ಶನಿವಾರ, ಜೂನ್ 14, 2025
Homebusinessಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ? ಹೀಗೆ ಚೆಕ್‌ ಮಾಡಿ

ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಖಾತೆಗೆ ಜಮೆ ಆಗಿದ್ಯಾ ? ಹೀಗೆ ಚೆಕ್‌ ಮಾಡಿ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಡಿಬಿಟಿ ಚೆಕ್ ಮಾಡುವ ಮೂಲಕ ಹಣ ಜಮೆ ಆಗಿರುವ ಕುರಿತು ಖಚಿತತೆ ಪಡೆಯಬಹುದಾಗಿದೆ. ಹಾಗಾದ್ರೆ ಡಿಬಿಟಿ ಚೆಕ್‌ ಮಾಡುವುದು ಹೇಗೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ.

- Advertisement -

Gruhalakshmi DBT Status : ಕರ್ನಾಟಕ ಸರಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಗೆ (Gruhalakshmi Scheme ) ಸಂಬಂಧಿಸಿದಂತೆ ಗೃಹಿಣಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಬಾಕಿ ಇರುವ ಮೂರು ಕಂತುಗಳ ಪೈಕಿ ಈಗಾಗಲೇ ಡಿಸೆಂಬರ್‌ ತಿಂಗಳ ಗೃಹಲಕ್ಷ್ಮೀ ಹಣ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ. ಹಾಗಾದ್ರೆ ನಿಮ್ಮ ಖಾತೆಗೆ ಹಣ ಜಮೆ ಆಗಿದ್ಯಾ ಅನ್ನೋದನ್ನು ಮನೆಯಲ್ಲಿಯೇ ಕುಳಿತು ಚೆಕ್‌ ಮಾಡಿ.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತೀ ತಿಂಗಳು ಪ್ರತೀ ಕುಟುಂಬದ ಗೃಹಿಣಿಯರ ಬ್ಯಾಂಕ್ ಖಾತೆಗೆ 2000 ರೂಪಾಯಿಯನ್ನು ನೇರ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಕರ್ನಾಟಕದ ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಆದರೆ ಕಳೆದ ಡಿಸೆಂಬರ್‌ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗಿರಲಿಲ್ಲ. ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ಸೇರಿದಂತೆ ಒಟ್ಟು ಮೂರು ತಿಂಗಳಿನಿಂದ ಒಟ್ಟು 6000 ರೂಪಾಯಿ ಹಣ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಜಮೆ ಆಗಬೇಕಾಗಿತ್ತು. ಆದರೆ ಸರಕಾರ ಹಣವನ್ನು ವರ್ಗಾವಣೆ ಮಾಡಿರಲಿಲ್ಲ.

ಕರ್ನಾಟಕ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಒಂದು ಕಂತಿನ ಹಣವನ್ನು ಬಿಡುಗಡೆ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯ ಡಿಸೆಂಬರ್‌ ತಿಂಗಳ ಹಣ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ.

ಡಿಸೆಂಬರ್‌ ತಿಂಗಳ ಹಣ ಜಮೆ ಆದ ಬೆನ್ನಲ್ಲೇ ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಕೂಡ ಬಿಡುಗಡೆ ಆಗಲಿದೆ. ಸದ್ಯಕ್ಕೆ ಒಂದು ಕಂತಿನ ಹಣ ಮಾತ್ರ ಗೃಹಿಣಿಯರಿಗೆ ಸಿಗಲಿದೆ. ಒಟ್ಟಿಗೆ ಮೂರು ತಿಂಗಳ ಹಣ ಜಮೆ ಆಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದವರಿಗೆ ಸದ್ಯಕ್ಕೆ ನಿರಾಸೆ ಆಗಿದೆ. ಆದರೆ ಒಂದು ಕಂತು ಬಿಡುಗಡೆ ಆಗಿರುವುದು ಖುಷಿಕೊಟ್ಟಿದೆ.

ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿದ್ಯಾ ಅನ್ನೋದನ್ನು ಖಚಿತ ಪಡಿಸಿಕೊಳ್ಳುವುದು ಹೇಗೆ ? ನೀವು ನಿಮ್ಮ ಬ್ಯಾಂಕ್‌ ಶಾಖೆಗೆ ತೆರಳಿ ಖಾತೆಗೆ ಹಣ ಬಂದಿದ್ಯಾ ಅನ್ನೋದನ್ನು ಖಚಿತ ಪಡಿಸಿಕೊಳ್ಳಬಹುದು. ಆದರೆ ಬ್ಯಾಂಕಿಗೆ ತೆರಳದೇ ಮನೆಯಲ್ಲಿಯೇ ಕುಳಿತು ಕೂಡ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿರುವ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಡಿಬಿಟಿ ಚೆಕ್ ಮಾಡುವ ಮೂಲಕ ಹಣ ಜಮೆ ಆಗಿರುವ ಕುರಿತು ಖಚಿತತೆ ಪಡೆಯಬಹುದಾಗಿದೆ. ಹಾಗಾದ್ರೆ ಡಿಬಿಟಿ ಚೆಕ್‌ ಮಾಡುವುದು ಹೇಗೆ ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ ನೋಡಿ.

Also Read : ಗೃಹ ಲಕ್ಷ್ಮಿ ಹಣ ಜಮೆ ಯಾವಾಗ ? ಗುಡ್‌ನ್ಯೂಸ್‌ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Gruhalakshmi DBT Status Check ಮಾಡುವುದು ಹೇಗೆ ?

  • ಗೃಹಲಕ್ಷ್ಮೀ ಯೋಜನೆ ಜಮೆಯ ವಿವರ ತಿಳಿಯಲು ಮೊದಲು ಡಿಬಿಟಿ ಕರ್ನಾಟಕ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
  • ಆಪ್‌ ಓಪನ್‌ ಮಾಡಿದ ನಂತರದಲ್ಲಿ ನಿಮ್ಮ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಮೂದಿಸಿ. ಮೇಲೆ ಕ್ಲಿಕ್‌ ಮಾಡಬೇಕು.
  • ಫಲಾನುಭವಿಗಳ ಆಧಾರ್‌ ಖಾತೆಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ. ಆಪ್‌ನಲ್ಲಿ ಒಟಿಪಿ ನಮೂದಿಸಿ ವೆರಿಫೈ ಒಟಿಪಿ ಮೇಲೆ ಕ್ಲಿಕ್‌ ಮಾಡಿ.
  • ನಂತರ ಫಲಾನುಭವಿಗಳ ವೈಯಕ್ತಿಕ ವಿವರ ದೊರೆಯಲಿದೆ. ಮೊಬೈಲ್‌ ಸಂಖ್ಯೆ ಎಂಟರ್‌ಮಾಡಲು ಆಧಾರ್‌ ಗೆ ಲಿಂಕ್‌ ಆಗಿರುವ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಓಕೆ ಬಟನ್‌ ಕ್ಲಿಕ್‌ ಮಾಡಿ
  • ನಂತರ Create mPIN ಎಂದಿರುತ್ತದೆ. ನಿಮಗೆ ನೆಮಪಿನಲ್ಲಿ ಇರುವ ನಾಲ್ಕು ಅಂಕಿಗಳ mPIN ಎಂಟರ್‌ ಮಾಡಿ, ನಂತರ Submit Button ಮೇಲೆ ಕ್ಲಿಕ್‌ ಮಾಡಿ.
  • ನಂತರ ನಿಮಗೆ ಕಾಣಿಸುವ Select Beneficiary ಮೇಲೆ ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಬಹುದು.
  • ನಂತರದಲ್ಲಿ ನೀವು Create ಮಾಡಿರುವ MPIN ಎಂಟರ್‌ ಮಾಡುವ ಮೂಲಕ Login ಮಾಡಿ.
  • Payment Status ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
  • ನಂತರ Gruhalakshmi DBT Status Check ಎಂಬ ಆಯ್ಕೆಯ ಮೇಳೆ ಕ್ಲಿಕ್‌ ಮಾಡುವ ಮೂಲಕ ನೀವು ಸಂಪೂರ್ಣವಾಗಿರುವ ಮಾಹಿತಿಯನ್ನು ಪಡೆಯಬಹುದು.

Also Read : ಪಡಿತರ ಕಾರ್ಡ್‌ ಇಕೆವೈಸಿ ಮಾಡಿಸಿದಿದ್ರೆ ರದ್ದಾಗುತ್ತೆ ನಿಮ್ಮ ಕಾರ್ಡ್‌

Gruhalakshmi Scheme Money deposited in your account? How To check Gruhalakshmi DBT Status

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular