ಮಂಗಳವಾರ, ಏಪ್ರಿಲ್ 29, 2025
HomebusinessHow to link Aadhar card and other Docs to Bank Accounts: ಬ್ಯಾಂಕ್‌...

How to link Aadhar card and other Docs to Bank Accounts: ಬ್ಯಾಂಕ್‌ ಖಾತೆಗಳೊಂದಿಗೆ ಆಧಾರ್‌ ಕಾರ್ಡ್‌, ಇತರ ದಾಖಲೆಗಳನ್ನು ಲಿಂಕ್‌ ಮಾಡುವುದು ಹೇಗೆ?

- Advertisement -

ಬ್ಯಾಂಕ್ ಖಾತೆ(Bank Account)ಗಳೊಂದಿಗೆ ಆಧಾರ್ ಕಾರ್ಡ್(Aadhar Card) ಹಾಗೂ ಇತರ ದಾಖಲೆ(Other Documents)ಗಳನ್ನು ಲಿಂಕ್ ಮಾಡುವುದನ್ನು ಸರಕಾರ ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ಅತ್ಯಂತ ಅಗತ್ಯದ ಗುರುತಿನ ಪುರಾವೆಗಳಲ್ಲಿ ಒಂದಾಗಿದೆ. ಆದ್ದರಿಂದ ಅದರಲ್ಲಿ ನಿಮ್ಮ ಆಕ್ಟಿವ್ ಮೊಬೈಲ್ ಸಂಖ್ಯೆ(Active Mobile Number)ಯನ್ನು ನೋಂದಾಯಿಸಲು ಅಥವಾ ಅಪ್ಡೇಟ್(Update) ಮಾಡಲು ಸಹ ಸಾಧ್ಯವಾಗುತ್ತದೆ.

ಒಂದು ವೇಳೆ ನೀವು ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ, ಅರ್ಜಿ ಸಲ್ಲಿಸಬಹುದು ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅದರೊಂದಿಗೆ ನೋಂದಾಯಿಸಿಕೊಳ್ಳಬಹುದು. ನಿಮ್ಮ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯು ಆಕ್ಟಿವ್ ಆಗಿದ್ದರೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಇತರ ವಿವರಗಳನ್ನು ಅಪ್ಡೇಟ್ ಮಾಡುವುದು ತುಂಬಾ ಸರಳವಾಗಿದೆ.

ನೀವು ಆನ್‌ಲೈನ್‌(Online)ನಲ್ಲಿ ಕೂಡ ವಿವರಗಳನ್ನು ನವೀಕರಿಸಬಹುದು. ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಸಕ್ರಿಯವಾಗಿಲ್ಲದಿದ್ದರೆ ಅಥವಾ ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ಹಳೆಯ ಎಸ್ ಎಸ್ ಯು ಪಿ (ಸ್ವಯಂ ಸೇವಾ ನವೀಕರಣ ಪೋರ್ಟಲ್) ಪೋರ್ಟಲ್ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೇರಿಸಲು/ಅಪ್‌ಡೇಟ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

ಈಗ, ನೀವು ಆಫ್‌ಲೈನ್ ಮಾರ್ಗದಲ್ಲಿ ಹೋದರೆ, ಅರ್ಜಿದಾರರು ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲು/ಅಪ್‌ಡೇಟ್ ಮಾಡಲು ಆಧಾರ್ ನೋಂದಣಿ/ಅಪ್‌ಡೇಟ್ ಕೇಂದ್ರಕ್ಕೆ ಭೇಟಿ ನೀಡಬೇಕು. ಸಂಪೂರ್ಣ ಪ್ರಕ್ರಿಯೆಯು 90 ದಿನಗಳವರೆಗೆ ತೆಗೆದುಕೊಳ್ಳಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೇರಿಸುವ ಹಂತಗಳನ್ನು ಸಹ ನಾವು ನಿಮಗೆ ಹೇಳುತ್ತೇವೆ.

ಹಂತ 1: ಮೊದಲು, ( UIDAI) ಅಧಿಕೃತ ವೆಬ್‌ಪುಟಕ್ಕೆ ಭೇಟಿ ನೀಡುವ ಮೂಲಕ ಹತ್ತಿರದ ದಾಖಲಾತಿ ಕೇಂದ್ರವನ್ನು ಹುಡುಕಿ ಅಥವಾ ಇಲ್ಲಿ ಕ್ಲಿಕ್ ಮಾಡಿ https://appointments.uidai.gov.in/easearch.aspx
ಹಂತ 2: ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದನ್ನು ಆಫ್‌ಲೈನ್‌ನಲ್ಲಿಯೂ ಮಾಡಬಹುದು. ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಆಧಾರ್ ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 3: ಮುಂದೆ, ಆಧಾರ್ ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನೀವು ಆಧಾರ್ ಕಾರ್ಡ್‌ನಲ್ಲಿ ಅಪ್ಡೇಟ್ ಮಾಡ ಬಯಸುವ ನಿಮ್ಮ ಆಕ್ಟಿವ್ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 4: ತಿದ್ದುಪಡಿ ಫಾರ್ಮ್ ಅನ್ನು ಸಲ್ಲಿಸಿ ಮತ್ತು ದೃಢೀಕರಣಕ್ಕಾಗಿ ನಿಮ್ಮ ಬಯೋಮೆಟ್ರಿಕ್ಸ್ ಅನ್ನು ಒದಗಿಸಿ
ಹಂತ 5: ಒಮ್ಮೆ ಮಾಡಿದ ನಂತರ, ಕಾರ್ಯನಿರ್ವಾಹಕರಿಂದ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ (URN) ಅನ್ನು ಒಳಗೊಂಡಿರುವ ಸ್ವೀಕೃತಿ ಸ್ಲಿಪ್ ಅನ್ನು ಪಡೆಯಿರಿ.
ಹಂತ 6: ಆಧಾರ್ ನವೀಕರಣದ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಇದನ್ನು ಬಳಸಬಹುದು.
ಹಂತ 7: ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ನೋಂದಾಯಿಸಿದ ನಂತರ, ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ವಿವರಗಳು/ದಾಖಲೆಗಳ ಪರಿಶೀಲನೆಗಾಗಿ ನೀವು ಓಟಿಪಿಗಳನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.
ಹಂತ 8: ಯು ಐ ಡಿ ಎ ಐ ನ ಟೋಲ್-ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕ ನಿಮ್ಮ ಆಧಾರ್ ನವೀಕರಣ ಸಹ ನೀವು ಪರಿಶೀಲಿಸಬಹುದು.

ಆನ್‌ಲೈನ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಹೇಗೆ ಲಿಂಕ್ ಮಾಡುವುದು?

ಹಂತ 1: ನಿಮ್ಮ ಟೆಲಿಕಾಂ ಆಪರೇಟರ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ ಅಂದರೆ, ವೊಡಾಫೋನ್, ಏರ್‌ಟೆಲ್, ಜಿಯೋ ಇತ್ಯಾದಿ.
ಹಂತ 2: ಆಧಾರ್ ಕಾರ್ಡ್ ಟ್ಯಾಬ್‌ನೊಂದಿಗೆ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು/ಲಿಂಕ್ ಮಾಡಲು ಹೋಗಿ ಮತ್ತು ನೀವು ಆಧಾರ್‌ನೊಂದಿಗೆ ನವೀಕರಿಸಲು ಅಥವಾ ಪರಿಶೀಲಿಸಲು ಬಯಸುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಒಮ್ಮೆ ನೀವು ಸಂಖ್ಯೆಯನ್ನು ಸಲ್ಲಿಸಿದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ.
ಹಂತ 4: ಒಟಿಪಿಅನ್ನು ಪರಿಶೀಲಿಸಿ ಮತ್ತು ನೀವು ಸ್ಕ್ರೀನ್ ಮೇಲೆ ಸಂದೇಶವನ್ನು ಪಡೆಯುತ್ತೀರಿ.
ಹಂತ 5: 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಹಂತ 6: ಟೆಲಿಕಾಂ ಆಪರೇಟರ್ ಒಟಿಪಿ ಉತ್ಪಾದನೆಗೆ ಸಂದೇಶವನ್ನು ಮತ್ತು ಇ-ಕೆವೈಸಿ ವಿವರಗಳ ಬಗ್ಗೆ ಸಮ್ಮತಿ ಸಂದೇಶವನ್ನು ಕಳುಹಿಸುತ್ತದೆ.
ಹಂತ 7: ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ ಮತ್ತು ಒಟಿಪಿ ಅನ್ನು ನಮೂದಿಸಿ. ನೀವು ಆಧಾರ್ ಮತ್ತು ಫೋನ್ ಸಂಖ್ಯೆ ಮರು ಪರಿಶೀಲನೆಯ ಕುರಿತು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.

ಇದನ್ನೂ ಓದಿ:e-KYC ಎಂದರೇನು? ಸರಳವಾಗಿ ಇದನ್ನು ಪಡೆಯುವುದು ಹೇಗೆ?

ಇದನ್ನೂ ಓದಿ: How to Download Aadhar Card: ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

(How to link Aadhar card and other Docs to Bank Accounts)

RELATED ARTICLES

Most Popular