ಇ-ಕೆವೈಸಿ (e-KYC) ಅಂದರೆ ನಿಮ್ಮ ಗ್ರಾಹಕರನ್ನು ತಿಳಿಯಿರಿ (Know Your Customer) ಎಂದರ್ಥ. ಇ-ಕೆವೈಸಿಯನ್ನು ಕೆಲವು ಹಂತಗಳನ್ನು ಅನುಸರಿಸಿ ನಾವು ಸಹ ಪಡೆದುಕೊಳ್ಳಬಹುದು. ಅಂದಹಾಗೆ ಇ-ಕೆವೈಸಿಯನ್ನು ಪಡೆದುಕೊಳ್ಳಲು ಆಧಾರ ಕಾರ್ಡ್, ಪಾನ್ ಕಾರ್ಡ್ (Aadhar Card ಮುಂತಾದ ದಾಖಲೆಗಳ ನಕಲುಗಳನ್ನು ನಾವು ಗ್ರಾಹಕರಾಗಿರುವ ಸಂಸ್ಥೆಗೆ ನೀಡಬೇಕು. ಇ-ಕೆವೈಸಿಯನ್ನು ಮಾಡುವುದು ಹೆಗೆ ಎಂದು ಇಲ್ಲಿ ವಿವರಿಸಲಾಗಿದೆ.
ಸಹಜವಾಗಿ ಸರಕಾರದಿಂದ ಪಡೆಯುವ ಇತರ ಸಬ್ಸಿಡಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬೆಳೆವಿಮಾ ಪರಿಹಾರ ಇತ್ಯಾದಿ ಯೋಜನೆಯನ್ನು ಫಲಾನುಭವ ನಮ್ಮ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗುತ್ತಿರುವ ಕಾರಣ ನಮ್ಮ ಬ್ಯಾಂಕ್ ಖಾತೆಗಳ ದಾಖಲೆಗೆ e-KYC ಆಗಬೇಕಾಗುತ್ತದೆ. ಇ-ಕೆವೈಸಿ ಆಗದಿದ್ದಲ್ಲಿ ಸರ್ಕಾರದ ಹಲವು ಯೋಜನೆಗಳು ನಮ್ಮ ಅಕೌಂಟ್‌ಗೆ ಪಾವತಿಯಾಗುವುದು ತಡೆಹಿಡಿಯಲ್ಪಡುತ್ತವೆ. ನಮಗೆ ಹಲವಾರು ಬ್ಯಾಂಕ್ ಶಾಖೆಗಳಲ್ಲಿ ಖಾತೆಗಳಿದ್ದರೂ ಯಾವ ಬ್ಯಾಂಕ್ ಶಾಖೆಯ ಖಾತೆಗೆ ನಾವು ಕೊನೆಯ ಸಲ e-KYC ಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಖಾತೆಯ ದಾಖಲೆಗೆ ಜೋಡಣೆ ಮಾಡಿಸುತ್ತೇವೆಯೋ ಆ ಬ್ಯಾಂಕಿನ ನಮ್ಮ ಖಾತೆಗೆ ಸರಕಾರದ ಯೋಜನೆಗಳ ಫಲಾನುಭವ ನೇರವಾಗಿ ವರ್ಗಾವಣೆಯಾಗುತ್ತವೆ. ಸರಕಾರದಿಂದ ದೊರಕುವ ಸಬ್ಸಿಡಿ, ಮೊಬಲಗು, ಸಹಾಯ ಧನಗಳು, ಪ್ರಾಕೃತಿಕ ವಿಕೋಪ ಪರಿಹಾರ, ಫಸಲು ಭಿಮಾ ಪರಿಹಾರ ಇತ್ಯಾದಿಗಳ ಫಲಾನುಭವಿಗಳು ಅಗತ್ಯವಾಗಿ e-KYC ಮಾಡಿಸಲೇಬೇಕು. ಇದಕ್ಕೆ ಎಪಿಎಲ್, ಬಿಪಿಎಲ್ ಕಾರ್ಡ್‌ಗಳು ಅನ್ವಯಿಸುವುದಿಲ್ಲ. ಚಿಕ್ಕರೈತ, ಮಧ್ಯಮ ಹಂತದ ರೈತ, ದೊಡ್ಡರೈತ ಮುಂತಾದ ವರ್ಗೀಕರಣಗಳು ಕೂಡಾ ಅನ್ವಯಿಸುವುದಿಲ್ಲ. ಅಲ್ಲದೇ ಒಮ್ಮೆ ಇ-ಕೆವೈಸಿ ಮಾಡಿಸಿಕೊಂಡರೆ ಮತ್ತೆ ಮಾಡಿಸಬೇಕಿಲ್ಲ. ಈಗ ಭಾರತೀಯ ರಿಸರ್ವ್ ಬ್ಯಾಂಕ್ ಈ ಕಾರ್ಯ ಮಾಡಿಸಿಕೊಳ್ಳಲು ಅಂತಿಮ ಅವಧಿಯನ್ನು 2022 ರ ಮಾರ್ಚ್ 31 ರ ತನಕ ವಿಸ್ತರಿಸಿದೆ. ಈ ಅವಕಾಶವನ್ನು ಬಳಸಿಕೊಳ್ಳುವುದು ಸೂಕ್ತವಾಗಿದ್ದು ಕೆಲವೊಂದು ಸಂಸ್ಥೆಗಳು ಪಹಣಿ ನಕಲುಗಳನ್ನೂ ಕೇಳುತ್ತವೆ. ಅವುಗಳನ್ನೂ ಜೊತೆಯಲ್ಲಿರಿಸಿಕೊಂಡರೆ ಕೆಲಸ ಸುಲಭವಾಗುತ್ತದೆ. ಆದ ಕಾರಣ e-kyc ಬಾಕಿ ಉಳಿದವರು ಇದನ್ನು ಮಾಡಿಸಿಕೊಳ್ಳುವುದು ಹಿತಕರವಾಗಿದೆ.
ಉಳಿತಾಯ ಖಾತೆಗಳನ್ನು ಹೊಂದಿರುವ ಗ್ರಾಹಕರು 10 ವರ್ಷಕ್ಕೆ ಒಮ್ಮೆ ಕೆವೈಸಿ ಮಾಹಿತಿಯನ್ನು ನವೀಕರಿಸಬೇಕು. ಹೆಚ್ಚಿನ ಮೊತ್ತದ ವಹಿವಾಟು ನಡೆಸುವವರನ್ನು ಹೈರಿಸ್ಕ್ ಪ್ರೊಫೈಲ್ ಎಂದು ಪರಿಗಣಿಸಲಾಗುತ್ತದೆ. ಇಂಥ ಖಾತೆದಾರರು ಎರಡು ವರ್ಷಕ್ಕೊಮ್ಮೆ ಕೆವೈಸಿ ದಾಖಲೆ ಸಲ್ಲಿಸಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಹೊಸ ಸುತ್ತೋಲೆಯಲ್ಲಿ ತಿಳಿಸಿದೆ.
ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರ ಕುರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲದ ಕಾರಣ ಆರ್‌ಬಿಐ ಈ ಹಿಂದೆಯೇ ಇಂಥ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಿತ್ತು. ಆದರೆ, ಕೊರೊನಾ ಎರಡನೇ ಅಲೆಯ ಕಾರಣ ಇದನ್ನು ಮುಂದೂಡಿತ್ತು. ನಂತರದಲ್ಲಿ ಡಿಸೆಂಬರ್ 31ರೊಳಗೆ ಕೆವೈಸಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಬ್ಯಾಂಕ್‌ಗಳಿಗೆ ನೀಡಿತ್ತು.
ಇದನ್ನೂ ಓದಿ: 2022 Horoscope: ನಿಮ್ಮ 2022ರ ಭವಿಷ್ಯ ತಿಳಿದುಕೊಳ್ಳಿ, ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ಪದಾರ್ಪಣೆ ಮಾಡಿ
(How to makee-KYC here is the steps in Kannada)