ಸೋಮವಾರ, ಏಪ್ರಿಲ್ 28, 2025
HomebusinessPetrol, Diesel prices hike : ಮೂರು ದಿನಗಳಿಂದ ಗಗನದತ್ತ ಸಾಗುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ

Petrol, Diesel prices hike : ಮೂರು ದಿನಗಳಿಂದ ಗಗನದತ್ತ ಸಾಗುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ

- Advertisement -

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸಿದ್ದಾರೆ. ಆದರೀಗ ಮತ್ತೆ ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಳ ಕಂಡಿದ್ದು. ಈ ಮೂಲಕ ಶನಿವಾರ ತೈಲ ಬೆಲೆ ಹೊಸ ದಾಖಲೆಯನ್ನು ಬರೆದಿದೆ.

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಅಕ್ಟೋಬರ್ 2, 2021 ಇಂಧನ ದರಗಳನ್ನು ಪರಿಷ್ಕರಿಸಿವೆ ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ. ದೇಶದ ಅತಿದೊಡ್ಡ ಇಂಧನ ಚಿಲ್ಲರೆ ಮಾರಾಟಗಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಾರ, ಪೆಟ್ರೋಲ್ ಬೆಲೆ 25 ಪೈಸೆ ಮತ್ತು ಡೀಸೆಲ್ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಪ್ರತಿ ಲೀಟರ್ ಗೆ 30 ಪೈಸೆ ಏರಿಕೆಯಾಗಿದೆ.

ಇದನ್ನೂ ಓದಿ: Petrol Price Hike : ವಾಹನ ಸವಾರರಿಗೆ ಶಾಕ್‌ ಕೊಟ್ಟ ಪೆಟ್ರೋಲ್‌ : ಮತ್ತೆ ಏರಿಕೆಯಾಯ್ತು ತೈಲ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರಗಳು ಜಿಗಿದ ನಂತರ ಭಾರತದಲ್ಲೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಗೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 101.14 ರೂ.ಗೆ ಚಿಲ್ಲರೆ ಮಾರಾಟವಾಗುತ್ತಿದೆ ಮತ್ತು ಡೀಸೆಲ್ 90 ರೂ.ಗಳ ಗಡಿಯನ್ನು ದಾಟಿದೆ ಮತ್ತು ಪ್ರತಿ ಲೀಟರ್ ಗೆ 90.47 ರೂ.ಗೆ ಮಾರಾಟವಾಗುತ್ತಿದೆ.

ಭಾರತದ ಹಣಕಾಸು ಕೇಂದ್ರವಾದ ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 108.15 ರೂ.ಗಳಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 98.12 ರೂ.ಗಳಾಗಿದ್ದು, ಇದು ಎಲ್ಲಾ ನಾಲ್ಕು ಮೆಟ್ರೋ ನಗರಗಳಲ್ಲಿ ಅತಿ ಹೆಚ್ಚಿನ ಬೆಲೆ ಇದಾಗಿದೆ. ಅದೇ ರೀತಿ, ಚೆನ್ನೈನಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 99.76 ರೂ.ಗೆ ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 94.99 ರೂ.ಗೆ ಚಿಲ್ಲರೆ ಮಾರಾಟ ವಾಗುತ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 102.74ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 93.54 ರೂ.ಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: LPG PRICE HIKE : ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 43.5 ರೂ. ಹೆಚ್ಚಳ

(Petrol and diesel prices have been rising for three days in a row)

RELATED ARTICLES

Most Popular