್ತು ಜುಲೈ ತಿಂಗಳ ಒಟ್ಟು ೪೦೦೦ ರೂಪಾಯಿ ವರಮಹಾಲಕ್ಷ್ಮೀ ಹಬ್ಬದ ಗಿಫ್ಟ್ ಆಗಿ ಸಿಗೋದು ಬಹುತೇಕ ಫಿಕ್ಸ್.
ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ
Gruha Lakshmi Yojana 4000rs When will you get it ? big update