ಸೋಮವಾರ, ಏಪ್ರಿಲ್ 28, 2025
HomebusinessTatkal Tractor Loan :  ಅನ್ನದಾತರಿಗೆ ಸಿಹಿ ಸುದ್ಧಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ‌

Tatkal Tractor Loan :  ಅನ್ನದಾತರಿಗೆ ಸಿಹಿ ಸುದ್ಧಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ‌

- Advertisement -

ನವದೆಹಲಿ : ರೈತರ ಕಷ್ಟ ರೈತರಿಗೆ ಮಾತ್ರ ಗೊತ್ತು. ರೈತರ ಸಂಕಷ್ಟ ಬಗೆಹರಿಹಾರಕ್ಕೆ SBI ಮುಂದಾಗಿದೆ.‌ ಕೃಷಿ ಕಾರ್ಯಕ್ಕಾಗಿ ಬಾಡಿಗೆ ಟ್ರ್ಯಾಕ್ಟರ್ ಪಡೆದು ಬೇಸತ್ತು ಹೊಸ ಟ್ರ್ಯಾಕ್ಟರ್ ಖರೀದಿಗೆ ಯೋಜಿಸುತ್ತಿರುವ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ.

ಹೌದು, ನಿಮಗೆ ಟ್ರ್ಯಾಕ್ಟರ್‌ ಖರೀದಿ ಆಸೆಯಿದ್ದು, ಹಣದ ಕೊರತೆಯಾಗಿದ್ರೆ, ದೇಶದ ಅತಿದೊಡ್ಡ ಸಾಲಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ರೈತರಿಗಾಗಿ ವಿಶೇಷ ಸಾಲ ಯೋಜನೆ ‘ತತ್ಕಾಲ್ ಟ್ರಾಕ್ಟರ್ ಸಾಲ'(Tatkal Tractor Loan) ಪರಿಚಯಿಸಿದೆ. ಇದರ ಅಡಿಯಲ್ಲಿ, ಟ್ರಾಕ್ಟರ್ ಇನ್ಶೂರೆನ್ಸ್(Tractor Insurance) ಮತ್ತು ನೋಂದಣಿ ಶುಲ್ಕ(Registration Fee) ಸೇರಿದಂತೆ ಟ್ರ್ಯಾಕ್ಟರ್ ವೆಚ್ಚದ 100% ವರೆಗೆ ಎಸ್ ಬಿಐ ಸಾಲವನ್ನ ನೀಡುತ್ತಿದೆ.

ಇದನ್ನೂ ಓದಿ: RBI ಹೊಸ ಹಣಕಾಸು ನೀತಿ : IMPS ವಹಿವಾಟು ನಿಯಮ ಬದಲಾವಣೆ

ಎಸ್‌ಬಿಐ ತತ್ಕಾಲ್ ಟ್ರಾಕ್ಟರ್ ಸಾಲವು ಕೃಷಿ ಅವಧಿಯ ಸಾಲವಾಗಿದೆ. ಟ್ರ್ಯಾಕ್ಟರ್ ಪರಿಕರಗಳ ವೆಚ್ಚವನ್ನು ಬ್ಯಾಂಕ್ ನೀಡುವ ಸಾಲದಲ್ಲಿ ಸೇರಿಸಲಾಗುವುದಿಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ರೈತರು 4 ರಿಂದ 5 ವರ್ಷಗಳಲ್ಲಿ ಟ್ರಾಕ್ಟರ್ ಸಾಲದಲ್ಲಿ ತೆಗೆದುಕೊಂಡ ಮೊತ್ತವನ್ನ ಬ್ಯಾಂಕಿಗೆ ಪಾವತಿಸಬಹುದಾಗಿದೆ. ಇನ್ನು ಬ್ಯಾಂಕಿನಿಂದ ಹಣಕಾಸು ಒದಗಿಸಿದ ಟ್ರಾಕ್ಟರ್ ಸಮಗ್ರ ವಿಮೆಯನ್ನ ಹೊಂದಿದೆ. 25/40/50 ಶೇಕಡಾ ( Invoice + Insurance + Registration ) ಮೊತ್ತವನ್ನು ಟ್ರ್ಯಾಕ್ಟರ್ ವೆಚ್ಚವನ್ನ TDR ನಲ್ಲಿ ಶೂನ್ಯ ದರದ ಠೇವಣಿ ಮಾಡಬೇಕು.

ಬ್ಯಾಂಕಿನಿಂದ ಹಣಕಾಸು ಒದಗಿಸಿದ ಟ್ರಾಕ್ಟರ್ ಸಾಲವನ್ನ ಮರುಪಾವತಿಸುವವರೆಗೆ ಬ್ಯಾಂಕಿನೊಂದಿಗೆ ಇರುತ್ತದೆ. ಅಂದರೆ, ಅದು ಒಂದು ರೀತಿಯಲ್ಲಿ ಅಡಮಾನವಾಗಿರುತ್ತದೆ. ಅಲ್ಲದೆ, ಮಾರ್ಜಿನ್ ಮನಿ ಎಂದು ಸ್ವೀಕರಿಸಿದ ಟಿಡಿಆರ್ ಮೇಲೆ ಬ್ಯಾಂಕ್ ಹಕ್ಕನ್ನ ಹೊಂದಿರುತ್ತದೆ. ಎಸ್‌ಬಿಐ ಸಾಲವನ್ನು ಪಡೆಯಲು : ತತ್ಕಾಲ್ ಟ್ರಾಕ್ಟರ್ ಸಾಲಕ್ಕಾಗಿ ನೀವು ಕನಿಷ್ಟ 2 ಎಕರೆ ಭೂಮಿಯನ್ನ ಹೊಂದಿರಬೇಕು. ಈ ಯೋಜನೆಯಡಿ ಎಲ್ಲ ರೈತರು ಬ್ಯಾಂಕಿನಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸಾಲದಲ್ಲಿ ಎಸ್‌ಬಿಐ ಉಲ್ಲೇಖಿಸಿದ ಸಂಬಂಧಿಗಳು ಮಾತ್ರ ಸಹ ಅರ್ಜಿದಾರರಾಗಬಹುದು.

ಇದನ್ನೂ ಓದಿ: Welcome back, Air India ಎಂದ ರತನ್‌ ಟಾಟಾ : 68 ವರ್ಷದ ಬಳಿಕ ಸಂಸ್ಥಾಪಕರ ಮಡಿಲಿಗೆ ಏರ್‌ ಇಂಡಿಯಾ

ಅರ್ಜಿಯೊಂದಿಗೆ ಅಗತ್ಯವಿರುವ ದಾಖಲೆಗಳು ; ಸಾಲಕ್ಕಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಇದರಲ್ಲಿ ಯಾವುದೇ ಡೀಲರ್‌ನಿಂದ ಟ್ರ್ಯಾಕ್ಟರ್‌ನ ಉಲ್ಲೇಖವನ್ನು ಸಹ ಹಾಕಿ. ಗುರುತಿನ ಪುರಾವೆಯಾಗಿ ವೋಟರ್ ಐಡಿ, ಪ್ಯಾನ್, ಪಾಸ್‌ಪೋರ್ಟ್, ಆಧಾರ್ ಅಥವಾ ಚಾಲನಾ ಪರವಾನಗಿ ಯಾವುದಾದರೂ ಒಂದು. ವಿಳಾಸ ದೃಢೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿಯಲ್ಲಿ ಒಂದು. ಇದಲ್ಲದೇ, ಸಾಗುವಳಿ ಮಾಡಬಹುದಾದ ಭೂಮಿಯ ಪುರಾವೆಗಳನ್ನು ಹಾಜರುಪಡಿಸಬೇಕು.

(State Bank of India gives sweet susstomy to farmers)

RELATED ARTICLES

Most Popular