ಗೃಹಲಕ್ಷ್ಮೀ ಯೋಜನೆಯ ಹಣ ಈ ಜಿಲ್ಲೆಗಳಿಗೆ ಬಿಡುಗಡೆ : ನಿಮ್ಮ ಜಿಲ್ಲೆಯ ಹೆಸರು ಪಟ್ಟಿಯಲ್ಲಿದ್ಯಾ ಚೆಕ್‌ ಮಾಡಿ

Gurha Lakshmi Scheme Pending Money Released  : ಕರ್ನಾಟಕ ಸರಕಾರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮೊದಲ ಕಂತಿನಲ್ಲಿ ಒಟ್ಟು 16 ಜಿಲ್ಲೆಗಳಲ್ಲಿ 11 ಮತ್ತು 12 ನೇ ಕಂತಿನ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಉಳಿದ ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಹಣ ಬಿಡುಗಡೆ ಆಗಲಿದೆ.

Gurha Lakshmi Scheme Pending Money Released  : ಕರ್ನಾಟಕ ಸರಕಾರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮೊದಲ ಕಂತಿನಲ್ಲಿ ಒಟ್ಟು 16 ಜಿಲ್ಲೆಗಳಲ್ಲಿ 11 ಮತ್ತು 12 ನೇ ಕಂತಿನ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಉಳಿದ ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಹಣ ಬಿಡುಗಡೆ ಆಗಲಿದೆ. ಹಾಗಾದ್ರೆ ಯಾವ ಜಿಲ್ಲೆಗಳಿಗೆ ಮೊದಲ ಕಂತಿನಲ್ಲಿ ಗೃಹಲಕ್ಷ್ಮೀ ಯೋಜನೆಯ (Gruha Lakshmi Instalment) ಹಣ ಬಿಡುಗಡೆ ಆಗಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

Gurha Lakshmi Scheme Pending Money Released in Karnataka 16 district Check This List
Image Credit to Original Source

ಮಹಿಳೆಯರ ಸ್ವಾವಲಂಬನೆಗಾಗಿ ಆರಂಭಗೊಂಡಿರುವ ಗೃಹಲಕ್ಷ್ಮೀ ಯೋಜನೆ ಆರಂಭಗೊಂಡು 11 ತಿಂಗಳು ಕಳೆದಿದೆ. ಕರ್ನಾಟಕದಲ್ಲಿ ಒಟ್ಟು 1 ಕೋಟಿಗೂ ಅಧಿಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಪ್ರತಿ ತಿಂಗಳು ಮಹಿಳೆಯರ ಬ್ಯಾಂಕ್‌ ಖಾತೆಗೆ ( Bank Account) 2000 ರೂಪಾಯಿ ನೇರ ವರ್ಗಾವಣೆ ಆಗುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮೆ ಆಗಿದ್ಯಾ ? ಮನೆಯಲ್ಲಿಯೇ ಕುಳಿತು ಹೀಗೆ ಚೆಕ್‌

ಆದರೆ ಕಳೆದ ಕೆಲವು ತಿಂಗಳಿನಿಂದಲೂ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಿಲ್ಲ. ಚುನಾವಣೆಯ ಬೆನ್ನಲ್ಲೇ ಗೃಹಲಕ್ಷ್ಮೀ ಯೋಜನೆ ನಿಂತು ಹೋಗುತ್ತೆ ಅನ್ನೋ ಕುರಿತು ಚರ್ಚೆಗಳು ನಡೆದಿದ್ದವು. ಆದ್ರೆ ಈ ನಡುವಲ್ಲದೇ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಸಿಗಲಿದೆ 4000 ರೂ.: ತಪ್ಪದೇ ಈ ಕೆಲಸ ಮಾಡಿ ಮುಗಿಸಿ

ರಾಜ್ಯ ಸರಕಾರ ರಾಜ್ಯದಲ್ಲಿನ 16 ಜಿಲ್ಲೆಗಳಿಗೆ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಬಾಕಿ ಇರುವ 11 ಮತ್ತು 12 ನೇ ಕಂತಿನ ಹಣವನ್ನು ಜಮೆ ಮಾಡಲು ಮುಂದಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಮೈಸೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಕೋಲಾರ, ವಿಜಯಪುರ, ತುಮಕೂರು, ಕಲಬುರಗಿ, ಚಿತ್ರದುರ್ಗ ಜಿಲ್ಲೆಗಳಿಗೆ ಹಣ ಬಿಡುಗಡೆ ಆಗಲಿದೆ.

Gurha Lakshmi Scheme Pending Money Released in Karnataka 16 district Check This List
Image Credit to Original Source

ಇದನ್ನೂ ಓದಿ : Gruha Lakshmi Yojana : ಗೃಹಲಕ್ಷ್ಮೀ ಯೋಜನೆ ಹಣ ಜಮೆ ಆಗಿಲ್ವಾ : ಚಿಂತೆ ಬಿಡಿ ಎನ್‌ಪಿಸಿಐ ಚೆಕ್‌ ಮಾಡಿ

ಉಳಿದ ಜಿಲ್ಲೆಗಳಿಗೆ ಎರಡನೇ ಹಂತದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಹಲವರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಆಗಿದ್ದು, ಡಿಬಿಟಿ ಸ್ಟೇಟಸ್ ಮೂಲಕ ತಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಅನ್ನೋದನ್ನು ಚೆಕ್‌ ಮಾಡಿಕೊಳ್ಳಬಹುದಾಗಿದೆ.

Gurha Lakshmi Scheme Pending Money Released in Karnataka 16 district Check This List

Comments are closed.