Gruha Lakshmi Yojana : ಗೃಹಲಕ್ಷ್ಮೀ ಯೋಜನೆಯ ಮೂಲಕ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2 ಸಾವಿರ ರೂಪಾಯಿ ಹಣ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. ಆದ್ರೆ ಇದುವರೆಗೆ ಹಣ ಪಡೆದು ಕೊಂಡ ಎಲ್ಲರಿಗೂ ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ. ಅದ್ರಲ್ಲೂ ಯೋಜನೆಗೆ ಅರ್ಜಿ ಸಲ್ಲಿಸಿದ 80 ಸಾವಿರ ಮಹಿಳೆಯರ ಅರ್ಜಿ ತಿರಸ್ಕಾರಗೊಂಡಿದೆ.

ಕರ್ನಾಟಕದಲ್ಲಿ ಸುಮಾರು ಈಗಾಗಲೇ ಗೃಹಲಕ್ಷ್ಮೀ ಯೋಜನೆಯ ಮೂಲಕ ಹಣವನ್ನು ಪಡೆದುಕೊಂಡಿರುವ 26 ಸಾವಿರ ಮಹಿಳೆಯರ ಖಾತೆಗೆ ಇನ್ಮುಂದೆ ಹಣ ಜಮೆ ಆಗೋದಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿದ್ದರೂ ಕೂಡ ಸುಮಾರು 14 ಸಾವಿರ ಮಂದಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ (DBT) ಮಾಡುವ ಮೂಲಕ ಹಣವನ್ನು ಪಡೆದುಕೊಂಡಿದ್ದರು. ಆದರೆ ಇನ್ಮುಂದೆ ಇಂತಹ ಮಹಿಳೆಯರ ಖಾತೆಗೆ ಹಣ ಜಮೆ ಆಗೋದಿಲ್ಲ.
ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ! ಮೇ 1 ರಿಂದ ಬದಲಾಗಲಿದೆ ಈ 10 ರೂಲ್ಸ್
ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿ ಮಾಡುವವರು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಪಡೆಯೋದಿಲ್ಲ ಎಂದು ಮೊದಲೇ ಸೂಚಿಸಲಾಗಿತ್ತು. ಆದರೂ ಕೂಡ 80 ಸಾವಿರಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿರುವುದು ಇದೀಗ ದಾಖಲೆಗಳಿಂದ ಬಯಲಾಗಿದೆ. ಇದೇ ಕಾರಣಕ್ಕೆ ಇನ್ಮುಂದೆ ಈ ಮಹಿಳೆಯರ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಮಾನ್ಯವಾಗುವುದಿಲ್ಲ.
ಇದನ್ನೂ ಓದಿ : PM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ ರೂಪಾಯಿ
ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿರುವ ಮಹಿಳೆಯರ ಎಲ್ಲಾ ದಾಖಲಾತಿಗಳು ಸರಿಯಾಗಿದ್ರೆ ಅಂತಹ ಮಹಿಳೆಯರಿಗೆ ಯಾವುದೇ ಸಮಸ್ಯೆಯಿಲ್ಲದೇ ಹಣ ಜಮೆ ಆಗಲಿದೆ. ಒಂದೊಮ್ಮೆ ಅರ್ಜಿಯಲ್ಲಿಯೇ ಸಮಸ್ಯೆಗಳು ಇದ್ದಲ್ಲಿ, ಅಂತಹ ಮಹಿಳೆಯರ ಖಾತೆಗೆ ಹಣ ಜಮೆ ಆಗೋದಿಲ್ಲ.

ಇದನ್ನೂ ಓದಿ : 40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಬಾರದೇ ಇರುವ ಮಹಿಳೆಯರು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸುವುದು ಒಳಿತು. ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದು, ನಿಮಗೆ ಹಣ ಸಿಗದೇ ಇದ್ದಲ್ಲಿ ನೀವು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರನ್ನು ಕೂಡ ಸಂಪರ್ಕ ಮಾಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
Gruha Lakshmi Yojana 80 thousand applications rejected: Only if your name is in this list, you will get money